ದೇಶದ ಸಂಸತ್ತಿನ ಕಾರ್ಯಕಲಾಪಗಳು ಹಾಗೂ ಕಾನೂನುಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶವನ್ನು ಉಪರಾಷ್ಟ್ರಪತಿ ಜಗದೀಪ್ ಧಂಕರ್ ಪ್ರಶ್ನೆ ಮಾಡಿದ್ದಾರೆ. ಇಂದಿನ ಸ್ಥಿತಿ ಹೇಗಾಗಿದೆ ಎಂದರೆ, ಸಂಸತ್ತಿಗಿಂತ ಹೆಚ್ಚಾಗಿ ಸುಪ್ರೀಂ ಕೋರ್ಟ್ ಒಪ್ಪಿದರೆ ಮಾತ್ರವೇ ಯಾವುದೇ ಮಸೂದೆ ಕಾನೂನಾಗಿ ಬದಲಾಗುತ್ತಿದೆ ಎಂದು ಹೇಳಿದ್ದಾರೆ.
ಜೈಪುರ (ಜ.11): ಸಂಸತ್ತಿನ ಕಾರ್ಯಗಳಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಬಗ್ಗೆ ಉಪಾಧ್ಯಕ್ಷ ಜಗದೀಪ್ ಧಂಖರ್ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಹೇಗಾಗಿದೆ ಎಂದರೆ ಸಂಸತ್ತು ಹೊಸ ಕಾನೂನುಗಳನ್ನು ಮಾಡುತ್ತದೆ, ಆದರೆ, ಸುಪ್ರೀಂ ಕೋರ್ಟ್ ಅವುಗಳನ್ನು ರದ್ದು ಮಾಡುತ್ತಿದೆ. ಸಂಸತ್ತು ಮಾಡಿದ ಕಾನೂನನ್ನು ನ್ಯಾಯಾಲಯವು ಅನುಮೋದಿಸಿದಾಗ ಮಾತ್ರವೇ ಕಾನೂನಾಗುವ ಸಂಪ್ರದಾಯ ಯಾವಾಗಿನಿಂದ ಆರಂಭವಾಗಿದೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಜೈಪುರದಲ್ಲಿ ನಡೆದ ವಿಧಾನಸಭಾ ಸ್ಪೀಕರ್‌ಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದ್ದಾರೆ. ಉಪರಾಷ್ಟ್ರಪತಿ ಜೊತೆಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ನ್ಯಾಯಾಲಯದ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
1973ರಿಂದ ಕೆಟ್ಟ ಸಂಪ್ರದಾಯ ಆರಂಭವಾಗಿದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಮೂಲಭೂತ ರಚನೆಯ ಕಲ್ಪನೆಯನ್ನು ನೀಡಿತು, ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು, ಆದರೆ ಅದರ ಮೂಲ ರಚನೆಯಲ್ಲ ಎಂದಿತ್ತು. ಆದರೆ, ಕೋರ್ಟ್‌ನ ಮೇಲೆ ತುಂಬು ಗೌರವದಿಂದಲೇ, ನಾನು ಇದನ್ನು ಒಪ್ಪೋದಿಲ್ಲ ಎಂದು ಹೇಳಲು ಬಯಸುತ್ತೇನೆ. ಸದನ ಯಾವುದೇ ಬದಲಾವಣೆಗಳನ್ನು ಬೇಕಾದರೂ ಕೂಡ ಮಾಡಬಹುದು. ಯಾವ ಬದಲಾವಣೆಗಳನ್ನು ಮಾಡಬೇಕು ಎಂದು ಯಾರೂ ಹೇಳಬೇಕಾದ ಅಗತ್ಯವಿಲ್ಲ. ಸಂಸತ್ತು ಮಾಡಿರುವ ನಿರ್ಧಾರವನ್ನು ಬೇರೆ ಯಾವುದಾದರೂ ಸಂಸ್ಥೆಯಿಂದ ಪರಿಶೀಲನೆ ಮಾಡುವಂತೆ ಹೇಳುವುದಾದರೂ ಹೇಗೆ ಸಾಧ್ಯ ಎಂದಿದ್ದಾರೆ.
ನಾನು ರಾಜ್ಯಸಭಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ, ಕಾರ್ಯಾಂಗವು ಕಾನೂನನ್ನು ನೋಡುವುದಿಲ್ಲ ಅಥವಾ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಯಾವುದೇ ಸಂಸ್ಥೆಯು ಯಾವುದೇ ನೆಲೆಯಲ್ಲಿ ಸಂಸತ್ತು ಮಾಡಿದ ಕಾನೂನನ್ನು ಅಮಾನ್ಯಗೊಳಿಸಿದರೆ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ನಮ್ಮದು ಪ್ರಜಾಪ್ರಭುತ್ವ ದೇಶ ಎಂದು ಆಗ ಹೇಳುವುದು ಕಷ್ಟ ಎಂದಿದ್ದಾರೆ.
ನ್ಯಾಯಾಂಗವು ಸಹ ಸಭ್ಯತೆಯನ್ನು ಅನುಸರಿಸಬೇಕು. ನ್ಯಾಯಾಂಗವು ತಮಗೆ ನೀಡಿರುವ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ನಿಮ್ಮ ಶಕ್ತಿಗಳ ಸಮತೋಲನವನ್ನು ಮಾಡಿ. ನಮ್ಮ ಸದನಗಳ ಸ್ಪೀಕರ್‌ಗಳು ಬಯಸುವುದು ಇದನ್ನೇ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
Vice President Election: ಜಗದೀಪ್ ಧನಕರ್ ಭಾರತದ ಉಪರಾಷ್ಟ್ರಪತಿ
ಉಪಾಧ್ಯಕ್ಷ ಜಗದೀಪ್ ಧನಖರ್ ಮಾತನಾಡಿ, ಇಂದು ಸಂಸತ್ ಮತ್ತು ವಿಧಾನ ಸಭೆಗಳ ವಾತಾವರಣ ಅತ್ಯಂತ ನಿರಾಶಾದಾಯಕವಾಗಿದೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ನಮ್ಮ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳ ವರ್ತನೆಯು ತುಂಬಾ ಕೆಳಮಟ್ಟದಲ್ಲಿದೆ. ಈ ಕೆಟ್ಟ ವಾತಾವರಣಕ್ಕೆ ಪರಿಹಾರವನ್ನು ಹುಡುಕದೆ ಬೇರೆ ದಾರಿಯಿಲ್ಲ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಜನಪ್ರತಿನಿಧಿಗಳ ಅಸಭ್ಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ಪ್ರಮಾಣ ವಚನ ಸ್ವೀಕರಿಸುವ ಜನಪ್ರತಿನಿಧಿಗಳು ಈ ರೀತಿ ವರ್ತಿಸುವುದನ್ನು ಒಪ್ಪಲಾಗದು. ನಾವು ಕಳುಹಿಸಿದ ಚುನಾಯಿತ ಪ್ರತಿನಿಧಿಗಳು ಒಳ್ಳೆಯ ದಾರಿ ತೋರಿಸುತ್ತಾರೆ ಎಂದು ಜನರು ಭಾವಿಸುತ್ತಾರೆ ಎಂದು ಜಗದೀಪ್ ಧಂಕರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ NDA ಉಪ ರಾಷ್ಟ್ರಪತಿ ಅಭ್ಯರ್ಥಿ
ಕೆಲವೊಮ್ಮೆ ನ್ಯಾಯಾಂಗದೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ನಮ್ಮ ಕೆಲಸದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುತ್ತಿದೆ. ಇಂದಿರಾ ಗಾಂಧಿ ಅವರು ಮಾಡಿದ್ದ ಕೆಲವೊಂದು ನಿರ್ಧಾರಗಳನ್ನು ನ್ಯಾಯಾಂಗ ರದ್ದುಗೊಳಿಸಿತ್ತು. ನಂತರ, ಬ್ಯಾಂಕುಗಳ ರಾಷ್ಟ್ರೀಕರಣದಿಂದ ಅವರ ಎಲ್ಲಾ ನಿರ್ಧಾರಗಳ ಪರವಾಗಿ ತೀರ್ಪುಗಳು ಬಂದವು ಎಂದು ರಾಜಸ್ಥಾನ ಸಿಎಂ ಅಶೋಕ್ ಗ್ಲೆಹೋಟ್ ಹೇಳಿದ್ದಾರೆ.
