Asianet Suvarna News Asianet Suvarna News

Viral Video: ಮದುವೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ನವ ದಂಪತಿ


ಮದುವೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ನವ ದಂಪತಿ
ದೆಹಲಿ ಸಮೀಪದ ಘಾಜಿಯಾಬಾದ್‌ನಲ್ಲಿ ಘಟನೆ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

Viral Video Shows Couple Firing In Air At Wedding In Uttara Pradesh akb
Author
Bangalore, First Published Dec 14, 2021, 5:35 PM IST

ಉತ್ತರಪ್ರದೇಶ(ಡಿ.14): ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು(celebratory firings) ಹಾರಿಸುವುದರಿಂದ ಅನೇಕ ಬಾರಿ ಈ ಹಿಂದೆ ತೊಂದರೆಯಾಗಿದ್ದು, ಹೀಗಾಗಿ ಈ ವಿಚಾರಕ್ಕೆ ಈಗಾಗಲೇ ಸರ್ಕಾರ ನಿರ್ಬಂಧ ಹೇರಿದ್ದರು.  ದೆಹಲಿ (delhi) ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಆಚರಣೆ ಜಾರಿಯಲ್ಲಿದ್ದು, ವಿವಾದಕ್ಕೆ ಕಾರಣವಾಗುತ್ತಿದೆ. ನವ ವಿವಾಹಿತ ಜೋಡಿಯೊಂದು ತಮ್ಮ ಮದುವೆ ಸಂಭ್ರಮದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ದೆಹಲಿ ಸಮೀಪದ ಘಾಜಿಯಾಬಾದ್‌ ( Ghaziabad)ನಲ್ಲಿ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣ(social media)ದಲ್ಲಿ ವೈರಲ್‌ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ವಿಡಿಯೋದಲ್ಲಿ ವರನು ಎರಡು ಸುತ್ತುಗಳ ಗುಂಡು ಹಾರಿಸಿದ್ದು, ಈ ವೇಳೆ ವರನೊಂದಿಗೆ ವಧು ನಗುತ್ತಾ ಪೋಸ್‌ ಕೊಡುವ ಚಿತ್ರಣವಿದೆ. ಘಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಉತ್ತರ ಭಾರತ(North India)ದಲ್ಲಿ  ಸಂಭ್ರಮಾಚರಣೆ ವೇಳೆ ಗುಂಡು ಹಾರಿಸುವುದು ತುಂಬಾ  ಸಾಮಾನ್ಯ ಎನಿಸಿದೆ. ಈ ಹಿಂದೆ ಹೀಗೆ ಗುಂಡು ಹಾರಿಸಿ ಅನಾಹುತವಾಗಿ ಪ್ರಕರಣ ದಾಖಲಾಗಿದ್ದರು ಕೂಡ ಜನ ಈ ಸಂಪ್ರದಾಯವನ್ನು ಬಿಡಲು ಸಿದ್ಧರಿಲ್ಲ. ಕಳೆದ ಆಗಸ್ಟ್‌ನಲ್ಲಿ ಹುಟ್ಟು ಹಬ್ಬದ ಆಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಕ್ಕಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ವರಮಾಲೆ ಹಾಕೋವಾಗ ಸತಾಯಿಸಿದ ವರ..! ಮುಂದಾಗಿದ್ದೇನು ?

ದೆಹಲಿಯ ಪೂರ್ವ ಪಶ್ಚಿಮ ವಿಹಾರ್‌(Paschim Vihar)ನಲ್ಲಿರುವ ಮನೆಯೊಂದರ ಮೇಲ್ಛಾವಣಿಯಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆದ ಬಳಿಕ ಪೊಲೀಸರು ಗುಂಡು ಹಾರಿಸಿದಾತನ ವಿರುದ್ಧ ಕೇಸ್‌ ದಾಖಲಿಸಿದ್ದರು. ಅದಕ್ಕೂ ಒಂದು ತಿಂಗಳ ಹಿಂದೆ ಜುಲೈನಲ್ಲಿ, ಗಾಜಿಯಾಬಾದ್‌ನಲ್ಲಿ ಬ್ಯಾಚುಲರ್ ಪಾರ್ಟಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಗುಂಡು ಹಾರಿಸಿದಾಗ 26 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

 

ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನ ಅಪೂರ್ವ ಕ್ಷಣ. ಜತೆಗೆ, ವಿವಾಹ ಜೀವನದ ಪ್ರಮುಖ ಘಟ್ಟವೂ ಹೌದು. ಇಲ್ಲಿಂದ ಬದುಕಿನ ಇನ್ನೊಂದು ಅಧ್ಯಾಯ ಆರಂಭವಾಗುತ್ತದೆ. ಸತಿಪತಿಗಳು ಜೀವನದ ಸಕಲ ಸುಖ ಕಷ್ಟಗಳನ್ನು ಜತೆಯಾಗಿ ಹಂಚಿಕೊಂಡು ಸಾಗುವ ಕ್ಷಣ ಆರಂಭವಾಗುವುದೇ ಇಲ್ಲಿಂದ. ಹೀಗಾಗಿ, ವಿವಾಹದ ದಿನ ಸಂತಸದಿಂದ ಕೂಡಿರುತ್ತದೆ. ನವಜೋಡಿ ನಗುಮುಖದಿಂದಲೇ ವಿವಾಹದ ಶಾಸ್ತ್ರಗಳನ್ನು ಪೂರ್ಣಗೊಳಿಸುತ್ತಾರೆ. ಇಂತಹ ಸಂಭ್ರಮದ ದಿನದಂದು ಕೆಲವೊಮ್ಮೆ ಅಪೂರ್ವ ದೃಶ್ಯಗಳು ಕಾಣಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ವಿವಾಹದ ಸಂದರ್ಭದಲ್ಲಿ ಸೆರೆಯಾಗುವ ಅಪರೂಪದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿವೆ. ಮದುವೆಯ ಕೆಲವು ದೃಶ್ಯಗಳು ಬಹುಬೇಗ ನೆಟ್ಟಿಗರ ಗಮನ ಸೆಳೆಯುತ್ತವೆ. ಸದ್ಯ ಅಂತಹದ್ದೇ  ಇನ್ನೊಂದು ವಿಡಿಯೋವೊಂದು ವೈರಲ್ ಆಗುತ್ತಿದೆ.

ಮದುವೆಯಾಗೋರಿಗೆ ಮಾಜಿ ಸಿಎಂ ಟಿಪ್ಸ್: ಮಕ್ಳು ಮಾಡೋ ಬಗ್ಗೆ ಸಿದ್ದು ಸಲಹೆಗಳಿಷ್ಟು

ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ(IPS officer Deepanshu Kabra) ಅವರು ತಮ್ಮ ಟ್ವಿಟ್ಟರ್(twitter) ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯ ಇದು. ವಿವಾಹದ ಸಂದರ್ಭದಲ್ಲಿ ವಧು ಬಿದ್ದು ಬಿದ್ದು ನಗುವ ದೃಶ್ಯ ಇದು. ಈ ದೃಶ್ಯ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ. ಧರ್ಮಗುರುಗಳ ಸಮ್ಮುಖದಲ್ಲಿ ವಧು ಮತ್ತು ವರರು ವಿವಾಹದ ಬದ್ಧತೆಯನ್ನು ದಾಖಲಿಸಿಕೊಳ್ಳುವ ದೃಶ್ಯದ ಮೂಲಕ 29 ಸೆಕೆಂಡಿನ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ, ವಧು ಇದ್ದಕ್ಕಿದ್ದಂತೆಯೇ ನಗುವುದಕ್ಕೆ ಆರಂಭಿಸುತ್ತಾರೆ. ವಿವಾಹದ ಸಂಭ್ರಮವನ್ನು ಈಕೆ ಅನುಭವಿಸಿದ ರೀತಿ ಇದು. 

ತಕ್ಷಣಕ್ಕೆ ವಧು ಯಾಕೆ ಹೀಗೆ ನಗುತ್ತಿದ್ದಾರೆ ಎಂಬುದು ಅಲ್ಲಿದ್ದವರಿಗೂ ಅರ್ಥವಾಗಿರಲಿಲ್ಲ. ಆದರೆ, ವಧು ನಗುವಿನ ಹಿಂದಿನ ಅಸಲಿ ಕಾರಣ ಬೇರೆಯದ್ದೇ ಇದೆ. ಅದೇನೆಂದರೆ ವಿವಾಹದ ಪ್ರತಿಜ್ಞೆ ಸ್ವೀಕರಿಸುವ ವೇಳೆ ವರ ಪದವೊಂದನ್ನು ತಪ್ಪಾಗಿ ಉಚ್ಚರಿಸಿದ್ದರು. ಮೊದಲೇ ವಿವಾಹದ ಸಡಗರದಲ್ಲಿ ತೇಲುತ್ತಿದ್ದ ವಧುವಿಗೆ ಇದನ್ನು ಕೇಳಿ ನಗು ತಡೆದುಕೊಳ್ಳಲಾಗಿರಲಿಲ್ಲ. ಸಂಗಾತಿಯ ಖುಷಿಯ ಕ್ಷಣವನ್ನು ಕಂಡು ವರ ಕೂಡಾ ಮಂದಹಾಸ ಬೀರುತ್ತಾರೆ. ಪಕ್ಕದಲ್ಲಿರುವ ಧರ್ಮಗುರುಗಳು ಕೂಡಾ ಮುಗುಳ್ನಕ್ಕು ವಧುವಿನ ಖುಷಿಗೆ ಜತೆಯಾದರು. 'ಮದುವೆ ಜೀವನದ ಅತ್ಯಂತ ಸಂತೋಷದ ಕ್ಷಣ ಆದರೆ ಇಷ್ಟೊಂದಾ...?' ಎಂದು ಶೀರ್ಷಿಕೆ ಬರೆದು ದೀಪಾನ್ಶು ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios