ನಿಮ್ಮ ಆಶೀರ್ವಾದ ಇದ್ದರೆ ಸುರಕ್ಷಿತವಾಗಿ ಬರುತ್ತೇನೆ, ಭಾರತದ ತುದಿಯಲ್ಲಿ ಕೊಡಗಿನ ಯೋಧ!
ದೇಶದ ರಕ್ಷಣೆ ವಿಚಾರದಲ್ಲಿ ಶತ್ರುಗಳ ವಿರುದ್ಧ ಸೆಣಸಾಡಿ ಪ್ರಾಣ ಬಲಿದಾನ ಮಾಡಲು ಹಿಂಜರಿಯದ ಭಾರತೀಯ ಯೋಧರು| ಗಡಿಯಲ್ಲಿ ಕರ್ತವ್ಯದಲ್ಲಿರುವ ಯೋಧನ ವೀಡಿಯೋ ವೈರಲ್| Loc ಬಳಿ ವೀಡಿಯೋ ಮಾಡಿ ಬಿಟ್ಟಿರುವ ಸೈನಿಕ
ಶ್ರೀನಗರ(ಸೆ.05): ದೇಶದ ರಕ್ಷಣೆ ವಿಚಾರದಲ್ಲಿ ಶತ್ರುಗಳ ವಿರುದ್ಧ ಸೆಣಸಾಡಿ ತಮ್ಮ ಜೀವವನ್ನು ಬಲಿದಾನ ಮಾಡಲು ಹಿಂಜರಿಯದ ಭಾರತೀಯ ಸೇನೆಯ ಯೋಧರಿಗೆ ಇಡೀ ವಿಶ್ವವೇ ತಲೆ ಬಾಗುತ್ತದೆ. ಹಗಲಿರುಳೆನ್ನದೆ ಬಿಸಿಲು ಚಳಿ, ಕಣಿವೆ, ಬೆಟ್ಟ ಗುಡ್ಡ ಹೀಗೆ ಎಲ್ಲಾ ಕಷ್ಟಗಳನ್ನು ಕಡೆಗಣಿಸಿ ಯೋಧನೊಬ್ಬ ತನ್ನ ಭಾರತಮಾತೆಯನ್ನು ರಕ್ಷಿಸುತ್ತಾನೆ ಪಾಕ್ ಗಡಿ, ಭಾರತದ ತುದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ, ಕೊಡಗಿನ ವೀರನ ಭಾವಿಡಿಯೋ ಒಂದು ಫುಲ್ ವೈರಲ್ ಆಗಿದೆ.
ಕೊಡಗಿನ ಸೋಮವಾರಪೇಟೆಯ ನಿವಾಸಿಯಾಗಿರುವ ಯೋಧನೊಬ್ಬ ಭಾರತದ ಗಡಿಯಾದ LoC ಬಳಿ ನಿಂತು ವೀಡಿಯೋ ಒಂದನ್ನು ಮಾಡಿದ್ದಾನೆೆ. ವಿಡಿಯೋದಲ್ಲಿ ತಾನೂ ಗಡಿಯಲ್ಲಿ ಬಾಂಬ್ ಪತ್ತೆ ದಳದ ಮುಖ್ಯಸ್ಥನಾಗಿ ಕರ್ತವ್ಯ ಮಾಡುತ್ತಿದ್ದು, ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿದ್ದೇನೆ ಎಂದು ಯೋಧ ತಾನಿರುವ ಸ್ಥಳದ ಬಗ್ಗೆ ವಿವರಣೆ ನೀಡಿದ್ದಾರೆ.
ಅಲ್ಲದೇ ಕೇವಲ ಒಂದು ಕಿ. ಮೀಟರ್ ದೂರಲ್ಲಿರುವ ಪಾಕಿಸ್ತಾದ ಗಡಿ ಬಳಿಯ LOC ಬಳಿ ತಾನು ಕರ್ತವ್ಯ ನಿರ್ವಹಿಸಲು ತೆರಳುತ್ತಿರುವುದಾಗಿ ಹೇಳಿರುವ ಯೋಧ, ಈ ಹಿಂದೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಹೋಗಿದ್ದ ಇಬ್ಬರು ಸೈನಿಕರು ಆಯತಪ್ಪಿ ಪಾಕಿಸ್ತಾನದ ಗಡಿಯೊಳಗೆ ಬಿದ್ದಿದ್ದರು. ಅವರ ಮೃತದೇಹವನ್ನೂ ತರಲು ಬಿಟ್ಟಿರಲಿಲ್ಲ. ಇಂತಹ ಜಾಗಕ್ಕೆ ತೆರಳುತ್ತಿರುವ ನಾನು ಜೀವಂತವಾಗಿ ಮರಳುತ್ತೇನೋ, ಇಲ್ಲವೋ ತಿಳಿದಿಲ್ಲ. ಆದರೆ ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆ ಇದ್ದರೆ ಖಂಡಿತವಾಗಿಯೂ ಸುರಕ್ಷಿತವಾಗಿ ಮರಳುತ್ತೇನೆ ಎಂದು ಕೆಚ್ಚೆದೆಯಿಂದ ಹೇಳಿದ್ದಾರೆ.