ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಔಟ್‌ಪೋಸ್ಟ್‌ ಇನ್‌ಚಾರ್ಜ್‌ವೊಬ್ಬ ಡ್ಯೂಟಿ ವೇಳೆಯಲ್ಲಿಯೇ ಸ್ಪಾ ಸೆಂಟರ್‌ಗೆ ತೆರಳಿ ಮಹಿಳೆಯಿಂದ ಮಸಾಜ್‌ ಮಾಡಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಪ್ರಯಾಗ್‌ರಾಜ್‌ ಸಿವಿಲ್‌ ಲೈನ್ಸ್‌ ಔಟ್‌ಪೋಸ್ಟ್‌ನಲ್ಲಿ ಕರ್ತ್ಯವ್ಯದಲ್ಲಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ಅನ್ನು ವಜಾ ಮಾಡಲಾಗಿದೆ.

ಪ್ರಯಾಗ್‌ರಾಜ್‌ (ಆ.27): ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋಗಳು ವೈರಲ್‌ ಆಗುವುದು ದೊಡ್ಡ ವಿಚಾರವೇನೆಲ್ಲ. ಆದರೆ, ಕೆಲವೊಂದು ವಿಡಿಯೋಗಳು ವೈರಲ್‌ ಆದರೆ, ಜೀವನಕ್ಕೆ ಸಂಚಕಾರ ತರುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಪ್ರಯಾಗ್‌ರಾಜ್‌ನ ವಿಡಿಯೋವೊಂದು ವೈರಲ್‌ ಆಗಿದ್ದು, ಜಿಲ್ಲೆಯ ಸ್ಪಾ ಕೇಂದ್ರವೊಂದರಲ್ಲಿ ಇನ್ಸ್‌ಪೆಕ್ಟರ್‌ವೊಬ್ಬ ಕರ್ತವ್ಯದಲ್ಲಿದ್ದಾಗಲೇ ಸ್ಪಾ ಸೆಂಟರ್‌ಗೆ ಬಂದು ಮಸಾಜ್‌ ಮಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಈ ಪ್ರಕರಣದಲ್ಲಿ ಕ್ರಮ ತೆಗೆದುಕೊಂಡಿರುವ ಪ್ರಯಾಗ್‌ ರಾಜ್‌ ಎಸ್‌ಎಸ್‌ಪಿ ಶೈಲೇಶ್‌ ಕುಮಾರ್‌ ಪಾಂಡೆ, ಈ ಇನ್ಸ್‌ಪೆಕ್ಟರ್‌ಅನ್ನು ಅಮಾನತು ಮಾಡಿದ್ದಾರೆ. ಪ್ರಯಾಗರಾಜ್‌ನಲ್ಲಿರುವ ಸ್ಪಾ ಸೆಂಟರ್‌ನ ವೈರಲ್ ವೀಡಿಯೊ ಕುರಿತು ಉತ್ತರ ಪ್ರದೇಶದಲ್ಲಿ ಪೊಲೀಸ್‌ ಇಲಾಖೆಯ ಕುರಿತಾಗಿಯೇ ಜನರು ಕುಹಕ ಮಾಡಿದ್ದರು. ಸ್ಪಾ ಸೆಂಟರ್‌ನಲ್ಲಿ ಸಮವಸ್ತ್ರ ಧರಿಸಿದ ಇನ್‌ಸ್ಪೆಕ್ಟರ್ ಮಸಾಜ್ ಪಡೆಯುತ್ತಿರುವ ವಿಡಿಯೋ ಇದಾಗಿದ್ದು, ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಂದಲೂ ಸೂಚನೆ ಬಂದಿತ್ತು. ಪೊಲೀಸ್‌ ಇಲಾಖೆಯ ಪ್ರಮುಖರಿಗೂ ಕೂಡ ಈ ವಿಡಿಯೋಗಳು ಸಿಕ್ಕಿದ್ದವು. ಇದೀಗ ವಿಡಿಯೋ ವೈರಲ್ ಆದ ನಂತರ ಎಸ್‌ಎಸ್‌ಪಿ ಅವರನ್ನು ಅಮಾನತುಗೊಳಿಸಿದ್ದಾರೆ. ವಿಡಿಯೋದಲ್ಲಿ ಸಮವಸ್ತ್ರ ಧರಿಸಿರುವ ಇನ್ಸ್‌ಪೆಕ್ಟರ್ ಯುವತಿಯೊಬ್ಬಳು ಮಸಾಜ್ ಮಾಡುತ್ತಿರುವ ದೃಶ್ಯವಿದೆ.

ಪ್ರಯಾಗ್‌ರಾಜ್ ಎಸ್‌ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ ಅಮಾನತುಗೊಳಿಸಿರುವ ಇನ್‌ಸ್ಪೆಕ್ಟರ್ ಸಿವಿಲ್ ಲೈನ್ ಔಟ್‌ಪೋಸ್ಟ್‌ನ ಉಸ್ತುವಾರಿಯಲ್ಲಿದ್ದು. ಇನ್ಸ್ ಪೆಕ್ಟರ್ ಹೆಸರು ರಾಕೇಶ್ ವರ್ಮಾ. ಸ್ಪಾ ಸೆಂಟರ್‌ನಲ್ಲಿ ಸಮವಸ್ತ್ರ ಧರಿಸಿದ್ದ ಇನ್ಸ್‌ಪೆಕ್ಟರ್ ಯುವತಿಯ ಕೈಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದಾದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ವೈರಲ್ ಆಗಿರುವ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ವಿಚಾರವಾಗಿ ಸಿಎಂ ಟ್ವಿಟರ್ ಮೂಲಕ ವಿಡಿಯೋ ಸಮೇತ ಯೋಗಿ ಆದಿತ್ಯನಾಥ್ ಹಲವು ಮಂದಿ ದೂರಿದ್ದಾರೆ. ಸ್ಪಾ ಸೆಂಟರ್ ಅನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂಬ ಆರೋಪವೂ ಇನ್ಸ್ ಪೆಕ್ಟರ್ ಮೇಲಿತ್ತು. ಬಳಿಕ ವಿಷಯ ತಿಳಿದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.