ಅಗಲಿದ ಪ್ರೀತಿಯ ಹಸುವಿಗೆ ಮನುಷ್ಯರಂತೆ ಅಂತಸಂಸ್ಕಾರ ನಡೆಸಿದ ಕುಟುಂಬ: ವೀಡಿಯೋ ವೈರಲ್

ಇಲ್ಲೊಂದು ಕಡೆ ಮನೆಯಲ್ಲಿದ್ದ ಹಸುವೊಂದು ಹಠಾತ್ ಸಾವಿಗೀಡಾಗಿದ್ದು, ಇದರಿಂದ ದುಃಖಿತರಾದ ಮನೆ ಮಂದಿ ಆ ಹಸುವಿಗೂ ಮನುಷ್ಯರಿಗೆ ಮಾಡುವಂತೆಯೇ ಎಲ್ಲಾ ಕ್ರಮಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನಡೆಸಿದ್ದಾರೆ. ಅಲ್ಲದೇ ಹಸುವಿನ ಸಾವಿಗೆ ಇಡೀ ಮನೆ ಮಂದಿಯೇ ಕಣ್ಣೀರಿಟ್ಟು ಅತ್ತಿದ್ದಾರೆ.

viral video Family Performs Last Ritual to their only Cow akb

ಸಾಕು ಪ್ರಾಣಿಗಳಿಗೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವಿದೆ. ಅದಕ್ಕಿಂತಲೂ ಹೆಚ್ಚಾಗಿ ಅವುಗಳನ್ನು ಮನೆಯ ಒಬ್ಬ ಸದಸ್ಯರಂತೆ ಭಾವಿಸಿ ಅವುಗಳ ಮೇಲೆ ಮನೆ ಮಂದಿ ಪ್ರೀತಿ ತೋರುತ್ತಾರೆ. ಕಾಳಜಿ ವಹಿಸುತ್ತಾರೆ. ಅದರಲ್ಲೂ ಗೋವಿಗಂತೂ ದೇವರ ಸ್ಥಾನ. ಪ್ರಾಣಿಗಳಿಗೇನಾದರು ಆದರೆ ಮನೆ ಮಂದಿಯೆಲ್ಲರೂ ಕಣ್ಣೀರು ಹಾಕಿ ಅತ್ತಿರುವಂತಹ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಪ್ರಾಣಿಗಳು ಕೂಡ ತಮ್ಮ ಮನೆ ಮಂದಿಯನ್ನು ಅಷ್ಟೇ ಕಾಳಜಿಯಿಂದ ನೋಡುತ್ತವೆ. ಅಪಾಯದ ಸಂದರ್ಭದಲ್ಲಿ ಎಚ್ಚರಿಸುತ್ತವೆ. ಮನೆ ಮಂದಿಯನ್ನು ಅಪಾಯದಿಂದ ಸಾಕುಪ್ರಾಣಿಗಳು ರಕ್ಷಿಸಿದಂತಹ ಹಲವು ಘಟನೆಗಳು ನಡೆದಿವೆ. ಹೀಗಿರುವಾಗ ಇಲ್ಲೊಂದು ಕಡೆ ಮನೆಯಲ್ಲಿದ್ದ ಹಸುವೊಂದು ಹಠಾತ್ ಸಾವಿಗೀಡಾಗಿದ್ದು, ಇದರಿಂದ ದುಃಖಿತರಾದ ಮನೆ ಮಂದಿ ಆ ಹಸುವಿಗೂ ಮನುಷ್ಯರಿಗೆ ಮಾಡುವಂತೆಯೇ ಎಲ್ಲಾ ಕ್ರಮಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನಡೆಸಿದ್ದಾರೆ. ಅಲ್ಲದೇ ಹಸುವಿನ ಸಾವಿಗೆ ಇಡೀ ಮನೆ ಮಂದಿಯೇ ಕಣ್ಣೀರಿಟ್ಟು ಅತ್ತಿದ್ದಾರೆ. ಈ ವೀಡಿಯೋವೊಂದು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಜನರು ಕೂಡ ಭಾವುಕರಾಗಿದ್ದಾರೆ. 

 ವೀಡಿಯೋ ನೋಡಿದರೆ ಎಂಥವರಿಗೂ ಕಣ್ಣಾಲಿಗಳು ತುಂಬಿ ಬರುತ್ತವೆ. ಮೃತರಾದ ನಂತರ ಮನುಷ್ಯರಿಗೆ ಹೇಗೆ ಸ್ನಾನ ಮಾಡಿಸಿ ಅರಿಶಿಣದ ಸಿಂಗಾರ ಮಾಡುತ್ತಾರೆಯೇ ಹಾಗೆ ಇಲ್ಲಿ ಮನೆ ಮಂದಿ ಹಸುವಿಗೆ ಸ್ನಾನ ಮಾಡಿಸಿ ಮೈ ತುಂಬಾ ಅರಿಶಿಣವನ್ನು ಉಜ್ಜಿ ಕೊಂಬಿಗೆ ಅರಿಶಿಣದ ಅಲಂಕಾರ ಮಾಡಿ, ಕತ್ತಿಗೆ ಹಸುಗಳಿಗೆ ಹಾಕುವಂತಹ ಆಭರಣಗಳನ್ನು ಹಾಕಿ ಶೃಂಗಾರ ಮಾಡಿದ್ದಲ್ಲದೇ ಬಳಿಕ ಹಸುವಿನ ಮೈ ಮೇಲಿ ಬಿಳಿ ಬಟ್ಟೆಯನ್ನು ಹಾಸಿ ಅಂತ್ಯಸಂಸ್ಕಾರದ ವೇಳೆ ಮಾಡುವಂತಹ ಎಲ್ಲಾ ಕ್ರಮಗಳನ್ನು ಮಾಡಿದ್ದಾರೆ. ಹಸುವಿನ ಮೃತ ಶರೀರದ ಮುಂದೆ ಕುಳಿತು ಸಣ್ಣ ಮಕ್ಕಳು, ಹೆಂಗಸರು ಗಂಡಸರು ಮನೆಮಂದಿಯೆಲ್ಲಾ ಸೇರಿ ಜೋರಾಗಿ ತಮ್ಮ ಹತ್ತಿರದ ಸಂಬಂಧಿಯೇ ಹೊರಟು ಹೋದಂತೆ ಅಳುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಡಿಟೇಲ್ ಇಲ್ಲ, ದೃಶ್ಯಾವಳಿಗಳನ್ನು ಗಮನಿಸಿದಾಗ ಇದು ಬಹುಶಃ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಹಸು, ಆನೆ, ಇಲಿ, ನಾಯಿ...ದೇಶದಲ್ಲಿ ಭಕ್ತಿಯಿಂದ ಪೂಜೆ ಮಾಡುವ ಪ್ರಾಣಿ-ಪಕ್ಷಿಗಳು!

ಈ ವೀಡಿಯೋ ನೋಡಿದ ಜನರು ಕೂಡ ತೀವ್ರ ಭಾವುಕರಾಗಿದ್ದಾರೆ. ಕೆಲವರು ಇದು ನಮ್ಮ ಸಂಸ್ಕೃತಿ ಎಂದರೆ ಮತ್ತೆ ಕೆಲವರು ಇದು ಪ್ರೀತಿ ಎಂದಿದ್ದಾರೆ. ಅವರು ಬಡವವರಾಗಿರಬಹುದು, ಆದರೆ ಅಂತ್ಯಸಂಸ್ಕಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಇದನ್ನು ಮಾಡಲು ಹಣದ ಅಗತ್ಯವಿಲ್ಲ, ಇದು ಸಂಪ್ರದಾಯ ಹಾಗೂ ಹಣ ಸಂಪ್ರದಾಯವನ್ನು ನಿರ್ಧರಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹಸುಗಳು ದೇವರಲ್ಲ ನಾವು ಅವುಗಳನ್ನು ತಾಯಿ ಎಂದೆ ನಂಬುತ್ತೇವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಮೃತಪಟ್ಟ ಹಸುವಿಗೆ ಮನುಷ್ಯರಂತೆ ಅಂತ್ಯಸಂಸ್ಕಾರ ಮಾಡಿ ಅಳುತ್ತಾ ಭಾರವಾದ ಹೃದಯದಿಂದ ಈ ಕುಟುಂಬ ಕಳಿಸಿಕೊಟ್ಟಿದ್ದು, ನೋಡುಗರ ಕಣ್ಣನ್ನು ತೇವಗೊಳಿಸುತ್ತಿದೆ. 

ಹಸುಗಳಿದ್ದ ಶೆಡ್‌ಗೆ ಬಂದ ಸಿಂಹಗಳ ಜೊತೆ ಸಾಕುನಾಯಿಗಳ ಕಾದಾಟ: ವೀಡಿಯೋ ಸಖತ್ ವೈರಲ್

 

 

Latest Videos
Follow Us:
Download App:
  • android
  • ios