* ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುತ್ತೀರಾ? ಎಚ್ಚರ* ಪಾನಿಪುರಿ ಜೊತೆ ಮೂತ್ರ ಬೆರೆಸಿದ ರಸ್ತೆಬದಿ ವ್ಯಾಪಾರಿ* ವಿಡಿಯೋ ವೈರಲ್ ಆದ ಬೆನ್ನಲ್ಲೇ, ವ್ಯಾಪಾರಿ ಅರೆಸ್ಟ್

ಗುವಾಹಟಿ(ಆ.22): ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಫೋಟೋ, ವಿಡಿಯೋಗಳು ವೈರಲ್ ಆಗುತ್ದತಿರುತ್ತವೆ. ಕೆಲವೊಂದು ವಿಚಾರಗಳು ಮನ ಗೆದ್ದರೆ, ಇನ್ನು ಕೆಲವು ಕಣ್ಣಿಗೆ ಕಾಣದ ಸತ್ಯವನ್ನು ಅನಾವರಣಗೊಳಿಸುತ್ತವೆ. ಸದ್ಯ ಇಂತಹುದೇ ವಿಡಿಯೋ ಒಂದು ವೈರಲ್ ಆಗಿದ್ದು, ಇದು ರಸ್ತೆಬದಿ ಸಿಗೋ ಪಾನಿಪುರಿಯನ್ನು ಬಾಯಿ ಚಪ್ಪರಿಸಿ ತಿನ್ನೋರಿಗೆ ಆಘಾತ ಕೊಟ್ಟಿದೆ. 

ಹೌದು ಟ್ವಿಟರ್‌, ಫೇಸ್‌ಬುಕ್ ಹೀಗೆ ಬಹುತೇಕ ಕಡೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರುವಾತ, ನೀರಿಗೆ ಮೂತ್ರ ಬೆರೆಸುತ್ತಿರುವ ದೃಶ್ಯವಿದೆ. ಇದನ್ನು ನೋಡಿದವರು ಛೀ, ಥೂ ಎಂದು ಸಪ್ಪೆ ಮೋರೆ ಹಾಕಿದ್ದಾರೆ.

Scroll to load tweet…

ಲಭ್ಯವಾದ ಮಹಿತಿ ಅನ್ವಯ ಇದು ಗುವಾಹಟಿಯಿ ಅಟ್ಗಾಂವ್ ಪ್ರದೇಶದಲ್ಲಿರುವ ಪಾನಿಪುರಿ ಸ್ಟಾಲ್‌ ಒಂದರಲ್ಲಿ ನಡೆದಿದೆ. ಪಾನಿಪುರಿ ಮಾರುವಾತ ನೋಡ ನೋಡುತ್ತಿದ್ದಂತೆಯೇ ಮಗ್ ಒಂದರಲ್ಲಿ ಮೂತ್ರ ವಿಸರ್ಜನೆ ಮಾಡಿ, ಅದನ್ನು ಪಾನಿಪುರಿಯ ನೀರಿಗೆ ಬೆರೆಸಿದ್ದಾನೆ. ಅಲ್ಲದೇ ಅದೇ ಮಗ್‌ನಲ್ಲಿ ತನ್ನ ಗಾಡಿ ಬಳಿ ಗೋಲ್‌ಗಪ್ಪಾ ತಿನ್ನಲು ಬಂದವರಿಗೆ ನೀರನ್ನು ಸರ್ವ್‌ ಮಾಡಿದ್ದಾನೆ.

Scroll to load tweet…

ಇನ್ನು ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲಿಸರು ಈ ವ್ಯಕ್ತಿಯನ್ನು ಬಂಧಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇನ್ನು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿ ಪಾನಿಪುರಿ ಮಾರುವಾತ ಹೀಗೇಕೆ ವರ್ತಿಸುತ್ತಿದ್ದಾನೆ, ಹೀಗೆ ಮಾಡುವ ಅಗತ್ಯವಾದರೂ ಏನು? ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳಲಾರಂಭಿಸಿದ್ದಾರೆ.