ಹಣ ಕೇಳಿದ್ದಕ್ಕೆ, ತಾಯಿಯ ಜುಟ್ಟು ಹಿಡಿದು ದರದರನೆ ಎಳೆದ ಪಾಪಿ ಮಗ!
ಇದು ಘೋರ ಕಲಿಯುಗ ಏನು ಬೇಕಾದರೂ ಆಗಬಹುದು. ಅದಕ್ಕೆ ಉದಾಹರಣೆ ಎನ್ನುವಂತೆ ಉತ್ತರಪ್ರದೇಶದಲ್ಲಿ ಪುತ್ರನೊಬ್ಬ, ತಾಯಿ ಹಣ ನೀಡಲಿಲ್ಲ ಅನ್ನೋ ಕಾರಣಕ್ಕೆ ಆಕೆಯ ಜುಟ್ಟು ಹಿಡಿದು ಮನೆಯಿಂದ ದರದರನೆ ಎಳೆದು ಥಳಿಸಿದ ಘಟನೆ ನಡೆದಿದೆ.

ಲಕ್ನೋ (ನ.26): ಇದು ಕಲಿಯುಗ. ಕಂಡು ಕೇಳರಿಯದಂಥ ಘಟನೆಗಳು ನಡೆಯುತ್ತದೆ. ಆದರೆ, ಹೆತ್ತತಾಯಿಗೆ ಮನ ಬಂದಂತೆ ಹೊಡೆಯುವುದನ್ನು ಬಹುಶಃ ಯಾರೂ ಒಪ್ಪಲಿಕ್ಕಿಲ್ಲ. ಉತ್ತರ ಪ್ರದೇಶದ ಮಹರಾಜ್‌ಗಂಜ್ ಜಿಲ್ಲೆಯ ನೂತನ್‌ವಾನ್ ಪ್ರದೇಶದಲ್ಲಿ ಹೆತ್ತ ತಾಯಿಯ ಜುಟ್ಟು ಹಿಡಿದು ಮನೆಯ ಬಾಗಿಲಿನಿಂದ ದರದರನೆ ಎಳೆದುಕೊಂಡು ಹಲ್ಲೆ ಮಾಡಿದ ಘಟನೆ ನಡೆದಿದೆ. ಆಕೆಯನ್ನು ರಸ್ತೆಗೆ ಎಳೆಯುವ ಮಗ, ಆಕೆಯ ಮುಖಕ್ಕೆ ಮುಷ್ಠಿ ಕಟ್ಟಿ ಹೊಡೆದಿದ್ದಾರೆ. ಈತನ ವಿಡಿಯೋವಿಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು, ಪುತ್ರನ ವಿರುದ್ಧ ಕೇಸ್ ದಾಖಲಿಸಿದ್ದು, ಶೀಘ್ರವೇ ಆತನನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಖರ್ಚು ಮಾಡಿದ ಹಣ ಲೆಕ್ಕ ಕೊಡುವಂತೆ ತಾಯಿ ಕೇಳಿದ್ದೇ ತಪ್ಪಾಗಿದೆ. ಇದಕ್ಕಾಗಿ ಆರೋಪಿ ಪುತ್ರ ಕರುಣೆಯೇ ಇಲ್ಲದಂತೆ ತಾಯಿಗೆ ದನಕ್ಕೆ ಬಡಿಯುವ ಹಾಗೆ ಬಡಿದಿದ್ದಾನೆ. ಮೂಲಗಳ ಪ್ರಕಾರ ಇದು ಈ ಘಟನೆ ನವೆಂಬರ್ 23 ರಂದು ನಡೆದಿದ್ದು ಎನ್ನಲಾಗಿದೆ.
ಫಾರ್ಮ್‌ಅನ್ನು ಬಾಡಿಗೆಗೆ ಬಿಟ್ಟಿದ್ದ ತಾಯಿ: ಪೊಲೀಸರ ಮಾಹಿತಿಯ ಪ್ರಕಾರ ಮಹಿಳೆ ಕಮಲಾ ದೇಶಿ, ಬಂತಾಯಿಯಲ್ಲಿರುವ ಫಾರ್ಮ್‌ಅನ್ನು ಬಾಡಿಗೆಗೆ ನೀಡಿ ಅದರಿಂದ ಬಂದ ಹಣದಲ್ಲಿ ತನ್ನ ಖರ್ಚನ್ನು ಸರಿದೂಗಿಸಿಕೊಳ್ಳುತ್ತಿದ್ದರು. ಈ ಬಾರಿ ಅವರ ಜಾಗದಲ್ಲಿ ಬೆಳೆ ಬೆಳೆದು ಮಾರಾಟವಾದ ಬಳಿಕ, ಜಮೀನನ್ನು ಬಾಡಿಗೆಗೆ ಪಡೆದುಕೊಂಡಿದ್ದ ವ್ಯಕ್ತಿ ಈ ಹಣವನ್ನು ಕಮಲಾ ದೇವಿಯ ಪುತ್ರ ರಿತೇಶ್ ವರ್ಮಾಗೆ ನೀಡಿದ್ದ. ತಾಯಿಗೆ ಈ ಹಣವನ್ನು ನೀಡುವಂತೆ ಆ ವ್ಯಕ್ತಿ ಹೇಳಿದ್ದ ಎನ್ನಲಾಗಿದೆ.
ಜಮೀನಿನಲ್ಲಿ ಬೆಳೆ ಬೆಳೆದ ವ್ಯಕ್ತಿ ಇದರ ಹಣವನ್ನು ಪುತ್ರನಿಗೆ ನೀಡಿದ್ದ ಎಂದು ತಾಯಿಗೆ ಗೊತ್ತಾಗಿತ್ತು. ಈ ಹಣ ಎಲ್ಲಿದೆ ಎಂದು ತಾಯಿ ಮಗನ ಬಳಿ ಕೇಳುತ್ತಿದ್ದಳು. ಆದರೆ, ತಾಯಿ ಹಣ ಕೇಳಿದ್ದಕ್ಕೆ ಸಿಟ್ಟಾಗಿದ್ದ ಮಗ ಆಕೆಯೊಂದಿಗೆ ಜಗಳಕ್ಕೆ ಇಳಿದಿದ್ದ. ಜಗಳ ಎಲ್ಲಿಯತನಕ ಹೋಗಿತ್ತೆಂದರೆ, ತಾಯಿಯ ಜುಟ್ಟನ್ನು ಹಿಡಿದ ಮಗ ಆಕೆಯನ್ನು ಮನೆಯಿಂದ ದರದರನೆ ಎಳೆದುಕೊಂಡು ನಡು ರಸ್ತೆಯಲ್ಲಿಯೇ ಥಳಿಸಿದ್ದಾನೆ. ಮುಷ್ಠಿ ಕಟ್ಟಿ ಆಕೆಯ ಮುಖಕ್ಕೆ ಗುದ್ದಿದ್ದಾನೆ. ಈ ವೇಳೆ ಕೆಲವು ವ್ಯಕ್ತಿಗಳು ಮಧ್ಯಪ್ರವೇಶ ಮಾಡಿದ್ದು ಆ ವ್ಯಕ್ತಿಗಳೊಂದಿಗೂ ಗಲಾಟೆ ಮಾಡಿದ್ದಾನೆ. ಕೆಲ ಕ್ಷಣಕ್ಕೆ ತಾಯಿ ಸುಧಾರಿಸಿಕೊಂಡ ಬಳಿಕ ಮತ್ತೆ ಆಕೆಯನ್ನು ಎಳೆದಾಡುವ ಮಗ, ಆಕೆಯನ್ನು ರಸ್ತೆಗೆ ನೂಕಿದ್ದಾನೆ. ಇದರ ಸಂಪೂರ್ಣ ವಿಡಿಯೋ ಸ್ಥಳದಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದನ್ನು ಯಾರೋ ಸೋಶಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದಾರೆ.
ಹಾಗಂತ ಮಹಿಳೆಯ ಮಗ ಅವಿದ್ಯಾವಂತನಲ್ಲ, ಸ್ಥಳೀಯ ಪ್ರದೇಶದಲ್ಲಿ ಆತ ಜ್ಯುವೆಲ್ಲರಿ ಶಾಪ್ ಇರಿಸಿಕೊಂಡಿದ್ದಾನೆ. ಇನ್ನು ಕಮಲಾ ತನ್ನ ಹೆಸರಿನಲ್ಲಿ ಇದ್ದ ಫಾರ್ಮ್‌ಅನ್ನು ಬಾಡಿಗೆಗೆ ಕೊಟ್ಟು ಅದರಿಂದ ಬಂದ ಹಣದಲ್ಲಿ ಮನೆಯ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಚೆನ್ನೈ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ!
ಮಗನ ಇಂತಹ ಕೃತ್ಯವನ್ನು ಕಂಡು ಸುತ್ತಮುತ್ತಲಿನವರು ಸ್ಥಳಕ್ಕೆ ಬಂದಿದ್ದರು. ಪಕ್ಕದ ಅಂಗಡಿಯಲ್ಲಿ ಕುಳಿತಿದ್ದ ಯುವಕ ವೃದ್ಧೆಯನ್ನು ರಕ್ಷಿಸಲು ಬಂದಾಗ ಆತನಿಗೂ ಹೊಡೆಯಲು ಆರಂಭಿಸುತ್ತಾನೆ. ಅಷ್ಟರಲ್ಲಿ ತಾಯಿ ಮನೆಯೊಳಗೆ ಹೋಗಲು ಯತ್ನಿಸಿದಾಗ ಮಗ ಮತ್ತೆ ರಸ್ತೆಗೆ ಎಳೆದು ಬೀಳಿಸಿದ್ದಾನೆ. ಬಹಳ ಕಷ್ಟಪಟ್ಟು ಜನರು ಮಹಿಳೆಯನ್ನು ಉಳಿಸಿ ಅಂಗಡಿಯಲ್ಲಿ ಕೂರಿಸುತ್ತಾರೆ. ನಂತರ ಆಕೆಯನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.
ವ್ಯಾಪಾರಿ ಮೇಲೆ ಪುರಸಭೆ ಸದಸ್ಯನಿಂದ ಹಲ್ಲೆ: ವಿಡಿಯೋ ವೈರಲ್‌ನಿಂದ ಮಾನ ಹರಾಜು
ಆರೋಪಿ ಮಗನಿಗೆ ಹುಡುಕಾಟ: ನೂತನ್‌ವಾನ್‌ನ ಸಿಒ ಅನೂಜ್ ಸಿಂಗ್ ಬಳಿ ತಾಯಿ ಕಮಲಾ ದೇವಿ, ಪುತ್ರ ರಿತೇಶ್ ವರ್ಮ ಮೇಲೆ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 323, 504 ಮತ್ತು 506ರ ಅಡಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ರಸ್ತುತ ರಿತೇಶ್ ವರ್ಮ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.