* ದೇಶದಲ್ಲಿ ಕೊರೋನಾ ಅಬ್ಬರ* ಕೊರೋನಾ ಪೀಡಿತರಿಗೆ ಸಹಾಯ ಮಾಡುತ್ತಿರುವ ಜನ ಸಾಮಾನ್ಯರು * ಕೊರೋನಾ ರೋಗಿಗಳಿಗಾಗಿ ಊಟ ತಯಾರಿಸಿದ ತಾಯಿ: 'ಖುಷಿಯಾಗಿರಿ' ಎಂದ ಮಗು!

ನವದೆಹಲಿ(ಮೇ.19): ಕೊರೋನಾ ಪೀಡಿತರಿಗಾಗಿ ತಾಯಿ ತಯಾರಿಸಿದ ಊಟದ ಡಬ್ಬಿಯಲ್ಲಿ ಬಾಲಕನೊಬ್ಬ ಬರೆದ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನಗೆಲ್ಲುತ್ತಿದೆ. ಊಟದ ತಿಂಡಿಯಲ್ಲಿ ಖುಚಷಿಯಾಗಿರಿ ಎಂದು ಪುಟ್ಟ ಬಾಲಕನೊಬ್ಬ ಬರೆಯುತ್ತಿರುವ ಫೋಟೋ ವೈರಲ್ ಆಗಿದೆ. ಬಾಲಕನ ಈ ಹೃದಯ ವೈಶಾಲ್ಯತೆಗೆ ಜನರು ಭೇಷ್ ಎಂದಿದ್ದಾರೆ. ಭಾರತ ಸಂಕಷ್ಟವನ್ನೆದುರಿಸುತ್ತಿರುವಾಗ ಬಾಲಕನ ಈ ಫೋಟೋ ಜನರ ಮನದಲ್ಲಿ ಭರವಸೆಯ ಬೆಳಕಾಗಿದೆ.

ಕಳೆದೆರಡು ದಿನದ ಹಿಂದೆ ಈ ಬಾಲಕನ ಫೋಟೋ ಫೇಸ್‌ಬುಕ್, ಟ್ವಿಟರ್, ರೆಡಿಟ್‌ನಲ್ಲಿ ಶೇರ್ ಆಗಿದ್ದು, ಸಾವಿರಾರು ಮಂದಿಯನ್ನು ಇದು ತಲುಪಿದೆ. 

Scroll to load tweet…

ಹಸಿರು ಬಣ್ಣದ ಟೀ ಶರ್ಟ್ ಧರಿಸಿದ ಬಾಲಕ ತನ್ನ ತಾಯಿ ತಯಾರಿಸಿಟ್ಟ ಈ ಊಟದ ಡಬ್ಬದ ಮೇಲೆ ಈ ಸಂದೇಶದ ಜೊತೆ ನಗುವ ಚಿತ್ರವನ್ನೂ ಮಾಡಿದ್ದು, ಕೊರೋನಾ ರೋಗಿಗಳ ಮನೋಬಲ ಹೆಚ್ಚಿಸುವಂತೆ ಮಾಡಿದೆ. @ manishsarangal1 ಹೆಸರಿನ ಟ್ವಿಟರ್‌ ಖಾತೆಯಿಂದ ಈ ಫೋಟೋ ಶೇರ್ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona