ನಾಳೆಯಿಂದ FASTag ನಿಷ್ಕ್ರೀಯ ಆದೀತು ಎಚ್ಚರ, KYC ಪೂರ್ಣಗೊಳಿಸಲು ಇಂದೇ ಕೊನೆಯ ದಿನ!

ಒಂದು ವಾಹನ, ಒಂದು ಫಾಸ್ಟ್ಯಾಗ್ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬಹುತೇಕ ವಾಹನಗಳು FASTag ಬಳಸುತ್ತಿದೆ. ಆದರೆ ನೀವು ಬಳಸುವ FASTagನ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯಾ ಅನ್ನೋದು ಪರಿಶೀಲಿಸಬೇಕು. ಕಾರಣ ನಾಳೆಯಿಂದ ಕೆವೈಸಿ ಪೂರ್ಣಗೊಳ್ಳದ ಫಾಸ್ಟ್ಯಾಗ್ ನಿಷ್ಕ್ರೀಯಗೊಳ್ಳಲಿದೆ. KYC ಪೂರ್ಣಗೊಳಿಸಲು ಜನವರಿ 31 ಕೊನೆಯ ದಿನವಾಗಿದೆ.

Vehicle FASTag will deactivated from Feb 1st if you are not done with KYC Process ckm

ನವದೆಹಲಿ(ಜ.31) ಟೋಲ್ ಕಟ್ಟಲು ನಗದು ಪಾವತಿ ಬದಲು ಡಿಜಿಟಲ್ ವ್ಯವಸ್ಥೆ ಜಾರಿ ಮಾಡಿದೆ. ಫಾಸ್ಟ್ಯಾಗ್ ಮೂಲಕ ಎಲ್ಲಾ ಕಡೆಗಳಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸದ್ಯ ಬಹುತೇಕ ವಾಹನಗಳು ಫಾಸ್ಟ್ಯಾಗ್ ಬಳಸುತ್ತಿದೆ. ಆದರೆ ಒಂದು ಫಾಸ್ಟ್ಯಾಗ್‌ನ್ನು ಬೇರೆ ಬೇರೆ ವಾಹನಗಳಿಗೆ ಬಳಸುತ್ತಿರುವುದು ಪತ್ತೆಯಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಒಂದು ವಾಹನಕ್ಕೆ ಒಂದು ಫಾಸ್ಟ್ಯಾಗ್ ನೀತಿ ಜಾರಿಗೊಳಿಸಿದೆ. ಈ ನಿತಿ ಫೆಬ್ರವರಿ 1 ರಿಂದ ಜಾರಿಗೆ ಬರುತ್ತಿದೆ. ಇದಕ್ಕೂ ಮುನ್ನ ವಾಹನ ಮಾಲೀಕರು ತಮ್ಮ ತಮ್ಮ ಫಾಸ್ಟ್ಯಾಗ್ ಕೆವೈಸಿ ಪೂರ್ಣಗೊಳಿಸಬೇಕು. ಕೆವೈಸಿ ಪೂರ್ಣಗೊಳಿಸಲು ಇಂದು ಕೊನೆಯ ದಿನವಾಗಿದೆ. 

ಇ-ಕೆವೈಸಿ ಭರ್ತಿಯ ಜತೆಗೆ ಜ.31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್‌ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು (ಇದ್ದರೆ) ಬ್ಯಾಂಕ್‌ಗೆ ಒಪ್ಪಿಸಬೇಕು. ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್‌ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ. ಒಂದು ವೇಳೆ ಇ - ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್ಯಾಗ್‌ನಲ್ಲಿ ಹಣ ಇದ್ದ ಹೊರತಾಗಿಯೂ ಅದು ಬಳಕೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಫಾಸ್ಟಾಗ್ ನಿಷ್ಕ್ರೀಯಗೊಳ್ಳುವ ಮೊದಲು KYC ಮಾಡುವುದು ಹೇಗೆ? ಜ.31 ಡೆಡ್‌ಲೈನ್!

ಈ ಬಗ್ಗೆ ಹೆಚ್ಚಿನ ಮಾಹಿತಿಯುನ್ನು ನೀವು ಫಾಸ್ಟ್ಯಾಗ್‌ ಪಡೆದುಕೊಂಡ ಬ್ಯಾಂಕ್‌ಗಳಿಗೆ ಹೋಗಿ ತಿಳಿಯಬಹುದು ಅಥವಾ ಟೋಲ್‌ ಪ್ಲಾಜಾಗೆ ಹೋಗಿ ಪಡೆಯಬಹುದು ಅಥವಾ ಫಾಸ್ಟ್ಯಾಗ್‌ ಟೋಲ್‌ ಫ್ರೀ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಅದು ಸಲಹೆ ನೀಡಿದೆ.

ಆನ್‌ಲೈನ್ ಮೂಲಕ ಸುಲಭವಾಗಿ ಫಾಸ್ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ಸಾಧ್ಯವಿದೆ. ನಿಮ್ಮ ಫಾಸ್ಟ್ಯಾಗ್ ಖಾತೆಯನ್ನು ಒಪನ್ ಮಾಡಿಕೊಳ್ಳಿ. ಬಳಿಕ ಪ್ರೊಫೈಲ್ ಕ್ಲಿಕ್ ಮಾಡಿ ಕೆವೈಸಿ ಪರೀಶಿಲಿಸಿ. ಕೆವೈಸಿ ಫುಲ್ ಎಂದಿದ್ದರೆ ಈಗಾಗಲೇ ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. ಇಲ್ಲದಿದ್ದಲ್ಲಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೆವೈಸಿ ಪೂರ್ಣಗೊಳಿಸಿದೆ. 

ಬ್ಯಾಂಕ್ ಮೂಲಕ ಕೆವೈಸಿ ಮಾಡಲು ಸಾಧ್ಯವಿದೆ. ಇದಕ್ಕಾಗಿ ನಿಮ್ಮ ಫಾಸ್ಟ್ಯಾಗ್ ಒದಗಿಸಿರುವ ಬ್ಯಾಂಕ್‌ನ ಹತ್ತಿರದ ಶಾಖೆಗೆ ತೆರಳಿ ಅರ್ಜಿ ಪಡೆದು ಅಗತ್ಯ ದಾಖಲೆ ಲಗತ್ತಿಸಿ ನೀಡಬೇಕು. ಆದರೆ ಈ ರೀತಿ ಕೆವೈಸಿ ಮಾಡಲು ಕಾಲವಕಾಶ ಮಿಂಚಿಹೋಗಿದೆ.  

ಪ್ರತಿ ದಿನ ಎಷ್ಟಾಗುತ್ತೆ FASTag ಟೋಲ್ ಸಂಗ್ರಹ? ಹೆದ್ದಾರಿ ಸಂಚಾರದಲ್ಲಿ ಕೋಟಿ ಕೋಟಿ ಆದಾಯ!

ಇತ್ತೀಚೆಗೆ ಒಂದೇ ಫಾಸ್ಟ್ಯಾಗನ್ನು ಬೇರೆ ಬೇರೆ ವಾಹನಗಳಿಗೆ ಬಳಸುವುದು ಹಾಗೂ ಒಂದೇ ವಾಹನಕ್ಕೆ ಬೇರೆ ಬೇರೆ ಫಾಸ್ಟ್ಯಾಗ್ ಲಿಂಕ್‌ ಮಾಡುವ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಎನ್‌ಎಚ್ಎಐ ಬಿಗಿ ಕ್ರಮ ತೆಗೆದುಕೊಂಡಿದೆ. ‘ಇದು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಂ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ’ ಎಂದು ಅದು ಹೇಳಿದೆ. ಈಗಾಗಲೇ ದೇಶದಲ್ಲಿ 8 ಕೋಟಿ ಫಾಸ್ಟ್ಯಾಗ್‌ ಬಳಕೆದಾರರಿದ್ದಾರೆ ಹಾಗೂ ಶೇ.98ರಷ್ಟು ವಾಹನಗಳು ಫಾಸ್ಟ್ಯಾಗ್‌ಗೆ ಒಳಪಟ್ಟಿವೆ.

Latest Videos
Follow Us:
Download App:
  • android
  • ios