ನವದೆಹಲಿ(ಅ. 23)  ರಿಪಬ್ಲಿಕ್ ಟಿವಿ ಅರ್ನಾಬ್ ಗೋಸ್ವಾಮಿಗೆ ಮಹತ್ವದ ಜಯ ನ್ಯಾಯಾಲಯದಲ್ಲಿ ಸಿಕ್ಕಿದೆ.  ಟೈಮ್ಸ್ ನೌ ತೊರೆದು ರಿಪಬ್ಲಿಕ್ ಟಿವಿ ಆರಂಭಿಸಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ 'ನೇಷನ್ ವಾಂಟ್ಸ್ ಟು ನೌ' ಟ್ಯಾಗ್ ಲೈನ್ ಬಳಕೆ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಟೈಮ್ಸ್ ನೌ ಸಂಸ್ಥೆಯ ಬೆನೆಟ್ ಕೋಲ್ಮನ್ ಮತ್ತು ಕಂಪನಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ನಾಥ್ ನೇತೃತ್ವದ ಪೀಠ, ಅರ್ನಬ್ ಗೋಸ್ವಾಮಿ ಅವರು ನೇಷನ್ ವಾಂಟ್ಸ್ ಟು ನೋ' ಟ್ಯಾಗ್ ಲೈನ್ ನಿರೂಪಣೆ ವೇಳೆ ಬಳಕೆ ಮಾಡಿಕೊಳ್ಳಬಹುದು ದಂದಿದೆ.

ಟಿಆರ್‌ಪಿ ವಾರ್; ಮುಂಬೈ ಪೊಲೀಸರ ವಿರುದ್ಧ ಅರ್ನಾಬ್  ಕೆಂಡ

 ಅರ್ನಬ್‌ ಗೋಸ್ವಾಮಿ ಅವರು ‘ಟೈಮ್ಸ್‌ ನೌ' ಸುದ್ದಿವಾಹಿನಿಯ ಮುಖ್ಯ ಸಂಪಾದಕರಾಗಿದ್ದಾಗ ‘ನೇಶನ್‌ ವಾಂಟ್ಸ್‌ ಟು ನೋ' (ದೇಶ ಕೇಳಬಯಸುತ್ತದೆ..) ಎಂದು ಚರ್ಚೆಯ ಸಂದರ್ಭಗಳಲ್ಲಿ ಹೇಳುವುದು ಜನಪ್ರಿಯವಾಗಿತ್ತು. ‘ಆದರೆ ಈಗ ಕೃತಿಸ್ವಾಮ್ಯ ಕಾನೂನಿನಡಿ ಈ ವಾಕ್ಯ ಬಳಸದಂತೆ ಮಾಧ್ಯಮ ಸಂಸ್ಥೆಯೊಂದು ತಮಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದೆ' ಎಂದು ಖುದ್ದು ಅರ್ನಬ್‌ ಹೇಳಿದ್ದರು.

ಸೋಶಿಯಲ್ ಮೀಡಿಯಾದಲ್ಲಿಯೂ ಸಹ 'ನೇಷನ್ ವಾಂಟ್ಸ್ ಟು ನೋ' ಪದ ಸಾಕಷ್ಟು ಜನಪ್ರಿಯತೆ ಉಳಿಸಿಕೊಂಡಿದೆ. ಅರ್ನಾಬ್ ತಮ್ಮ ನಿರೂಪಣೆ ವೇಳೆ  ಇದನ್ನು ಬಳಸಿಕೊಳ್ಳುತ್ತಾರೆ.