ಅಕ್ರಮವಾಗಿ ನಿರ್ಮಿತ ದರ್ಗಾ ತೆರವಿಗೆ ಅಧಿಕಾರಿಗಳು ಯತ್ನಿಸಿದ ವೇಳೆ ಕಲ್ಲುತೂರಾಟ ನಡೆದಿದೆ. ಈ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಉಪ ಪೊಲೀಸ್ ವರಿಷ್ಠರು ಸೇರಿ 4 ಮಂದಿ ಗಾಯಗೊಂಡಿದ್ದಾರೆ.
ಜುನಾಗಢ (ಗುಜರಾತ್): ಅಕ್ರಮವಾಗಿ ನಿರ್ಮಿತ ದರ್ಗಾ ತೆರವಿಗೆ ಅಧಿಕಾರಿಗಳು ಯತ್ನಿಸಿದ ವೇಳೆ ನಡೆದ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಉಪ ಪೊಲೀಸ್ ವರಿಷ್ಠರು ಸೇರಿ 4 ಮಂದಿ ಗಾಯಗೊಂಡ ಘಟನೆ ಇಲ್ಲಿ ನಡೆದಿದೆ. ಘಟನೆ ಸಂಬಂಧ 174 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಗರದ ಮಜೇವಾಡಿ ಗೇಟ್ ಬಳಿ ದರ್ಗಾವೊಂದು ಅಕ್ರಮವಾಗಿ ನಿರ್ಮಾಣವಾಗಿದೆ. ಅದನ್ನು ತೆರವು ಮಾಡಬೇಕು. ಅದು ಸಕ್ರಮವೇ ಆಗಿದ್ದರೆ ಸೂಕ್ತ ದಾಖಲೆಗಳನ್ನು 5 ದಿನದಲ್ಲಿ ನೀಡಬೇಕು ಎಂದು ನೋಟಿಸ್ ಅಂಟಿಸಲು ಜುನಾಗಢ ಪಾಲಿಕೆ ಅಧಿಕಾರಿಗಳು ತೆರಳಿದ್ದರು.
ಆಗ ರಾತ್ರಿ 9 ಗಂಟೆ ಸುಮಾರಿಗೆ ಭಾರಿ ಪ್ರಮಾಣದಲ್ಲಿ ದರ್ಗಾ ಬಳಿ ನೆರೆದ ಉದ್ರಿಕ್ತರು ಅಧಿಕಾರಿಗಳ ಮೇಲೆ ಕಲ್ಲು ಎಸೆದಿದ್ದಾರೆ. ಅಲ್ಲದೆ, ಪಹರೆ ಕಾಯಲು ಬಂದ ಪೊಲೀಸರ ಮೇಲೆ ಸುಮಾರು 500-600 ಮಂದಿ ಕಲ್ಲು ತೂರಿದ್ದಾರೆ. ಆಗ ಒಬ್ಬ ನಾಗರಿಕ ಕಲ್ಲೇಟಿನಿಂದ ಸಾವನ್ನಪ್ಪಿದ್ದಾನೆ. ಇದೇ ವೇಳೆ ಸಮೀಪದಲ್ಲಿದ್ದ ಸರ್ಕಾರಿ ಬಸ್ಸು ಹಾಗೂ ಇತರ ವಾಹನಗಳಿಗೆ ಕಲ್ಲು ಎಸೆಯಲಾಗಿದೆ. ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ಗಳನ್ನು ಸೋಡಾ ಬಾಟಲಿ ಬಳಸಿ ಬೆಂಕಿ ಹಚ್ಚಲಾಗಿದೆ. ಆಗ ಹೆಚ್ಚಿನ ಸಂಖ್ಯೆಯ ಪೊಲೀಸರು ನೆರೆದು ಲಾಠಿ ಪ್ರಹಾರ ಮಾಡಿ ಹಾಗೂ ಅಶ್ರುವಾಯು ಸಿಡಿಸಿ ಉದ್ರಿಕ್ತರನ್ನು ಚದುರಿಸಿದ್ದಾರೆ.
ದೂಸ್ರಾ ಮಾತಾಡಿದ್ರೆ ಕೈ ಕಟ್, ಇಲ್ದಿದ್ರೆ ಕೊಲೆ; ಸಾಮಾಜಿಕ ಸಂಘಟನೆ ಹೆಸರಿನ ಪಿಎಫ್‌ಐನ ಅಸಲಿ ಮುಖ!
