ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ನಗು ತರಿಸಿದರೆ, ಕೆಲವರ ಬದುಕಿನ ಕಥೆಗಳನ್ನು ನಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ. ವೈರಲ್ ಆಗಿರುವ ಅಂಥದ್ದೇ ವಿಡಿಯೋ ಒಂದರಲ್ಲಿ ತನ್ ಇಳಿ ವಯಸ್ಸಿನಲ್ಲೂ ಲಾಡು ಮಾರಿ ಬದುಕು ಸಾಗಿಸುತ್ತಿರುವ ವ್ಯಕ್ತಿಯ ಜೀವನ ಕಂಡು ಸೋಶಿಯಲ್ ಮೀಡಿಯಾ ಜನ ಭಾವುಕರಾಗಿದ್ದಾರೆ.
ಜಗತ್ತಿನಲ್ಲಿ ದಿನದ ಎರಡು ಹೊತ್ತಿನ ಊಟಕ್ಕೆ ಪ್ರತಿನಿತ್ಯ ಕಷ್ಟಪಡುವ ಸಾಕಷ್ಟು ಜನರಿದ್ದಾರೆ. ಕೆಲವರಂತೂ ತಮ್ಮ ಇಡೀ ಜೀವನವನ್ನು ಪರಿಶ್ರಮದಲ್ಲೇ ಕಳೆಯುತ್ತಾರೆ. ಆದರೆ, ದಿನದ ಕೊನೆಯಲ್ಲಿ ಅವರಿಗೆ ಸಿಗೋದು ಎರಡು ಹೊತ್ತಿನ ಊಟಕ್ಕೆ ಆಗುವಷ್ಟ ಹಣ ಮಾತ್ರ. ಇದಕ್ಕಿಂತ ಹೆಚ್ಚಿನದನ್ನು ಪಡೆಯಲು ಕೂಡ ಅವರಿಗೆ ಸಾಧ್ಯವಾಗೋದಿಲ್ಲ. ಅವರು ಬದುಕಿನ ನಿತ್ಯ ಹೋರಾಟದ ಕಥೆಗಳಿಗೆ ಯಾವುದೇ ಕೊನೆ ಇರೋದಿಲ್ಲ. ಈ ಸಾಲುಗಳನ್ನು ನೆನಪಿಸುವಂಥ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ವೃದ್ಧ ವ್ಯಕ್ತಿಯೊಬ್ಬ ತನ್ನ ಬದುಕಿನ ಕಥೆಗಳನ್ನು ಹೇಳುತ್ತಾ ಕಣ್ಣೀರಾಗಿದ್ದಾರೆ. ಈತನ ಕಥೆಗಳನ್ನು ಕೇಳಿ ಸೋಶಿಯಲ್ ಮೀಡಿಯಾ ಜನ ಕೂಡ ಭಾವುಕರಾಗಿದ್ದಾರೆ. ಇಲ್ಲಿನ ವೃದ್ಧ, ಲಾಡು ತುಂಬಿದ ಪಾತ್ರೆಯನ್ನು ತಲೆ ಮೇಲೆ ಹೊತ್ತು ಅದನ್ನುಮಾರಾಟ ಮಾಡುವ ಮೂಲಕ ಜೀವನ ಸಾಗುತ್ತಿದ್ದಾರೆ. ಹೀಗೆ ಮಾಡಲು ಆರಂಭಿಸಿ 45 ವರ್ಷಗಳು ಕಳೆದಿವೆ ಎನ್ನುತ್ತಾರೆ. 10 ರೂಪಾಯಿಗೆ ಎರಡು ಲಡ್ಡು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ತನ್ನ ಜೀವನದ ಕಷ್ಟಗಳನ್ನು ಹೇಳುತ್ತಾ ಆತ ಕಣ್ಣೀರಿಟ್ಟಾಗ ಈ ವಿಡಿಯೋವನ್ನು ನೋಡಿದ ಜನ ಕೂಡ ಭಾವಿಕರಾಗಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚೆಫ್ ಪಾಥಿಕ್ ಎನ್ನುವ ಅಕೌಂಟ್‌ನಿಂದ ಈ ವಿಡಿಯೋವನ್ನು ಶೇರ್ ಮಾಡಕೊಳ್ಳಲಾಗಿದೆ. ಇದರಲ್ಲಿ ಹಿರಿಯ ವಯಸ್ಸಿನ ವ್ಯಕ್ತಿ ಮಾತನಾಡಿದ್ದು, 10 ರೂಪಾಯಿಗೆ ಎರಡರಂತೆ ನಾನು ಲಾಡು ಮಾರಾಟ ಮಾಡುತ್ತೇನೆ. ನನ್ನ ತಲೆಯ ಮೇಲೆ ಈ ಪಾತ್ರೆ ಹೊತ್ತು 45 ವರ್ಷವಾಗಿದೆ..' ಎಂದು ಹೇಳಿದ್ದಾರೆ. ಇದೇ ವೇಳೆ, ಇಷ್ಟು ವರ್ಷಗಳಿಂದ ನೀವು ಲಡ್ಡು ಮಾರಾಟ ಮಾಡಲು ಕಾರಣವೇನು ಎಂದು ಹೇಳಿದ್ದಾರೆ. ಈ ವೇಳ ಕಣ್ಣೀರು ಇಡುತ್ತಲೇ ಮಾತನಾಡುವ ಆತ, 'ಇದೇ ರೀತಿ ಲಾಡುಗಳನ್ನು ಮಾರಾಟ ಮಾಡುತ್ತೇನೆ...' ಎನ್ನುತ್ತಲೇ ತನ್ನ ಹೊಟ್ಟೆಯನ್ನು ತೋರಿಸಿ ಕಣ್ಣೀರಿಡುತ್ತಾರೆ. ಅಂದರೆ, ಹಸಿವುಗಾಗಿಯೇ ಈ ರೀತಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಈ ವೀಡಿಯೊ 4.1 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 5.32 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಜನರು ವೀಡಿಯೊಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಸೋಶಿಯಲ್ ಮೀಡಿಯಾ ಯೂಸರ್‌ಗಳು, ದಯವಿಟ್‌ಟು ಈ ಅಜ್ಜನಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಗಾಜಿಯಾಬಾದ್‌ನ ಜನತೆಗೆ ನಾನು ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ನಮ್ಮ ಜನರ ಜೀವನದ ಪ್ರಯಾಣ ಬಹಳ ವಿಚಿತ್ರವಾಗಿದೆ. ಕೆಲವರಲ್ಲಿ ಬಹಳಷ್ಟು ಹಣ ಇರುತ್ತದೆ. ಹಣದಲ್ಲೇ ಮುಳುಗಿರುತ್ತಾರೆ. ಕೆಲವರಿಗೆ ಜೀವನದ ಎಲ್ಲದರಲ್ಲೂ ಅತೃಪ್ತಿಇರುತ್ತದೆ..' ಎಂದಿದ್ದಾರೆ.
ಪ್ರಸಿದ್ಧ ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ ಫುಡ್ ರಿಯಾಲಟಿ ಶೋನಲ್ಲಿ ಪಾನಿಪುರಿ ಹವಾ!
ಮನೆಯಲ್ಲಿನ ಕಷ್ಟಗಳು ಹಾಗೂ ಹೊಟ್ಟೆಯಲ್ಲಿನ ಹಸಿವು ಮನುಷ್ಯನಿಂದ ಏನು ಬೇಕಾದರೂ ಮಾಡಿಸುತ್ತದೆ ಎಂದು ಮೂರನೇ ವ್ಯಕ್ತಿಯೊಬ್ಬರು ಬರೆದಿದ್ದಾರೆ. 'ಅಣ್ಣ, ಈ ಬಡತನ ನನ್ನನ್ನು ತುಂಬಾ ಅಳುವಂತೆ ಮಾಡುತ್ತದೆ' ಎಂದು ಬರೆದಿದ್ದಾರೆ. ಇವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ, ಈ ವಯಸ್ಸಿನಲ್ಲಿ ಇಂಥ ವ್ಯಕ್ತಿಗಳು ನೆಮ್ಮದಿಯ ಬದುಕು ಕಾಣಬೇಕು ಎಂದು ಹಲವರು ಬರೆದಿದ್ದಾರೆ.
ಇವ್ರು ಮೋದಿ ತರಾನೇ.. ಆದ್ರೆ ಮೋದಿ ಅಲ್ಲ: ವೈರಲ್ ಆಯ್ತು ಪಾನಿಪುರಿ ಮಾರುವ ಜ್ಯೂ.ಮೋದಿ ವಿಡಿಯೋ!
