ನವದೆಹಲಿ (ಸೆ.29):  ಕರೋನಾ ಸೋಂಕು ಒಬ್ಬೊಬ್ಬರನ್ನಾಗಿ ಆವರಿಸಿಕೊಳ್ಳುತ್ತಿದೆ.  ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಂಗಳವಾರ ಬೆಳಗ್ಗೆ ಕೋವಿಡ್​-19 ಪರೀಕ್ಷೆಗೆ ಒಳಗಾದ ಅವರ ವರದಿ ಪಾಸಿಟಿವ್​ ಬಂದಿದೆ.

ಕೊರೋನಾ ಕಂಟ್ರೋಲ್‌ಗೆ ಮಾಸ್ಟರ್ ಪ್ಲಾನ್

ಆದರೆ ನಾಯ್ಡು ಅವರಿಗೆ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಅವರ ಆರೋಗ್ಯ ಉತ್ತಮವಾಗಿದೆ. ಅವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಲಾಗಿದೆ. ಅವರ ಹೆಂಡತಿ ಉಷಾ ನಾಯ್ಡು ಅವರ ಕೊರೋನಾ ಪರೀಕ್ಷೆ ನೆಗಟಿವ್​ ಬಂದಿದ್ದರೂ, ಅವರಿಗೂ ಕೂಡ ಜಾಗೃತೆ ವಹಿಸಲು ತಿಳಿಸಲಾಗಿದೆ.

71 ವರ್ಷದ ವೆಂಕಯ್ಯ ನಾಯ್ಡು ಅವರು, ಕಳೆದ ವಾರ ನಡೆದ ಮುಂಗಾರು ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿದ್ದರು.  25ಕ್ಕೂ ಹೆಚ್ಚಿನ ಸಂಸದರು ಕೊರೋನಾ ಸೋಂಕಿಗೆ ಒಳಗಾದ ಹಿನ್ನಲೆ ಭಾಗಿಯಾಗಿರಲಿಲ್ಲ.