ಪುಣೆಯಲ್ಲಿ ಫೋನ್ ನೋಡುತ್ತಾ ಮಲಗಿದ್ದ ಯುವಕನ ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ.
ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬಳು ಫೋನ್‌ನಲ್ಲಿ ಮಾತನಾಡುತ್ತಾ ತನ್ನ ಮಗುವನ್ನು ಆಟೋದಲ್ಲೇ ಬಿಟ್ಟು ಹೋದ ವೀಡಿಯೋವೊಂದು ವೈರಲ್ ಅಗಿತ್ತು. ನಂತರ ಜನ ಆ ವೀಡಿಯೋವನ್ನು ಸ್ಕ್ರಿಫ್ಟೆಡ್ ಎಂದಿದ್ದರು. ಆದರೆ ಈಗ ಇಲ್ಲೊಂದು ಕಡೆ ಫೋನ್ ನೋಡುತ್ತಾ ಮಲಗಿದ್ದವನಿಗೆ ತನ್ನ ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಕೊಂಡು ಹೋದರೂ ಗೊತ್ತಾಗದಂತಹ ಘಟನೆ ನಡೆದಿದೆ.
ಫೋನ್‌ನಲ್ಲಿ ಮುಳುಗಿದ್ದ ಮಾಲೀಕ: ನಾಯಿಯ ಹೊತ್ತೊಯ್ದ ಚಿರತೆ
ಫೋನ್‌ನಲ್ಲಿ ಮುಳುಗಿದ ಬಹುತೇಕ ಜನರ ಸ್ಥಿತಿ ಇದ್ದು, ತಮ್ಮ ಸುತ್ತಲೇ ದೊಡ್ಡ ಅನಾಹುತವೇ ಸಂಭವಿಸಿದರು ಇವರಿಗೆ ಗೊತ್ತೆ ಆಗಲ್ಲ, ಅಂದಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯ ಭೋರ್ ತಾಲೂಕಿನ ದೇಗಾಂವ್ ಗ್ರಾಮದಲ್ಲಿ ಬೆಳಗ್ಗಿನ ಜಾವ 3.30ರ ಸುಮಾರಿಗೆ ಈ ಯುವಕ ಫೋನ್ ನೋಡುತ್ತಾ ಮನೆ ಹೊರಗೆ ಅಂಗಳದಲ್ಲಿದ್ದ ಮಂಚದಲ್ಲಿ ಮಲಗಿದ್ದ ಈತ ಪಕ್ಕದಲ್ಲೇ ಈತನ ಶ್ವಾನವೂ ಮಲಗಿತ್ತು. ಆದರೆ ಚಾಣಾಕ್ಷ ಚಿರತೆ ಕೆಲ ಸೆಕೆಂಡ್‌ಗಳಲ್ಲಿ ಹೊಂಚು ಹಾಕಿ ಬಂದು ಈತನ ಪಕ್ಕದಲ್ಲಿಯೇ ಮಲಗಿದ್ದ ನಾಯಿಯನ್ನು ಹೊತ್ತೊಯ್ದಿದೆ. ಸದ್ಯ ಚಿರತೆ ಇವನನ್ನೇ ಹೊತ್ತೊಯ್ಯದೇ ಬಿಟ್ಟಿದ್ದು ದೊಡ್ಡ ಪುಣ್ಯ. ಪ್ರಾಣಿಗಳ ಆವಾಸ ಸ್ಥಾನದ ಮೇಲೆ ಮಾನವರ ಅತಿಕ್ರಮಣದಿಂದಾಗಿ ಪುಣೆಯಲ್ಲಿ ಇತ್ತೀಚೆಗೆ ಚಿರತೆಯಂತಹ ಕಾಡುಪ್ರಾಣಿಗಳ ಹಾವಳಿ ಬಹಳ ತೀವ್ರಗೊಂಡಿದ್ದು, ಅದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಭಾನುವಾರ ಬೆಳಗ್ಗೆ 3.30ರ ಸುಮಾರಿಗೆ ಈ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿದು ಕೊಟ್ಟ ತುಮಕೂರಿನ ವೀರ: ವೀಡಿಯೋ ಸಖತ್ ವೈರಲ್
ವೈರಲ್ ಆದ ಭಯಾನಕ ವೀಡಿಯೋ
ಪುಣೆ ಫಸ್ಟ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಮಾಲೀಕ ಫೋನ್‌ನಲ್ಲಿ ಮುಳುಗಿದ್ದ ವೇಳೆ ಚಿರತೆ ಆತನ ಪ್ರೀತಿಯ ಸಾಕುನಾಯಿಯನ್ನು ಹೊತ್ತೊಯ್ದಿದೆ. ಭೋರ್ ತಾಊಕಿನ ದೇಗಾಂವ್‌ನಲ್ಲಿ ಘಟನೆ ನಡೆದಿದೆ ಎಂದು ಅವರು ವೀಡಿಯೋ ಪೋಸ್ಟ್ ಮಾಡಿ ವಿವರಿಸಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಇವರು ಮನೆಯ ಹೊರಗೆ ಮಂಚದಲ್ಲಿ ಮಾಲೀಕ ಮಲಗಿದ್ದು, ಪಕ್ಕದಲೇ ನೆಲದಲ್ಲಿ ನಾಯಿ ನಿದ್ದೆಗೆ ಜಾರಿದೆ. ಈ ವೇಳೆ ಚಿರತೆಯೊಂದು ನಿಧಾನವಾಗಿ ನಡೆದುಕೊಂಡು ಬಂದು ಅತ್ತಿತ್ತ ನೋಡಿ ಛಂಗನೆ ನಾಯಿಯ ಕತ್ತಿಗೆ ಬಾಯಿ ಹಾಕಿ ಎಳೆದುಕೊಂಡು ಹೋಗಿದ್ದು, ನಾಯಿಯ ಮಾಲೀಕ ಫೋನ್‌ನಿಂದ ಹೊರಬರುವಷ್ಟರಲ್ಲಿ ನಾಯಿ ಮಾಯವಾಗಿದೆ.
ಮನೆಯೊಳಗೇ ನುಗ್ಗಿದ ಚಿರತೆ: ನಾಯಿ ಬೊಗಳಿದ್ರೂ ಏಳಲಿಲ್ಲ ಮನೆಯವರು! ಮುಂದೇನಾಯ್ತು? ಶಾಕಿಂಗ್ ವಿಡಿಯೋ ವೈರಲ್
ಇತ್ತ ಚಿರತೆ ದಾಳಿಯ ಸದ್ದಿನಿಂದ ಮಾಲೀಕ ಎದ್ದು ನೋಡಿದಾಗ ನಾಯಿಯನ್ನು ಚಿರತೆ ಹೊತ್ತೊಯ್ದು ಆಗಿತ್ತು. ಕೂಡಲೇ ಆತ ಕಿರುಚಾಡುತ್ತಾ ತನ್ನ ಮನೆಯವರನ್ನು ಹಾಗೂ ನೆರೆಹೊರೆಯ ಮನೆಯವರನ್ನು ಎಬ್ಬಿಸಿದ್ದಾನೆ. ಅಷ್ಟರಲ್ಲಿ ಚಿರತೆ ಓಡಿ ಹೋಗಿದೆ. ಈ ಸಾಕುಪ್ರಾಣಿ ನಾಯಿಯ ಮಾಲೀಕನನ್ನು ಜಯಾನಂದ್ ಕೇಲ್ ಎಂದು ಗುರುತಿಸಲಾಗಿದೆ. ಈ ನಡುವೆ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಚಿರತೆಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಭವಿಷ್ಯದಲ್ಲಿ ದಾಳಿಗಳನ್ನು ತಡೆಯಲು ಅಧಿಕಾರಿಗಳು ಬೋನುಗಳನ್ನು ಸ್ಥಾಪಿಸಿ ಇತರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
