ದೆಹಲಿ(ಏ.30): ಕಾಂಗ್ರೆಸ್‌ನ ನೂತನ ಸೋಷಿಯಲ್ ಮೀಡಿಯಾ ಚಾನೆಲ್‌ನಲ್ಲಿ 2024 ಚುನಾವಣೆಯ ಕಾಂಗ್ರೆಸ್ ಥೀಮ್ ಸಾಂಗ್ ಎಂಬ ಟೈಟಲ್‌ನಲ್ಲಿ ವಿಡಿಯೋ ಒಂದನ್ನು ಪ್ರಸಾರ ಮಾಡಲಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಅವರನ್ನು ಫೋಕಸ್ ಮಾಡಲಾಗಿದ್ದು, ಅವರು ಪಕ್ಷದ ನಾಯಕತ್ವ ತೆಗೆದುಕೊಳ್ಳಬಹುದಾದ ಸಂಭಾವ್ಯ ವಿಷಯವನ್ನು ಸಂಕೇತಿಸಲಾಗಿದೆ.

4.15 ನಿಮಿಷದ ವಿಡಿಯೋ INCTVಯಲ್ಲಿ ಪ್ರಸಾರ ಮಾಡಲಾಗಿದ್ದು, ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಯಾಕೆ ಬೇಕು ಎಂಬುದರ ಬಗ್ಗೆ ಫೋಕಸ್ ಮಾಡಲಾಗಿದೆ. ವಿಡಿಯೋ ಥೀಮ್ ನೋಡಿದರೆ ಪಕ್ಷದ ಭಿನ್ನಮತೀಯರ ಅಸಮಾಧಾನ ಎಲ್ಲವನ್ನೂ ಶಮನ ಮಾಡಿರುವ ಹಾಗೆ ಕಂಡುಬಂದಿದೆ.

ಹೆಚ್ಚಿದ ಸಾವಿನ ಪ್ರಕರಣ: ಚೀತಾಗಾರಕ್ಕೆ ಕಟ್ಟಿಗೆ ದಾನ ಮಾಡಿದ ಮುಸ್ಲಿಂ ಸಮಿತಿ

ರಾಜೀವ್ ಅಲ್ಲ, ಸೋನಿಯಾ ಅಲ್ಲ, ಭಾರತದ ಮಗ ರಾಹುಲ್‌ಗಾಂಧಿ ಎಂಬ ಸಾಲು ಇದ್ದು ಇದರ ಮಧ್ಯದಲ್ಲಿ ರಾಹುಲ್ ಗಾಂಧಿ ಫೋಟೋ ಹಾಗೂ ಸುತ್ತ ಹಳ್ಳಿ, ನಗರದ ಫೋಟೋ ಕೊಲೇಜ್ ಕಾಣಬಹುದು.

2019ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದ ನಾಯಕತ್ವದ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಚರ್ಚಿಸುತ್ತಲೇ ಇದೆ. ಜೂನ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನೂ ನಡೆಸಲಿದೆ.

#ResignModi ಪೋಸ್ಟ್ ಕೆಲ ಕಾಲ ತಡೆ ಹಿಡಿದ ಫೇಸ್‌ಬುಕ್

ಇದೀಗ ಕೊರೋನಾ ವೈರಸ್ ಪ್ರಕರಣ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಗದಿತ ಸಮಯದಲ್ಲಿ ಕಾಂಗ್ರೆಸ್ ನಾಯಕತ್ವದ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗಲಿದೆಯಾ ಎಂಬುದನ್ನು ಕಾದುನೋಡಬೇಕಷ್ಟೆ.