ಗೋದ್ರಾ (ಗುಜರಾತ್), (ಜ.26): ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕವಾಗಿಯೇ ಕಿಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. 

ಅಂತಹದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದ್ರೆ, ಈ ಘಟನೆ ನಡೆದಿರುವುದು ಗುಜರಾತಿನಲ್ಲಿ. 8ನೇ ತರಗತಿಯ ಹುಡುಗ-ಹುಡುಗಿ ಕ್ಲಾಸ್ ರೂಮಿನಲ್ಲಿ ಒಬ್ಬರಿಗೊಬ್ಬರು ಕಿಸ್ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಶಾಲೆಯ ಮೈದಾನದಲ್ಲೇ ಹೈಸ್ಕೂಲ್ ವಿದ್ಯಾರ್ಥಿಗಳ ಲಿಪ್ ಲಾಕ್

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋದ್ರಾದಿಂದ 8ಕಿ.ಮೀ. ದೂರದಲ್ಲಿರುವ ಮೊರ್ವಾ ಹಡಾಫ್ ನ ಕ್ರುಶಿಕರ್  ಪ್ರೌಢ  ಶಾಲೆಯಲ್ಲಿ ಈ ಘಟನೆ ನಡೆದಿದೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಕಿಸ್ಸಿಂಗ್ ಪ್ರಕರಣದ ಬಗ್ಗೆ ಶಿಕ್ಷಣ ಇಲಾಖೆಯಿಂದ ಪಂಚಮಹಲ್ ಜಿಲ್ಲಾ ಮಟ್ಟದ ಅಧಿಕಾರಿಗಳು ವರದಿ ಕೇಳಿದ್ದಾರೆ. 

ಕಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಂಚಮಹಲ್ ಜಿಲ್ಲಾ ಶಿಕ್ಷಣ ಅಧಿಕಾರಿ ಬಿಎಸ್ ಪಂಚಾಲ್, ಕ್ರುಶಿಕರ್  ಪ್ರೌಢ  ಶಾಲೆಯ ಆಡಳಿತ ಮಂಡಳಿಯಿಂದ ವರದಿ ಕೇಳಲಾಗಿದೆ ಎಂದರು.

ಮತ್ತೊಂದೆಡೆ ಈ ಬಗ್ಗೆ ಕ್ರುಶಿಕರ್  ಪ್ರೌಢ  ಶಾಲೆಯ ಮುಖ್ಯೋಪಾಧ್ಯಾಯ ಅಶ್ವಿನ್ ಪಟೇಲ್ ಮಾತನಾಡಿ, ಈ ಘಟನೆ ಸಂಬಂಧ ವಿದ್ಯಾರ್ಥಿಗಳ ಪೋಷಕರಿಗೆ ಸುದ್ದಿ ತಿಳಿಸಲಾಗಿದೆ. ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.