ಈಗ ಡಾನ್ಸ್ ಮಾಡೋಕೆ, ವಿಡಿಯೋ ಮಾಡೋಕೆ ಅದೇ ಸ್ಥಳ ಆಗ್ಬೇಕು, ಇದೇ ಜಾಗ ಆಗ್ಬೇಕು ಅಂದೇನಿಲ್ಲ. ಎಲ್ಲಿ ಬೇಕಾದ್ರೂ ಜನರು ವಿಡಿಯೋ ಮಾಡ್ತಾರೆ. ರೈಲ್ವೆ ನಿಲ್ದಾಣದಲ್ಲೂ ಇದು ಕಾಮನ್ ಆಗಿದೆ. ಅಂತಹದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ.  

ಸಾಮಾಜಿಕ ಮಾಧ್ಯಮಗಳ ಟ್ರೆಂಡ್ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ಯುಟ್ಯೂಬ್ ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಅದ್ರಲ್ಲಿ ಪಾಲ್ಗೊಳ್ಳುವ, ವಿಡಿಯೋ ಮಾಡುವ ಜನರ ಸಂಖ್ಯೆ ಡಬಲ್ ಆಗಿದೆ. ಜನರು ಜನಪ್ರಿಯತೆಗಾಗಿ ಅಸಂಪ್ರದಾಯಿಕ ವಿಧಾನಗಳನ್ನು ಅಳವಡಿಸಿಕೊಳ್ತಿದ್ದಾರೆ. ಯಾವುದೇ ಜನನಿಬಿಡಿ ಪ್ರದೇಶಕ್ಕೆ ಹೋಗಿ, ಶಾಂತವಾದ ಜಾಗಕ್ಕೆ ಹೋಗಿ ಅಲ್ಲಿ ಕ್ಯಾಮರಾ ಹಿಡಿದು ವಿಡಿಯೋ ಶೂಟ್ ಮಾಡುವ ಒಂದಿಬ್ಬರಾದ್ರೂ ನಿಮ್ಮ ಕಣ್ಣಿಗೆ ಬೀಳ್ತಾರೆ. 

ಹಿಂದೆ ಜನರು ಸಾರ್ವಜನಿಕ (Public) ಪ್ರದೇಶದಲ್ಲಿ ಸಭ್ಯತೆಯನ್ನು ಪ್ರದರ್ಶನ ಮಾಡ್ತಿದ್ದರು. ನಮ್ಮನ್ನು ನಾಲ್ಕೈದು ಮಂದಿ ನೋಡ್ತಿದ್ದಾರೆ ಎನ್ನುವ ಭಯ (Fear), ಮುಜುಗರ ಅವರಲ್ಲಿರುವ ಕಾರಣ, ಧರಿಸುವ ಬಟ್ಟೆಯಿಂದ ಹಿಡಿದು ಅಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಗಮನಿಸುತ್ತಿದ್ದರು. ಆದ್ರೆ ಈಗ ಸಾರ್ವಜನಿಕ ಪ್ರದೇಶಗಳ ರೂಲ್ಸ್ ಬದಲಾಗಿದೆ. ಇಲ್ಲಿ ಎಲ್ಲವೂ ಖುಲ್ಲಂಖುಲ್ಲ. ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಮಾರುಕಟ್ಟೆ ಎನ್ನುವ ಬೇಧವಿಲ್ಲ. ಎಲ್ಲಿ ಬೇಕಾದ್ರೂ ಮೈಚಳಿ ಬಿಟ್ಟು ಡಾನ್ಸ್ (Dance) ಮಾಡುವ, ಡ್ರಾಮಾ ಮಾಡುವ ಜನರನ್ನು ನೀವು ನೋಡ್ಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೆ ಸಾವಿರಾರು ಇಂಥ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ಜೋಡಿಯ ಡಾನ್ಸ್ ಕಿಚ್ಚು ಕಚ್ಚಿಸಿದೆ.

ಜಗತ್ತಿನ ಅತೀ ದುಬಾರಿ ಹೈಹೀಲ್ಸ್‌ಗಳಿವು: ಇವುಗಳ ಬೆಲೆಗೆ ದೊಡ್ಡ ಆಸ್ತಿಯನ್ನೇ ಕೊಳ್ಬಹುದು...!

ರೈಲ್ವೆ ನಿಲ್ದಾಣದಲ್ಲಿ ಭರ್ಜರಿ ಡಾನ್ಸ್ : @ankit_dancer01 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರೈಲ್ವೆ ಫ್ಲಾಟ್ಫಾರ್ಮ್ ನಲ್ಲಿ ಜೋಡಿ ಡಾನ್ಸ್ ಮಾಡೋದನ್ನು ನೀವು ನೋಡ್ಬಹುದು. ಭೋಜ್ಪುರಿ ಹಾಡಿಗೆ ಇವರು ನೃತ್ಯ ಮಾಡಿದ್ದಾರೆ. ಜನನಿಬಿಡ ರೈಲ್ವೆ ನಿಲ್ದಾಣದಲ್ಲಿ ಜನರು ಅತ್ತಿಂದಿತ್ತ ಓಡಾಡ್ತಿದ್ದಾರೆ. ಪಕ್ಕದಲ್ಲೇ ರೈಲು ನಿಂತಿದೆ. ರೈಲಿನಿಂದ ಇಳಿಯುವ ಹುಡುಗಿ ಟ್ರೆಂಡಿಂಗ್ ಭೋಜ್ಪುರಿ ಹಾಡಿಗೆ ಡಾನ್ಸ್ ಮಾಡಲು ಶುರು ಮಾಡ್ತಾಳೆ. ಆಕೆ ಹಿಂದೆಯೇ ಬರುವ ಹುಡುಗ ಕೂಡ ಸ್ಟೆಪ್ಸ್ ಹಾಕ್ತಾನೆ. ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. 243,000 ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ.

ಮಕ್ಕಳ ಆಯಾಸ ಹೋಗಿಸಲು ಹೊಸ ಟ್ರೆಂಡ್, ಶಾಲೆಯಲ್ಲೇ ಮಲಗಲು ಅವಕಾಶ!

ಅನೇಕ ವೀಕ್ಷಕರು ಈ ಜೋಡಿಯ ಪ್ರಭಾವಶಾಲಿ ನೃತ್ಯ (Command over Dance) ಕೌಶಲ್ಯ (skill) ಮತ್ತು ಪ್ರತಿಭೆಗಾಗಿ (Talent) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೂ ಕೆಲವರ ಕೋಪಕ್ಕೆ ಈ ಜೋಡಿ ಗುರಿಯಾಗಿದ್ದಾರೆ. ಅವರು ಹೇಗೆ ಡಾನ್ಸ್ ಮಾಡಿದ್ರು ಎನ್ನುವದಕ್ಕಿಂತ ಎಲ್ಲಿ ಡಾನ್ಸ್ ಮಾಡಿದ್ರು ಎಂಬುದು ಇಲ್ಲಿ ಮುಖ್ಯವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಅವರು ಡಾನ್ಸ್ ಮಾಡಿರೋದು ಅನೇಕರ ಕಣ್ಣು ಕೆಂಪಗೆ ಮಾಡಿದೆ. ಕೇವಲ ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡ್ಬೇಕಾ ಎಂಬ ಪ್ರಶ್ನೆ ಇಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರ ಕಮೆಂಟ್ ಹೀಗಿದೆ : ಇನ್ಸ್ಟಾದಲ್ಲಿ ವಿಡಿಯೋ ವೀಕ್ಷಣೆ ಮಾಡಿದ ಜನರಿಂದ ಗಂಭೀರ ಆರೋಪದ ಜೊತೆಗೆ ಹೊಗಳಿಕೆ ಕೂಡ ಸಿಕ್ಕಿದೆ. ಹಾಗೆಯೇ ತಮಾಷೆ ಕಮೆಂಟ್ ಕೂಡ ಬಂದಿದೆ. ವ್ಯಕ್ತಿಯೊಬ್ಬರು ಇವರ ಡಾನ್ಸ್ ಮೆಚ್ಚಿದ್ದಲ್ಲದೆ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇಷ್ಟು ಆತ್ಮವಿಶ್ವಾಸ ಜೀವನದಲ್ಲಿ ಬೇಕು ಎಂದಿದ್ದಾರೆ. ಸಾರ್ವಜನಿಕ ಪ್ರದೇಶ ಹಾಗೂ ಖಾಸಗಿ ಪ್ರದೇಶದ ವ್ಯತ್ಯಾಸದ ಬಗ್ಗೆ ಕಮೆಂಟ್ ಮಾಡ್ತಾ ವ್ಯಕ್ತಿಯೊಬ್ಬ, ನಾನು ಡಾನ್ಸ್ ಮಾಡುವಾಗ ನನ್ನ ರೂಮಿಗೆ ಅಮ್ಮ ಬಂದ್ರೂ ನಾನು ಡಾನ್ಸ್ ಬಂದ್ ಮಾಡ್ತಿದ್ದೆ ಎಂದು ತಮಾಷೆ ಮಾಡಿದ್ದಾನೆ. ಡಾನ್ಸ್ ಇಂಡಿಯಾ ಡಾನ್ಸ್ ನ ಭವಿಷ್ಯದ ವಿಜೇತರು ಎಂದು ಮತ್ತೊಬ್ಬರು ಹೇಳಿದ್ದಾರೆ. ಕಮೆಂಟ್ ಸೆಕ್ಷನ್ ಪೂರ್ತಿ ಸೂಪರ್, ಗುಡ್, ಸೂಪರ್ ಡಾನ್ಸ್ ಎಂಬುದೇ ತುಂಬಿ ಹೋಗಿದೆ. 

View post on Instagram