Asianet Suvarna News Asianet Suvarna News

ರೈಲು ನಿಲ್ದಾಣದಲ್ಲಿ 3 ನಿಮಿಷ ಪೋರ್ನ್‌ ಪ್ಲೇ... ಮಕ್ಕಳ ಕರೆದುಕೊಂಡು ಓಡಿದ ಜನ

ಪಾಟ್ನಾದ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಅಶ್ಲೀಲ ವಿಡಿಯೋಗಳು ಪ್ಲೇ ಆಗಿದ್ದರಿಂದ ರೈಲು ನಿಲ್ದಾಣದಲ್ಲಿದ್ದ  ಪ್ರಯಾಣಿಕರು ಮುಜುಗರಕ್ಕೊಳಗಾಗಿ ಆ ಸ್ಥಳದಿಂದ ಓಡಿದ ಸ್ಥಿತಿ ನಿರ್ಮಾಣವಾಗಿತ್ತು.  

adult movie played in tv at Patna railway station, passenger started running with blush akb
Author
First Published Mar 20, 2023, 2:38 PM IST

ಪಾಟ್ನಾ: ಪಾಟ್ನಾದ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಅಶ್ಲೀಲ ವಿಡಿಯೋಗಳು ಪ್ಲೇ ಆಗಿದ್ದರಿಂದ ರೈಲು ನಿಲ್ದಾಣದಲ್ಲಿದ್ದ  ಪ್ರಯಾಣಿಕರು ಮುಜುಗರಕ್ಕೊಳಗಾಗಿ ಆ ಸ್ಥಳದಿಂದ ಓಡಿದ ಸ್ಥಿತಿ ನಿರ್ಮಾಣವಾಗಿತ್ತು.  ಪಾಟ್ನಾದ ರೈಲು ನಿಲ್ದಾಣದಲ್ಲಿ ಮೂರು ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ಲೇ ಆಗಿದೆ. ಇದರಿಂದ ಸಣ್ಣ ದೊಡ್ಡ ಮಕ್ಕಳನ್ನು ಕರೆದುಕೊಂಡು ಎಲ್ಲೋ ಹೋಗಲು ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಮುಜುಗರಕ್ಕೀಡಾದ ಘಟನೆ ನಡೆದಿದೆ. 

ಭಾನುವಾರ ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು,  ಇದನ್ನು ಗಮನಿಸಿದ ಅನೇಕ  ಜನರು ತಮ್ಮ ಮಕ್ಕಳನ್ನು ಕರೆದುಕೊಂಡು ಸ್ಥಳದಿಂದ ಬೇರೆಡೆಗೆ ಓಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ  ಪ್ರಯಾಣಿಕರು ಪ್ರಕರಣ ದಾಖಲಿಸಿದ್ದಾರೆ.  ಸರ್ಕಾರಿ ರೈಲ್ವೆ ಪೊಲೀಸರಿಗೆ ಹಾಗೂ ರೈಲ್ವೆ ರಕ್ಷಣಾ ಪಡೆಗೆ ಈ ಬಗ್ಗೆ ದೂರು ನೀಡಲಾಗಿದೆ. 

ಬೇಡವೆಂದರೂ ಬರ್ತಿವೆಯಾ ಅಶ್ಲೀಲ ಆಲೋಚನೆಗಳು? ಬುದ್ಧನ ಈ ಕತೆ ನಿಮ್ಮ ಯೋಚನೆ ಬದಲಿಸುತ್ತೆ..

ರೈಲು ನಿಲ್ದಾಣಗಳಲ್ಲಿ ಎಚ್ಚರಿಕೆ ಮೂಡಿಸಲು ಹಾಗೂ ಜಾಹೀರಾತು ನೀಡುವ ಸಲುವಾಗಿ ದೊಡ್ಡ ದೊಡ್ಡ ಎಲ್‌ಸಿಡಿ ಟಿವಿಗಳನ್ನು ಅಲ್ಲಲ್ಲಿ ಅಳವಡಿಸಲಾಗಿರುತ್ತದೆ. ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿಗಳ ಜೊತೆಗೆ ಜಾಹಿರಾತು ಪ್ರಸಾರಕ್ಕಾಗಿ ಟಿವಿಗಳಿರುತ್ತವೆ (CCTV). ಅದೇ ರೀತಿ ಇಲ್ಲೂ ಕೂಡಟಿವಿ ಇದ್ದು, ಯಾರೋ ಸಿಬ್ಬಂದಿಯ ಅವಾಂತರದಿಂದ ಈ ರೀತಿಯ ನಾಚಿಕೆಗೇಡಿನ ಘಟನೆ ನಡೆದಿದೆ. 

ದತ್ತಾ ಕಮ್ಯುನಿಕೇಷನ್ ಎಂಬ ಸಂಸ್ಥೆ ಈ ಟಿವಿಗಳಲ್ಲಿ ಜಾಹೀರಾತು ಪ್ರಸಾರದ ಉಸ್ತುವಾರಿಯನ್ನು ಗುತ್ತಿಗೆ ಪಡೆದಿತ್ತು. ಆ ಸಂಸ್ಥೆಯ ಸಿಬ್ಬಂದಿಯೇ ಈ ಅವಾಂತರವೆಬ್ಬಿಸಿದ್ದಾರೆ. ಇದರ ವಿರುದ್ಧ  ಸರ್ಕಾರಿ ರೈಲ್ವೆ ಪೊಲೀಸ್ ಕ್ರಮ ಕೈಗೊಳ್ಳಲು ನಿಧಾನ ಮಾಡಿದ ಹಿನ್ನೆಲೆಯಲ್ಲಿ  ರೈಲ್ವೆ ಪೊಲೀಸ್ ಪೋರ್ಟ್‌ ಈ ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ ಪೋರ್ನ್‌ ಪ್ರಸಾರ ಆಗುತ್ತಿರುವ ವಿಚಾರ ತಿಳಿಸಿದೆ. ನಂತರವಷ್ಟೇ ಸಂಸ್ಥೆ ಅಶ್ಲೀಲ ಚಿತ್ರ ಪ್ರದರ್ಶನವನ್ನು ನಿಲ್ಲಿಸಿದೆ. 

ಅಶ್ಲೀಲ ಗೋಡೆಬರಹ ಬರೆದು ಶಿಕ್ಷಕಿಗೆ ಚಾರಿತ್ರ್ಯವಧೆ ಮಾಡಿದ್ದ ಸಹಶಿಕ್ಷಕ ನಿಸ್ಸಾರ ಅಹ್ಮದ್‌ಗೆ ಜೈಲೂಟ

ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ದತ್ತಾ ಕಮ್ಯುನಿಕೇಷನ್ (Dutta Communication) ವಿರುದ್ಧ ಎಫ್ಐಆರ್‌ (FIR) ದಾಖಲಿಸಲಾಗಿದೆ. ಅಲ್ಲದೇ ಈ ಏಜೆನ್ಸಿಯನ್ನು  ರೈಲ್ವೆ  ಕಪ್ಪು ಪಟ್ಟಿಗೆ ಸೇರಿಸಿದ್ದು,  ದಂಡ ವಿಧಿಸಿದೆ.  ಅಲ್ಲದೇ ರೈಲ್ವೆ ಅಧಿಕಾರಿಗಳು ಆ ಸಂಸ್ಥೆಯ ಗುತ್ತಿಗೆಯನ್ನು (contract) ತಕ್ಷಣದಿಂದಲೇ ರದ್ದುಪಡಿಸಿದೆ.  ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆ ನಡೆಸಲು ರೈಲ್ವೆ ಇಲಾಖೆ ಮುಂದಾಗಿದೆ.  ಮತ್ತೆ ಕೆಲವರು ಈ ವಿಡಿಯೋ ಕೇವಲ ಪ್ಲಾಟ್‌ಫಾರ್ಮ್‌ 10 ರಲ್ಲಿ ಮಾತ್ರ ಪ್ಲೇ ಆಗಿತ್ತು. ಅಲ್ಲಿ ಮಾತ್ರ ಪ್ಲೇ ಆಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. 


 

Follow Us:
Download App:
  • android
  • ios