ಹರ್ಯಾಣ(ಅ.26): ಆಂಬುಲೆನ್ಸ್‌ ಮೇಲೆ ಲಂಕಾಧಿಪತಿ ರಾವಣನ ಪ್ರತಿಮೆಯೊಂದು ಇರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವರಲ್ ಆಗಿದೆ. ಈ ವಿಡಿಯೋ ಹರ್ಯಾಣದ್ದೆನ್ನಲಾಗಿದೆ. ಇನ್ನು ಈ ವಿಡಿಯೋ ನೋಡಿ ಪ್ರತಿಯೊಬ್ಬರೂ 'ರಾವಣನಿಗೂ ಕೊರೋನಾ ತಗುಲಿದೆ ಎಂದು ತಮಾಷೆ ಮಾಡಲಾರಂಭಿಸಿದ್ದಾರೆ.

ಐಎಎಸ್ ಆಫೀಸರ್ ಅವನೀಶ್ ಶರಣ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಅವರ ಈ ವಿಡಿಯೋ ಭಾರರೀ ವೈರಲ್ ಆಗಿದೆ. ವಿಜಯ ದಶಮಿಗೂ ಮುನ್ನ ಕಂಡು ಬಂದ ಈ ದೃಶ್ಯ ಸದ್ಯ ಎಲ್ಲರನ್ನೂ ಆಕರ್ಷಿಸಿದೆ. 

ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬ ರಾವಣನನ್ನು ದಹಿಸುವ ವೇಳೆ ಅದರಿಂದ ದೂರವಿರಿ ಎಂದು ಯಾಕೆ ಹೇಳುತ್ತಾರೆಂದು ಅರ್ಥವಾಯ್ತು ಎಂದಿದ್ದಾರೆ.