Asianet Suvarna News Asianet Suvarna News

ಲಂಡನ್ to ಬೆಂಗಳೂರು ಫ್ಲೈಟ್ ಲ್ಯಾಂಡಿಂಗ್ ಬೆನ್ನಲ್ಲೇ ವರ್ಜಿನ್ ಅಟ್ಲಾಂಟಿಕ್ ಮತ್ತೊಂದು ಘೋಷಣೆ!

ಬ್ರಿಟಿಷ್ ಏರ್‌ವೇಸ್ ವರ್ಜಿನ್ ಅಟ್ಲಾಂಟಿಕಾ ಭಾರತದಲ್ಲಿ ಸೇವೆ ವಿಸ್ತರಿಸುತ್ತಿದೆ. ಪ್ರಮುಖವಾಗಿ ಬೆಂಗಳೂರಿನಿಂದ ಲಂಡನ್‌ಗ ನೇರ ಫ್ಲೈಟ್ ಲಾಂಚ್ ಮಾಡಿದೆ. ಮೊದಲ ಫ್ಲೈಟ್ ಏಪ್ರಿಲ್ 1 ರಂದು ಬೆಂಗಲೂರಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದರ ಬೆನ್ನಲ್ಲೇ ಭಾರತೀಯರಿಗೆ ವರ್ಜಿನ್ ಅಟ್ಲಾಂಟಿಕ್ ಮತ್ತೊಂದು ಘೋಷಣೆ ಮಾಡಿದೆ.
 

Virgin Atlantic direct flight services from London to Bengaluru Landed 2nd to mumbai to launch on October ckm
Author
First Published Apr 4, 2024, 7:50 PM IST

ಬೆಂಗಳೂರು(ಏ.04) ಭಾರತದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಟೆಕ್ ಕ್ಯಾಪಿಟಲ್ ಎಂದೇ ಗುರುತಿಸಿಕೊಂಡಿದೆ. ಉದ್ಯಮ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ಹಲವು ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ. ದೇಶದ ಪ್ರಮುಖ ನಗರವಾದ ಬೆಂಗಳೂರಿಗೆ ಬ್ರಿಟಿಷ್ ಏರ್‌ಲೈನ್ ವರ್ಜಿನ್ ಅಟ್ಲಾಂಟಿಕ್ ಮಹತ್ತರ ಕೊಡುಗೆ ನೀಡಿದೆ. ಲಂಡನ್‌ನಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಲಂಡನ್‌ಗೆ ನೇರ ಫ್ಲೈಟ್ ಲಾಂಚ್ ಮಾಡಿದೆ. ಇದರ ಪ್ರಕಾರ ಲಂಡನ್‌ನಿಂದ ಹೊರಟ ಮೊದಲ ಫ್ಲೈಟ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದರ ಬೆನ್ನಲ್ಲೇ ವರ್ಜಿನ್ ಅಟ್ಲಾಂಟಿಕ್ ಮತ್ತೊಂದು ಘೋಷಣೆ ಮಾಡಿದೆ. ಅಕ್ಟೋಬರ್ 2024ರಲ್ಲಿ ಲಂಡನ್‌ನಿಂದ ಮುಂಬೈಗೆ ನೇರ ಫ್ಲೈಟ್ ಸೇವೆ ಆರಂಭಿಸುವುದಾಗಿ ಘೋಷಿಸಿದೆ.

ಬೆಂಗಳೂರಿನ ಈ ಕುರಿತು ಕಾರ್ಯಕ್ರಮ ಆಯೋದಿಸಿದ್ದ ವರ್ಜಿನ್ ಅಟ್ಲಾಂಟಿಕ್, ಭಾರತದಲ್ಲಿ ವಿಮಾನ ಸೇವೆ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದಿದೆ. ಅದರಲ್ಲೂ ಪ್ರಮುಖವಾಗಿ ಸಿಲಿಕಾನ್ ವ್ಯಾಲಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಿಂದ ನಮ್ಮ ಸೇವೆ ಆರಂಭಗೊಳ್ಳುತ್ತಿರುವುದು ಮತ್ತಷ್ಟು ಸಂತಸ ತಂದಿದೆ ಎಂದು ವರ್ಜಿನ್ ಅಟ್ಲಾಂಟಿಕ್ ಸಿಇಒ ಶೈ ವೈಸ್ ಹೇಳಿದ್ದಾರೆ. ವರ್ಜಿನ್ ಅಟ್ಲಾಂಟಿಕ್ ಏರ್‌ವೇಸ್‌ಗೆ ಭಾರತದ 3ನೇ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರು ಹಾಗೂ ಲಂಡನ್ ಎರಡೂ ನಗರಗಳಲ್ಲಿ ಹಲವು ಸಾಮ್ಯತೆಗಳಿವೆ. ಎರಡೂ ಉದಯೋನ್ಮುಖ ನಗರಗಳಾಗಿದೆ. ಬೆಂಗಳೂರ ಮೂಲದ ಕೆಲ ಪ್ರಮುಖ ಕಂಪನಿಗಳು ಲಂಡನ್‌ನಲ್ಲಿದೆ. ಲಂಡನ್‌ನ ಪ್ರಮುಖ ಕಂನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಬೆಂಗಳೂರಿನಿಂದ ವಿದ್ಯಾರ್ಥಿಸ ವೀಸಾ ಮೂಲಕ ಲಂಡನ್‌ಗೆ ಆಗಮಿಸುವ ಸಂಖ್ಯೆ ಹೆಚ್ಚಿದೆ. ಇನ್ನು ಪ್ರವಾಸಿ ವೀಸಾ ಸೇರಿದಂತೆ ಹಲವು ವೀಸಾಗಳಡಿಯಲ್ಲಿ ಎರಡು ನಗರದ ಜನರು ಸಂಪರ್ಕ ಬೆಸೆದಿದ್ದಾರೆ. ಹೀಗಾಗಿ ಲಂಡನ್‌ನಿಂದ ಬೆಂಗಳೂರಿಗೆ ನೇರ ವಿಮಾನ ಸೇವೆ ವರ್ಜಿನ್ ಅಟ್ಲಾಂಟಿಕಾ ಸಂಸ್ಥೆಗೆ ಅತ್ಯಂತ ಪ್ರಮುಖವಾಗಿದೆ ಎಂದಿದ್ದಾರೆ.

ಪುರುಷ ಪೈಲಟ್ ಸಹ ಸ್ಕರ್ಟ್‌ ಧರಿಸ್ಬೋದು, ವರ್ಜಿನ್ ಅಟ್ಲಾಂಟಿಕ್ ಏರ್‌ಲೈನ್ಸ್‌ ಹೊಸ ಲಿಂಗ ನೀತಿ

ಬೆಂಗಳೂರು, ಮುಂಬೈ ಹಾಗೂ ದೆಹಲಿಗೆ ಲಂಡನ್‌ನಿಂದ ನೇರ ವಿಮಾನ ಸೇವೆ ನೀಡುತ್ತಿರು ವರ್ಜಿನ್ ಅಟ್ಲಾಂಟಿಕಾ ಭಾರತದ ಅತೀದೊಡ್ಡ ಏರ್‍‌ಲೈನ್ಸ್ ಇಂಡಿಗೋ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಹೈದರಾಬಾದ್, ಗೋವಾ, ಅಹಮ್ಮಾದಾಬ್ ಸೇರಿದಂತೆ ಇತರ ನಗರಗಳಿಂದ ಗ್ರಾಹಕರು ಲಂಡನ್‌ಗೆ ಒಂದೇ ಟಿಕೆಟ್ ಬುಕ್ ಮಾಡಬಹದು ಎಂದ ಶೈ ವೈಸ್ ಹೇಳಿದ್ದಾರೆ.

ಭಾರತದಲ್ಲಿ ಸೇವೆ ನೀಡುತ್ತಿರುವ ವರ್ಜಿನ್ ಅಟ್ಲಾಂಟಿಕ್ ಇಲ್ಲಿನ ಸ್ಥಳೀಯ ಪ್ರಾತಿನಿದ್ಯಕ್ಕೆ ಒತ್ತು ನೀಡಿದೆ. ಪ್ರತಿ ವಿಮಾನದಲ್ಲಿ ನಾಲ್ವರು ಸಿಬ್ಬಂದಿಗಳು ಭಾರತೀರಾಗಿಯರಾಗುತ್ತಾರೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ನಮ್ಮ ಸೇವಾ ಮಾರುಕಟ್ಟೆಯನ್ನು ಭಾರತದಲ್ಲಿ ಮತ್ತಷ್ಟು ವಿಸ್ತರಿಸುತ್ತೇವೆ ಎಂದು ಶೈ ವೈಸ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಬ್ರಿಟೀಷ್ ಡೆಪ್ಯೂಟಿ ಹೈಕಮಿಷನ್ ಚಂದ್ರು ಐಯರ್, ನಮ್ಮ ಬೆಂಗಳೂರಿಗೆ ಆಗಮಿಸುತ್ತಿರುವ ಬ್ರಟಿಷ್ ಏರ್‌ವೇಸ್ ಆತ್ಮೀಯ ಸ್ವಾಗತ ಕೋರಿದರು.  ಭಾರತ ಹಾಗೂ ಲಂಡನ್ ನಡುವಿನ ಸಂಪರ್ಕ ಕೊಂಡಿಯಾಗಿ ವರ್ಜಿನ್ ಅಟ್ಲಾಂಟಿಕ್ ಆಗಮಿಸಿದೆ. ಈ ಮೂಲಕ ಎರಡು ನಗರಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಭಾರತ ಹಾಗೂ ಲಂಡನ್ ನಡುವೆ ಜನರ ಓಡಾಟ ಹೆಚ್ಚಾಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಿಂದ ಲಂಡನ್ ಪ್ರಯಾಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವ್ಯಾಪಾರ-ವಹಿವಾಟು, ಪ್ರವಾಸಿಗರು, ವಿದ್ಯಾರ್ಥಿಗಳು, ಆತ್ಮೀಯರು, ಕುಟುಂಬಸ್ಥರ ಸಂಪರ್ಕ ಸೇತುವೆಯಾಗಿ ವರ್ಜಿನ್ ಅಟ್ಲಾಂಟಿಕ್ ಕಾರ್ಯನಿರ್ವಹಸಲಿದೆ ಎಂದು ಚಂದ್ರು ಐಯರ್ ಹೇಳಿದ್ದಾರೆ. 

ಭಾರತದ ನಂಬರ್ ಒನ್ ಇಂಡಿಗೋ ವಿಶ್ವದ ಲೀಸ್ಟಲ್ಲಿ ಎಲ್ಲಿದೆ?
 

Follow Us:
Download App:
  • android
  • ios