ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿ ಸರ್ಕಾರದ ಕಾರ್ಯಕ್ಕೆ ಹಿರಿಯ ಯೋಧರ ಮೆಚ್ಚುಗೆ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿಕೆ
ನವದೆಹಲಿ(ಜ.30): ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿ ಬೆಳಗುತ್ತಿರುವುದನ್ನು ಯೋಧರು ಮೆಚ್ಚಿದ್ದಾರೆ. ಭದ್ರತಾ ಪಡೆಯ ಹಲವು ಹಿರಿಯ ಅಧಿಕಾರಿಗಳು ನನಗೆ ಪತ್ರ ಬರೆದು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ವರ್ಷದ ಮೊದಲ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಈ ರಾಷ್ಟ್ರೀಯ ಯುದ್ಧ ಸ್ಮಾರಕವೂ, ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ದೇಶಕ್ಕಾಗಿ ಮಡಿದು ಹುತಾತ್ಮರಾದಂತಹ ವೀರರ ಹೆಸರುಗಳನ್ನು ಹೊಂದಿದೆ. ಕೆಲವು ಮಾಜಿ ಯೋಧರು ನನಗೆ ಪತ್ರ ಬರೆದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿ ಬೆಳಗುತ್ತಿವುದು ಹುತಾತ್ಮ ಯೋಧರು ಅಮರ ಎಂಬುದರ ಪ್ರತೀಕವಾಗಿದೆ ಎಂದು ಹೇಳಿದರು ಎಂದು ಪ್ರಧಾನಿ ಹೇಳಿದರು.
ನಮ್ಮ ಹುತಾತ್ಮ ಯೋಧರು ನಮಗೆಲ್ಲಾ ಪ್ರೇರಣೆಯಾಗಿದ್ದು, ಅವರ ಕೊಡುಗೆಯೂ ಕೂಡ ಅಮರ್ ಜವಾನ್ ಜ್ಯೋತಿಯಲ್ಲಿ ಅಮರವಾಗಲಿದೆ. ಒಂದು ವೇಳೆ ನಿಮಗೇನಾದರೂ ಅವಕಾಶ ಸಿಕ್ಕಿದಲ್ಲಿ ದಯವಿಟ್ಟು ಒಮ್ಮೆ ಅಮರ್ ಜವಾನ್ ಜ್ಯೋತಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಾನು ನಿಮ್ಮೆಲ್ಲರಿಗೂ ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದರು. ದೇಶವೂ ಈ ಮೂಲಕ ತನ್ನ ರಾಷ್ಟ್ರೀಯ ಪ್ರತೀಕವನ್ನು ಪುನರ್‌ಸ್ಥಾಪಿಸಿದೆ. ಇಂಡಿಯಾ ಗೇಟ್ ಬಳಿ ಇರುವ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿಯಲ್ಲಿ ಜ್ಯೋತಿ ಬೆಳಗುತ್ತಿರುವುದನ್ನು ನೀವು ನಾವು ಕಾಣಬಹುದು. ಇಂಡಿಯಾ ಗೇಟ್ ಬಳಿಯ 'ಅಮರ್ ಜವಾನ್ ಜ್ಯೋತಿ' ಮತ್ತು ಹತ್ತಿರದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ವಾಲೆಯನ್ನು ಒಂದಾಗಿ ವಿಲೀನಗೊಳಿಸಿರುವುದನ್ನು ನಾವು ನೋಡಿದ್ದೇವೆ. ಈ ಭಾವನಾತ್ಮಕ ಕ್ಷಣದಲ್ಲಿ, ಅನೇಕ ದೇಶವಾಸಿಗಳು ಮತ್ತು ಹುತಾತ್ಮರ ಕುಟುಂಬದವರ ಕಣ್ಣಲ್ಲಿ ನೀರು ತುಂಬಿತ್ತು ಎಂದು ಪ್ರಧಾನಿ ಹೇಳಿದರು.
Amar Jawan Jyoti : ತಪ್ಪು ಗ್ರಹಿಕೆ ಬೇಡ, ಅಮರ್ ಜವಾನ್ ಜ್ಯೋತಿ ಆರಿಸುತ್ತಿಲ್ಲ ಎಂದ ಕೇಂದ್ರ ಸರ್ಕಾರ
ಗಾಂಧೀಜಿಯವರ ಪುಣ್ಯತಿಥಿ ಅಂಗವಾಗಿ, ದೇಶದ ಸ್ವಾತಂತ್ರದಲ್ಲಿ ಅವರು ನೀಡಿದ ಕೊಡುಗೆಗಾಗಿ ಇಂದು ದೇಶಾದ್ಯಂತ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ. ಹುತಾತ್ಮ ದಿನವಾದ ಇಂದು ಪ್ರಧಾನಿ ಈ ಮಾತು ಆಡಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಧಾನಿ ಮನ್ ಕೀ ಬಾತ್ ಎಂಬ ರೆಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. ಮಹಾತ್ಮ ಗಾಂಧಿಯವರ 74ನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ ಘಾಟ್‌ನಲ್ಲಿ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಇದ್ದಿದ್ದರಿಂದ ಪ್ರಧಾನಿ ಮೋದಿಯವರ 85ನೇ ಮನ್ ಕೀ ಬಾತ್ ಆವೃತ್ತಿ ಅರ್ಧ ಗಂಟೆ ತಡವಾಗಿ ಶುರುವಾಯಿತು.
National War Memorial : ಸುಮ್ಮನೆ ಆಗಿದ್ದಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕ, ಇದಕ್ಕಾಗಿಯೇ ನಡೆದಿತ್ತು ಹೋರಾಟ!
ಮುಂದಿನ ವರ್ಷದಿಂದ ಪ್ರತಿ ವರ್ಷ ಜನವರಿ 23 ರಿಂದ ಜನವರಿ 30 ರವರೆಗೆ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು. ಈ ಆಚರಣೆಯು ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.
