Covid 19 Variant: ಭಾರತೀಯರ ಮೇಲೆ ಒಮಿಕ್ರೋನ್‌ ಅಪಾಯ ಕಡಿಮೆ : ವೈರಾಣು ತಜ್ಞ ಶಾಹಿದ್‌ ಜಮೀಲ್‌

*ಒಮಿಕ್ರೋನ್‌ ನಿರುಪದ್ರವಿ ವೈರಸ್‌ ಇದ್ದಂತಿದೆ: ಆಸೀಸ್‌ ತಜ್ಞ
*ಭಾರತೀಯರ ಮೇಲೆ ಒಮಿಕ್ರೋನ್‌ ಅಪಾಯ ಕಡಿಮೆ
*125 ಕೋಟಿ ಗಡಿಗೆ ಕೋವಿಡ್‌ ಲಸಿಕೆ : 2ನೇ ಅಲೆಯ ಅತಿ ಕನಿಷ್ಠಕ್ಕಿಳಿದ ಕೇಸು

Very large number of Indians may be protected from Omicron says Eminent virologist Shahid Jameel mnj

ನವದೆಹಲಿ(ಡಿ. 01): ಕೋವಿಡ್‌ ವೈರಸ್‌ನ ಹೊಸ ರೂಪಾಂತರಿ ಒಮಿಕ್ರೋನ್‌ನಿಂದ (Covid-19 New Variant Omicron)) ಭಾರತೀಯರು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಭಾರತೀಯರು ಹೊಸ ರೂಪಾಂತರಿ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಖ್ಯಾತ ವೈರಾಣು ತಜ್ಞ ಶಾಹಿದ್‌ ಜಮೀಲ್‌ (Shahid Jameel) ಹೇಳಿದ್ದಾರೆ. ಆದರೆ ಜನರು ಜಾಗೃತರಾಗಿರಬೇಕು, ಮಾಸ್ಕ್‌ ಧರಿಸಬೇಕು ಎಂದು ಹೇಳಿದ್ದಾರೆ. ‘ಡೆಲ್ಟಾದಿಂದ (Delta Variant) ಉಂಟಾದ 2ನೇ ಅಲೆಯ ವೇಳೆಯಲ್ಲಿ ನಾವು ಊಹಿಸಿದ್ದಕ್ಕಿಂತ ಹೆಚ್ಚಿನ ಜನರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು. ಸೆರೋ ಸಮೀಕ್ಷೆ ಅನ್ವಯ ಶೇ.67ಕ್ಕಿಂತ ಹೆಚ್ಚು ಜನರಲ್ಲಿ ಕೋವಿಡ್‌ ವಿರುದ್ಧದ ಪ್ರತಿಕಾಯಗಳು (Antibodies) ಉತ್ಪತ್ತಿಯಾಗಿದ್ದವು. ಇವೆಲ್ಲವೂ ಲಸಿಕೆಯಿಂದ ಉತ್ಪಾದನೆಯಾದ ಪ್ರತಿಕಾಯಗಳಲ್ಲ. ಬದಲಾಗಿ ಜನರಲ್ಲಿ ಸೋಂಕು ಕಾಣಿಸಿಕೊಂಡು ಬಳಿಕ ಸ್ವಾಭಾವಿಕವಾಗಿ ಉತ್ಪತ್ತಿಯಾದ ಪ್ರತಿಕಾಯಗಳು. ಹೀಗಾಗಿ ಈ ಪ್ರತಿಕಾಯಗಳು ಒಮಿಕ್ರೋನ್‌ ಅಥವಾ ಇನ್ಯಾವುದೇ ಹೊಸ ರೂಪಾಂತರಿಯ ವಿರುದ್ಧವೂ ಹೋರಾಡುವ ಶಕ್ತಿ ಹೊಂದಿರುತ್ತವೆ ಎಂದು ತಿಳಿಸಿದ್ದಾರೆ.

2ನೇ ಅಲೆಯ ಅತಿ ಕನಿಷ್ಠಕ್ಕಿಳಿದ ಕೇಸು

ಮಂಗಳವಾರ (ನ. 30) ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 6990 ಹೊಸ ಕೋವಿಡ್‌ ಪ್ರಕರಣ (Corona Cases) ವರದಿಯಾಗಿದೆ. ಇದು ಕಳೆದ 551 ದಿನಗಳಲ್ಲೇ ಕನಿಷ್ಠ ಅಂದರೆ 2ನೇ ಅಲೆಯ ಅವಧಿಯಲ್ಲೇ ಅತಿ ಕನಿಷ್ಠ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ 3.45 ಕೋಟಿಗೆ ಏರಿಕೆಯಾಗಿದೆ. ಇನ್ನು ಇದೇ ಅವಧಿಯಲ್ಲಿ 190 ಜನರು ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 4.68 ಲಕ್ಷಕ್ಕೆ ಏರಿಕೆಯಾಗಿದೆ. 

Omicron Alert: ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ, ಕೇಂದ್ರದ ಮಾರ್ಗಸೂಚಿ ಹೀಗಿದೆ

ಇನ್ನು ಸಕ್ರಿಯ ಪ್ರಕರಣಗಳು (Active Cases) 1,00,543ಕ್ಕೆ ಇಳಿಕೆ ಕಂಡಿದ್ದು, ಇದು, ಇದು 546 ದಿನಗಳ ಕನಿಷ್ಠವಾಗಿದೆ. ಸತತ 53 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,316 ಸೋಂಕಿತರು ಗುಣಮುಖರಾಗಿದ್ದು (Recovered), ದೈನಂದಿನ ಪಾಸಿಟಿವಿಟಿ ದರ (Positivity Rate) ಶೇ.0.69ರಷ್ಟಿದೆ. ದೇಶದಲ್ಲಿ ಈವರೆಗೆ 123.25 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

125 ಕೋಟಿ ಗಡಿಗೆ ಕೋವಿಡ್‌ ಲಸಿಕೆ

ಮಂಗಳವಾರ ರಾತ್ರಿ ವೇಳೆಗೆ ದೇಶದಲ್ಲಿ ಕೋವಿಡ ಲಸಿಕೆ (Covid 19 Vaccine) ಪಡೆದವರ ಸಂಖ್ಯೆ 1.24 ಕೋಟಿ ದಾಟಿದೆ. ಮಂಗಳವಾರ 70 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆ ವಿತರಿಸಲಾಗಿದೆ. ಹೀಗಾಗಿ ಬುಧವಾರ ಅಥವಾ ಗುರುವಾರ ಭಾರತ 125 ಕೋಟಿ ಡೋಸ್‌ ಲಸಿಕೆ ವಿತರಿಸಿದ ದಾಖಲೆಗೆ ಪಾತ್ರವಾಗಲಿದೆ. ಇದುವರೆಗೆ 79 ಕೋಟಿ ಜನರಿಗೆ ಮತ್ತು 45 ಕೋಟಿ ಜನರಿಗೆ ಎರಡು ಡೋಸ್‌ (2nd Dose) ನೀಡಲಾಗಿದೆ.

ಒಮಿಕ್ರೋನ್‌ ನಿರುಪದ್ರವಿ ವೈರಸ್‌ ಇದ್ದಂತಿದೆ: ಆಸೀಸ್‌ ತಜ್ಞ

ಕ್ವೀನ್ಸ್‌ಲ್ಯಾಂಡ್‌: ಇಡೀ ಜಗತ್ತು ಒಮಿಕ್ರೋನ್‌ ರೂಪಾಂತರಿ ಕೊರೋನಾವೈರಸ್‌ಗೆ ಬೆಚ್ಚಿ ಕುಳಿತಿದ್ದರೆ ಆಸ್ಪ್ರೇಲಿಯಾದ ತಜ್ಞರೊಬ್ಬರು ಈ ವೈರಸ್‌ ನಿರುಪದ್ರವಿ ಇದ್ದಂತಿದೆ ಎಂದು ಊಹಿಸಿದ್ದಾರೆ. ಅಲ್ಲದೆ, ಒಂದು ವೇಳೆ ಇದು ದೊಡ್ಡ ಪ್ರಮಾಣದಲ್ಲಿ ಹರಡಿದರೂ ಕಡಿಮೆ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂದೂ ಹೇಳಿದ್ದಾರೆ. ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಗ್ರಿಫಿತ್‌ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಪ್ಲಾನೆಟರಿ ಹೆಲ್ತ್‌ ಅಂಡ್‌ ಫುಡ್‌ ಸೆಕ್ಯುರಿಟಿ ವಿಭಾಗದ ನಿರ್ದೇಶ ಹಮಿಶ್‌ ಮೆಕಲಮ್‌ ಈ ಕುರಿತು ತಾವು ನಡೆಸಿದ ಸೀಮಿತ ಅಧ್ಯಯನದ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಒಮಿಕ್ರೋನ್‌ ಅಪಾಯಕಾರಿಯಲ್ಲದ ರೂಪಾಂತರಿ ಇರಬಹುದು ಎಂದು ಊಹಿಸಿದ್ದಾರೆ. 

News Hour: ಲಸಿಕೆ ಹಾಕಿಸಿಕೊಳ್ಳದವರಿಗೆ ಶಾಕ್, ಲಾಕ್ ಡೌನ್ ಇಲ್ಲವೇ ಇಲ್ಲ

ಅಲ್ಲದೆ, ಇದು ಅತಿಹೆಚ್ಚು ರೂಪಾಂತರ ಹೊಂದಿರುವ ತಳಿಯಾಗಿರುವ ಸಾಧ್ಯತೆಯಿದ್ದು, ಜಗತ್ತಿನ ಕೆಲ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಬಹುದು. ಆದರೆ, ಅದರಿಂದ ಉಂಟಾಗುವ ರೋಗಲಕ್ಷಣಗಳು ಸೌಮ್ಯವಾಗಿರಬಹುದು. ಒಂದು ವೈರಸ್‌ ಸಾಮಾನ್ಯವಾಗಿ ಹೇಗೆ ತನ್ನ ಆರ್ಭಟದ ಕೊನೆಯ ದಿನಗಳಲ್ಲಿ ಶಕ್ತಿ ಕಳೆದುಕೊಂಡು ನಿರುಪದ್ರವಿಯಾಗುತ್ತದೆಯೋ ಆ ಹಂತದಲ್ಲಿ ಒಮಿಕ್ರೋನ್‌ ಈಗ ಇರಬಹುದು. ಅಂದರೆ ಇದು ಸೋಂಕಿನ ಅಂತ್ಯದ ಲಕ್ಷಣವಿರಬಹುದು ಎಂದು ಹೇಳಿದ್ದಾರೆ. ಇನ್ನು ಈ ವೈರಸ್‌ಗೆ ಲಸಿಕೆಗಳಿಂದ ತಪ್ಪಿಸಿಕೊಳ್ಳುವ ಶಕ್ತಿಯಿದೆಯೇ, ಇದು ಒಬ್ಬರಿಂದ ಒಬ್ಬರಿಗೆ ಯಾವ ವೇಗದಲ್ಲಿ ಹರಡುತ್ತದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಾಕಷ್ಟುಅಧ್ಯಯನಗಳು ನಡೆಯಬೇಕು ಎಂದೂ ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios