ಭೋಪಾಲ್‌(ಜು.09): 8 ಜನ ಪೊಲೀಸ್ ಸಿಬ್ಬಂದಿಯನ್ನು ಕೊಲೆಗೈದ ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನ್ಪುರದಲ್ಲಿ ಬಂಧಿಸಲು ಬಂದ 8 ಜನ ಪೊಲೀಸ್ ಸಿಬ್ಬಂದಿಯನ್ನು ಕೊಲೆ ಮಾಡಿದ್ದ ವಿಕಾಸ್ ದುಬೆ ತಲೆ ಮರೆಸಿಕೊಂಡಿದ್ದ. ಆತನನ್ನು ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳಿ ದೇವಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದಾರೆ.

ದುಬೆ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಗೃಹ ಸಚಿವ ನರೋಟ್ಟಂ ಮಿಶ್ರಾ, ಮಧ್ಯಪ್ರದೇಶದ ಪೊಲೀಸರು ಆತನ ಸಹಾಯಕರಿಗಾಗಿ ಬಲೆ ಬೀಸಿದ್ದಾರೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಯುಪಿ ಸಿಎಂ ಯೋಗಿ ಜೊತೆ ಮಾತನಾಡಿದ್ದು, ಸ್ಥಳೀಯ ಪೊಲೀಸ್ ಸಿಬ್ಬಂದಿ ಕೆಲಸವನ್ನು ಶ್ಲಾಘಿಸಿದ್ದಾರೆ.

ರೌಡಿಗಳ ಗುಂಡಿನ ದಾಳಿಗೆ ಡಿವೈಎಸ್‌ಪಿ ಸೇರಿ 8 ಪೊಲೀಸರು ಹುತಾತ್ಮ

ದುಬೆ ಸರೆಂಡರ್ ಆಗಿದ್ದ ಎಂಬ ವದಂತಿ ತಳ್ಳಿ ಹಾಕಿದ ಉಜ್ಜೈನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್, ಅಂಗಡಿಯ ವ್ಯಕ್ತಿಯೊಬ್ಬ ದುಬೆ ದೇವಾಲಯಕ್ಕೆ ಪ್ರವೇಶಿಸಿದಾಗ ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!

ಆತ ದೇವಸ್ಥಾನದಿಂದ ಹೊರ ಬರುವಾಗ ಬಂಧಿಸಲಾಗಿದೆ. ಆರಮಭದಲ್ಲಿ ಆತ ತಾನು ದುಬೆ ಅಲ್ಲ ಎಂದು ವಾದಿಸಿದ್ದ, ನಂತರದಲ್ಲಿ ಒಪ್ಪಿಕೊಂಡಿದ್ದಾನೆ. ಆತ ಯಾವಗ ಮತ್ತು ಹೇಗೆ ಉಜ್ಜೈನಿ ತಲುಪಿದ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಹಿಡಿಯಲು ಬಂದ 8 ಜನ ಪೊಲೀಸರನ್ನೇ ಹತ್ಯೆ ಮಾಡಿದ ರೌಡಿ ವಿಕಾಸ್ ದುಬೆ! ಯಾರೀತ

ಸುಮಾರು 60 ಕ್ರಿಮಿನಲ್ ಕೇಸ್‌ಗಳಲ್ಲಿ ಬೇಕಾಗಿದ್ದ ದುಬೆ ಕೊನೆಗೆ ಹರಿಯಾಣದಲ್ಲಿ ಕಾಣಿಸಿಕೊಂಡಿದ್ದ. ದುಬೆ ಶರಣಾಗಿದ್ದಾನೆ ಎಂದು ಟೀಕಿಸಿರುವ ಕಾಂಗ್ರೆಸ್ ಎನ್‌ಕೌಂಟರ್‌ನಿಂದ ತಪ್ಪಿಸಿಕೊಳ್ಳಲು ವಿಕಾಸ್ ದುಬೆ ಶರಣಾಗಿದ್ದಾನೆ ಎಂದು ಹೇಳಿತ್ತು.