ಮತ್ತೊಂದು ವಿವಾದ ಆರಂಭ, ಇದೀಗ ದೇಗುಲ ಪುನರ್ ನಿರ್ಮಾಣ ಖುತುಬ್ ಮಿನಾರ್ ಪ್ರಾಂಗಣದಲ್ಲಿ ಕೆಡವಿದ ದೇಗಲು ನಿರ್ಮಾಣಕ್ಕೆ ಆಗ್ರಹ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ಎಂದ ವಿಹೆಚ್‌ಪಿ  

ನವದೆಹಲಿ(ಏ.10): ಹಿಜಾಬ್ ವಿವಾದದಿಂದ ಆರಂಭಗೊಂಡ ಕಿಚ್ಚು ಇದೀಗ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಹಲಾಲ್ ಕಟ್ ವಿವಾದ, ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ವಿವಾದ ಸೇರಿದಂತೆ ಸರಣಿ ವಿವಾದ ಹಾಗೂ ಆಂದೋಲನದ ಬಳಿಕ ಇದೀಗ ದೆಹಲಿ ಖುತುಬ್ ವಿನಾರ್ ಪ್ರಾಂಗಣದಲ್ಲಿದ್ದ ಹಿಂದೂ ದೇವಾಲಯಗಳ ಪುನರ್ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ಹೋರಾಟ ಆರಂಭಿಸಿದೆ. ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಖತುಬ್ ವಿಮಾನ್ ಸ್ಥಂಬವನ್ನು 27 ಹಿಂದೂ ದೇವಾಲಯಗಳನ್ನು ಕಡವಿ ಅದರ ಬಿಡಿ ಭಾಗಗಳಿಂದ ನಿರ್ಮಿಸಲಾಗಿದೆ. ಖುತುಬ್ ಮಿನಾರ್‌ಗೆ ಬೇಟಿ ಕೊಟ್ಟಿದ್ದೇವೆ.ಅಲ್ಲಿ ಹಿಂದೂ ವಿಗ್ರಹಗಳ ಪರಿಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಕೆಡವಿರುವ ಐತಿಹಾಸಿಕ ಹಿಂದೂ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಬೇಕು. ಇಷ್ಟೇ ಅಲ್ಲ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.

ಕುತುಬ್‌ ಕಾಂಪ್ಲೆಕ್ಸ್‌ನ ಗಣೇಶ ವಿಗ್ರಹ ಸ್ಥಳಾಂತರ ವಿವಾದ!

ಖತುಬ್ ಮಿನಾರ್ ಪ್ರಾಂಗಣದಲ್ಲಿರುವ ಎಲ್ಲಾ 27 ಹಿಂದೂ ದೇವಾಲಗಳನ್ನು ಮತ್ತೆ ನಿರ್ಮಾಣ ಮಾಡಿ, ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ವಿನೋದ್ ಬನ್ಸಾಲ್ ಆಗ್ರಹಿಸಿದ್ದಾರೆ. ರಜಪೂತರ ವಿಜಯ ಗೋಪುರವನ್ನು ಅದೇ ಪ್ರಾಗಂಣದಲ್ಲಿದ್ದ ಕೆಡವಿದ ದೇವಾಲಯಿಂದ ಖುಬ್ ಮಿನಾರ್ ಆಗಿ ಪರಿವರ್ತಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. 1993ರಲ್ಲಿ ಖುತುಬ್ ವಿನಾರ್ ಸ್ಮಾರಕವನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೋ ಗುರುತಿಸಿದೆ. 

ಖುತುಬ್ ಮಿನಾರ್‌ನಿಂದ ಇದೀಗ ವಿಶ್ವ ಹಿಂದೂ ಪರಿಷತ್ ಆಂದೋಲನ ಆರಂಭಿಸಿದೆ. ಈಗಾಗಲೇ ಹಲವು ಆಂದೋಲನ, ವಿವಾದಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮೂಲಕ ಹಿಂದೂ ಮುಸ್ಲಿಮ್ ನಡುವಿನ ಸಾಮರಸ್ಯಕ್ಕೆ ಅಡ್ಡಿಯಾಗುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.

ಎಣ್ಣೆ ಏಟಿಗೆ ಕುತುಬ್ ಮಿನಾರ್ ಗೋಡೆಗೆ ಡಿಕ್ಕಿ, ಕಾರಿನಲ್ಲಿ ಸ್ಫೋಟ!

ಅನ್ಯಧರ್ಮೀಯರ ಆಟೋ ಬಹಿಷ್ಕಾರಕ್ಕೆ ಕರೆ!
ಭಾನುವಾರದಿಂದ ಏ.20ರ ತನಕ ನಡೆಯಲಿರುವ ಪುತ್ತೂರು ಮಹಾಲಿಂಗೇಶ್ವರ ದೇವಳದ ಜಾತ್ರೋತ್ಸವಕ್ಕೂ ಈಗ ಧರ್ಮ ಸಂಘ​ರ್ಷ​ದ ಕಿಡಿ ಹೊತ್ತಿ​ಕೊಂಡಿ​ದೆ. ಜಾತ್ರೆಗೆ ಬರುವ ಹಿಂದೂ ಭಕ್ತರು ಹಿಂದೂಗಳ ರಿಕ್ಷಾವನ್ನಷ್ಟೇ ಬಳಸುವಂತೆ ಹಿಂದೂ ಜಾಗರಣಾ ವೇದಿಕೆಯು ಇದೀಗ ಅಭಿಯಾನ ಆರಂಭಿಸಿದೆ. ಈ ನಿಟ್ಟಿನಲ್ಲಿ ಹಿಂದೂ ಚಾಲಕರು ಚಲಾಯಿಸುವ ಆಟೋರಿಕ್ಷಾಗಳಿಗೆ ಕೇಸರಿ ಭಗವಾಧ್ವಜ ಅಳ​ವ​ಡಿ​ಸ​ಲಾ​ಗಿ​ದೆ.

ಲವ್‌ ಜಿಹಾದ್‌ ಬಗ್ಗೆ ಹಿಂದೂ ಮಠಾ​ಧೀ​ಶರೆ ಗಮನ ಕೊಡಿ
ಲವ್‌ ಜಿಹಾದ್‌ ಎನ್ನು​ವುದು ನಮ್ಮ ದೇಶಕ್ಕೆ ಮಾರ​ಕ​ವಾ​ಗಿದ್ದು, ಮುಸ್ಲಿಂ ಯುವಕರು ಹಿಂದೂ ಹುಡುಗಿಯರ ಮುಗ್ಧತೆ ದುರುಪಯೋಗಪಡಿಸಿಕೊಂಡು ಪ್ರೇಮದ ಹೆಸರಿನಲ್ಲಿ ಲವ್‌ ಜಿಹಾದ್‌ ನಡೆಸುತ್ತಿದ್ದಾರೆ. ಇದರ ಬಗ್ಗೆ ರಾಜ್ಯದ ಯಾವೊಬ್ಬ ಹಿಂದೂ ಮಠಾ​ಧೀ​ಶರು ಗಮನ ಕೊಡು​ತ್ತಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಗಂಭೀರ ಆರೋಪ ಮಾಡಿ​ದರು.

ಶನಿ​ವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಗದಗ, ಹುಬ್ಬಳ್ಳಿ, ಬಾಗಲಕೋಟ ಸೇರಿ ಹಲವೆಡೆ ಇಂತಹ ಘಟನೆಗಳು ನಡೆಯುತ್ತಿವೆ. ಹಿಂದೂ ಸಮಾಜದ ಬಗ್ಗೆ ಕಳಕಳಿ ಇರುವ ಮಠಾಧೀಶರು ಈ ಬಗ್ಗೆ ಧ್ವನಿ ಎತ್ತಬೇಕಿದೆ. ಆದರೆ ಕೆಲ ಮಠಾ​ಧೀ​ಶರೇ ತಮ್ಮ ಮಠ​ಗಳ ಆವ​ರ​ಣ​ದಲ್ಲಿ ಸೌಹಾರ್ದದ ಹೆಸರಿನಲ್ಲಿ ನಮಾಜ್‌ಗೆ ಅವಕಾಶ ಮಾಡಿ ಕೊಡು​ತ್ತಿ​ರು​ವುದು ಅತ್ಯಂತ ನೋವಿನ ಸಂಗ​ತಿ​ಯಾ​ಗಿದೆ. ಈ ರೀತಿ ಮಠ​ಗ​ಳಲ್ಲಿ ನಮಾಜ್‌ಗೆ ಅವ​ಕಾಶ ಕಲ್ಪಿ​ಸಿದ ಸ್ವಾಮೀ​ಜಿ​ಗ​ಳು ಮಸೀದಿಗೆ ತೆರಳಿ ಲಿಂಗಪೂಜೆ ಮಾಡಲಿ ನೋಡೋಣ. ಅದಕ್ಕೆ ಅವ​ಕಾಶ ಕೊಡು​ತ್ತಾರಾ ಎಂದು ಪ್ರಶ್ನಿ​ಸಿ​ದರು.