Asianet Suvarna News Asianet Suvarna News

Vice President Election: ಜಗದೀಪ್ ಧನಕರ್ ಭಾರತದ ಉಪರಾಷ್ಟ್ರಪತಿ

ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಜಗದೀಪ್‌ ಧನಕರ್‌ ಒಟ್ಟು 582 ಮತಗಳನ್ನು ಪಡೆದರೆ, ಯುಪಿಎ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ನ ಮಾರ್ಗರೇಟ್‌ ಆಳ್ವಾ 182 ಮತಗಳನ್ನು ಪಡೆದುಕೊಂಡಿದ್ದಾರೆ. ಉಪರಾಷ್ಟ್ರಪತಿಯಾಗಿ ಆಗಸ್ಟ್‌ 11 ರಂದು ಧನಕರ್‌ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

Vice President Election NDA candidate Jagdeep Dhankhar Elected as 14th Vice President of India san
Author
Bengaluru, First Published Aug 6, 2022, 7:42 PM IST

ನವದೆಹಲಿ (ಆ.6): ದೇಶದ 16ನೇ ಉಪರಾಷ್ಟ್ರಪತಿಯಾಗಿ ರಾಜಸ್ಥಾನದ ರಾಜಕಾರಣಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದ ಕರ್ನಾಟಕದ ರಾಜಕಾರಣಿ ಮಾರ್ಗರೇಟ್ ಆಳ್ವಾ ಅವರನ್ನು ಸೋಲಿಸಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಜಗದೀಪ್‌ ಧನಕರ್‌ ಒಟ್ಟು 528 ಮತಗಳನ್ನು ಪಡೆದರೆ, ಆಳ್ವಾ 182 ಮತಗಳನ್ನು ಪಡೆದುಕೊಂಡಿದ್ದಾರೆ. ಈಗ ಇರುವ ಮಾಹಿತಿಯ ಪ್ರಕಾರ, ಶೇ.93ಕ್ಕಿಂತ ಹೆಚ್ಚಿನ ಮತ ಚಲಾವಣೆಯಾಗಿದೆ. ದೇಶದ ಸಂಸತ್ತು ರಾಜ್ಯಸಭೆ ಹಾಗೂ ಲೋಕಸಭೆ ಸೆರಿ ಒಟ್ಟು 788 ಸಂಸದರನ್ನು ಹೊಂದಿದೆ. ಮಾರ್ಗರೇಟ್‌ ಆಳ್ವಾ ಅವರನ್ನು ಆಯ್ಕೆ ಮಾಡುವ ವೆಳೆ ಕಾಂಗ್ರೆಸ್‌ ತನ್ನ ಅಭಿಪ್ರಾಯವನ್ನು ಕೇಳಿಲ್ಲ ಎನ್ನುವ ಕಾರಣಕ್ಕಾಗಿ ಚುನಾವಣೆಯಲ್ಲಿ ಟಿಎಂಸಿ ಮತ ಹಾಕುವುದಿಲ್ಲ ಎಂದು ತಿಳಿಸಿತ್ತು. ಅದರಂತೆ ಟಿಎಂಸಿಯ 39 ಸಂಸದರು (23 ಲೋಕಸಭೆ, 16 ರಾಜ್ಯಸಭೆ) ಚುನಾವಣೆಯಯಲ್ಲಿ ಮತ ಹಾಕಿರಲಿಲ್ಲ. ಚುನಾವಣೆಯ ಮತ ಎಣಿಕೆ ಮಾಡುವ ಮುನ್ನವೇ ಜಗದೀಪ್‌ ಧನಕರ್‌ ಅವರ ಗೆಲುವು ನಿಶ್ಚಿತವಾಗಿತ್ತು. ಎರಡೂ ಸದನದಿಂದ ಬಿಜೆಪಿಯ ಎಲ್ಲಾ 394 ಸಂಸದರು ಮತ ಚಲಾವಣೆ ಮಾಡಿದ್ದ ಕಾರಣ, ಧನಕರ್‌ ಸುಲಭವಾಗಿ ಗೆಲುವು ಸಾಧಿಸಿದರು.

ಆಗಸ್ಟ್‌ 11ಕ್ಕೆ ಪ್ರಮಾಣವಚನ: ಬಹುಮತಕ್ಕೆ ಒಟ್ಟು 371 ಮತಗಳ ಅಗತ್ಯವಿದ್ದವು. ಅವರು ಶೇ.70ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ಉಪಚುನಾವಣೆಯಲ್ಲಿ ವೆಂಕಯ್ಯ ನಾಯ್ಡು ಶೇ. 68 ರಷ್ಟು ಮತಗಳನ್ನು ಪಡೆದಿದ್ದರು. ಅದರ ಲೆಕ್ಕಾಚಾರದಲ್ಲಿ ಹೋಗುವುದಾದರೆ, ವೆಂಕಯ್ಯ ನಾಯ್ಡು ಅವರ ದಾಖಲೆಯನ್ನೂ ಜಗದೀಪ್‌ ಧನಕರ್‌ ಮುರಿದಿದ್ದಾರೆ. ಆಗಸ್ಟ್‌ 11ಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಶಿವಸೇನೆಯ ಬಣ ಆಳ್ವಾಗೆ ಬೆಂಬಲ: ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯಾಗಿದ್ದ ಮಾರ್ಗರೇಟ್‌ ಆಳ್ವಾ, ಕಾಂಗ್ರೆಸ್‌, ಡಿಎಂಕೆ, ಆರ್‌ಜೆಡಿ, ಎನ್‌ಸಿಪಿ ಮತ್ತು ಸಮಾಜವಾದಿ ಪಕ್ಷದ ಸಂಸದರ ಮತಗಳನ್ನು ಪಡೆದಿದ್ದಾರೆ. ಈ ಎಲ್ಲಾ ಪಕ್ಷಗಳಿಂದ ಮಾರ್ಗರೇಟ್‌ ಆಳ್ವ ಪಡೆಯಬಹುದಾದ ಒಟ್ಟು ಮತ 139. ಅದಲ್ಲದೆ, ಜಾರ್ಖಂಡ್‌ ಮುಕ್ತಿ ಮೋರ್ಚಾ, ಟಿಆರ್‌ಎಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಕೂಡ ಆಳ್ವಾಗೆ ಮತ ಹಾಕಲು ತೀರ್ಮಾನ ಮಾಡಿದೆ. ಈ ಎಲ್ಲಾ ಪಕ್ಷಗಳು ಒಟ್ಟು 29 ಸಂಸದರನ್ನು ಹೊಂದಿವೆ. ಇನ್ನು ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ 9 ಸಂಸದರು ಆಳ್ವಾಗೆ ವೋಟ್‌ ಹಾಕಿದ್ದಾರೆ. ರಾಜಸ್ಥಾನದ ಜುಂಜು ಜಿಲ್ಲೆಯ ಖಿತಹನಾ ಎನ್ನುವ ಪುಟ್ಟ ಗ್ರಾಮದವರಾದ ಜಗದೀಪ್‌ ಧನ್‌ಕರ್‌, ಮೂಲತಃ ವಕೀಲರು. ರಾಜಸ್ಥಾನ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. ಹೈಕೋರ್ಟ್‌ನಲ್ಲಿ ಸಾಕಷ್ಟು ಹೈ ಪ್ರೊಫೈಲ್‌ ಕೇಸ್‌ಗಳಲ್ಲಿ ವಾದ ಮಾಡಿದ್ದರು. ಅದಲ್ಲದೆ, ಜೆಪಿ ಚಳವಳಿಯಲ್ಲಿ ಪ್ರಮುಖವಾಗಿ ಪಾಲ್ಗೊಂಡಿದ್ದರು.

ಉಪರಾಷ್ಟ್ರಪತಿ ಚುನಾವಣೆ, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಸಿಂಗ್ ಸೇರಿ ಗಣ್ಯರ ಮತದಾನ!

ಶೇಖಾವತ್‌ ಬಳಿಕ ರಾಜಸ್ಥಾನ ಮೂಲದ 2ನೇ ಉಪರಾಷ್ಟ್ರಪತಿ: ವಕೀಲಿಕೆಯಿಂದ ರಾಜಕೀಯದವರೆಗೆ, ಧನ್‌ಕರ್‌ ಎರಡೂ ರಂಗಗಳಲ್ಲಿ ಉತ್ತಮವಾಗಿ ಹೆಸರು ಮಾಡಿದ್ದಾರೆ. ಹಿರಿಯ ನಾಯಕ ದೇವಿ ಲಾಲ್‌ಗೆ ಬಹಳ ಆಪ್ತವಾಗಿದ್ದರು. ಅವರು ಮಾಜಿ ಉಪರಾಷ್ಟ್ರಪತಿ ಮತ್ತು ರಾಜಸ್ಥಾನದ ಮಾಜಿ ಸಿಎಂ ಭೈರೋನ್ ಸಿಂಗ್ ಶೇಖಾವತ್ ಅವರ ನಿಕಟವರ್ತಿಯೂ ಆಗಿದ್ದರು. ಜನತಾದಳದಿಂದ ಸಂಸದ, ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಧನ್‌ಕರ್‌ ಅವರು ಕೇಂದ್ರದಲ್ಲಿ ಕಾನೂನು ಸಚಿವರಾಗಿಯೂ ಕೆಲಸ ಮಾಡಿದ್ದರು. ಭೈರೋನ್‌ ಸಿಂಗ್‌ ಶೇಖಾವತ್‌ ಬಳಿಕ,ಉಪರಾಷ್ಟ್ರಪತಿ ಹುದ್ದೆಗೇರಿದ ರಾಜಸ್ಥಾನ ಮೂಲದ 2ನೇ ವ್ಯಕ್ತಿಯಾಗಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ NDA ಉಪ ರಾಷ್ಟ್ರಪತಿ ಅಭ್ಯರ್ಥಿ

90 ರ ದಶಕದ ನಂತರ, ಜಗದೀಪ್ ಧನಕರ್‌ ಅರ್‌ಎಸ್ಎಸ್‌ನಲ್ಲಿ ಸಕ್ರಿಯರಾದರು. ಅವರು ವಕೀಲರನ್ನು ಸಂಘಟಿಸಿ ಅವರನ್ನು ಸಂಘದೊಂದಿಗೆ ಸಂಪರ್ಕಿಸಲು ಪ್ರಾರಂಭಿಸಿದರು. ವಕೀಲರ ಪರಿಷತ್ತಿನ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪರಿಗಣಿಸಲಾಗಿದೆ. ಅಡ್ವೊಕೇಟ್ಸ್ ಕೌನ್ಸಿಲ್‌ನಲ್ಲಿ ಕೆಲಸ ಮಾಡುವುದರಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಉನ್ನತ ನಾಯಕರೊಂದಿಗೆ ಸಂಪರ್ಕವನ್ನು ಹೆಚ್ಚಿಸಿಕೊಂಡರು. ರಾಜ್ಯಪಾಲರಾಗುವ ಮುನ್ನ ವಕೀಲರ ಜೊತೆಗೆ ಸಂಘಟನೆಯ ಕೆಲಸದಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದರು.

 

Follow Us:
Download App:
  • android
  • ios