Asianet Suvarna News Asianet Suvarna News

ತರಕಾರಿ ಮೇಲೆ ಮೂತ್ರ ವಿಸರ್ಜನೆ ಆರೋಪ: ಮಾರಾಟಗಾರನ ಬಂಧನ: ವಿಡಿಯೋ ವೈರಲ್

Viral Video: ತರಕಾರಿ ವ್ಯಾಪಾರಿಯೊಬ್ಬ ಕೈಗಾಡಿಯ ಮೇಲೆ ಇಟ್ಟಿದ್ದ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ

Vegetable vendor spits pees on vegetables before selling them in Uttar Pradesh Video Viral mnj
Author
First Published Sep 20, 2022, 5:21 PM IST

ಉತ್ತರಪ್ರದೇಶ (ಸೆ. 20): ಉತ್ತರ ಪ್ರದೇಶದ ಬರೇಲಿಯಲ್ಲಿ ತರಕಾರಿ ವ್ಯಾಪಾರಿಯೊಬ್ಬ ಕೈಗಾಡಿಯ ಮೇಲೆ ಇಟ್ಟಿದ್ದ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಹಿಂದೂ ಪರ ಕಾರ್ಯಕರ್ತರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಪೊಲೀಸರು ತರಕಾರಿ ಮಾರಾಟಗಾರನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. 

ಬರೇಲಿಯ ಕೈಲಾಶ್ ಆಸ್ಪತ್ರೆ ಸಮೀಪದ ಜನಕಪುರಿಯಲ್ಲಿ ಈ ಪ್ರಕರಣ ನಡೆದಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೈಗಾಡಿಯಲ್ಲಿ ಇರಿಸಲಾಗಿದ್ದ ತರಕಾರಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ತರಕಾರಿ ವ್ಯಾಪಾರಿಯೊಬ್ಬರು ಸಿಕ್ಕಿಬಿದ್ದಿದ್ದಾರೆ.  ಹೆಸರನ್ನು ಕೇಳಿದಾಗ ಷರೀಫ್ ಖಾನ್‌ ಎಂದು ಹೇಳಿದ್ದು ಇಜ್ಜತ್‌ನಗರದ ನಿವಾಸಿ  ಎಂದಿದ್ದಾನೆ. ಹಿಂದೂ ಜನನಿಬಿಡ ಪ್ರದೇಶಗಳಲ್ಲಿ ತರಕಾರಿ ಮಾರಾಟ ಮಾಡುವುದಾಗಿ ತರಕಾರಿ ಮಾರಾಟಗಾರ ಹೇಳಿದ್ದಾನೆ ಎಂದು ಹಿಂದೂ ಕಾರ್ಯಕರ್ತ ದುರ್ಗೇಶ್ ಕುಮಾರ್ ಗುಪ್ತಾ ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ತರಕಾರಿ ಮಾರಾಟಗಾರ ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿದ್ದು ಇನ್ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾನೆ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿ ಕ್ಷಮೆ ಕೇಳಿದ್ದಾನೆ ಎಂದು ದುರ್ಗೇಶ್ ಕುಮಾರ್ ಹೇಳಿದ್ದಾರೆ. 

 

 

ಸಾರ್ವಜನಿಕರ ಆರೋಗ್ಯ ಕೆಡಿಸುವ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಈ ತರಕಾರಿ ವ್ಯಾಪಾರಿ ಇಂತಹ ಅಸಹ್ಯಕರ ಕೃತ್ಯ ಎಸಗಿದ್ದು, ಸೋಂಕು ಹರಡಿ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂದು ದುರ್ಗೇಶ್ ಕುಮಾರ್ ಗುಪ್ತಾ ದೂರಿನಲ್ಲಿ  ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ದೂರುದಾರರ ಹೊರತಾಗಿ 4 ಮಂದಿಯ ಹೆಸರನ್ನು ಸಾಕ್ಷಿಗಳಾಗಿ ಬರೆದುಕೊಳ್ಳಲಾಗಿದೆ ಎಂದು ಆಜ್‌ ತಕ್‌ ವರದಿ ಮಾಡಿದೆ. 

ಸಂಬಳ ಕೇಳಿದ ಟ್ಯಾಕ್ಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿಯರು

ಇನ್ನು ಇತ್ತ ಷರೀಫ್ ಖಾನ್ ಕಳೆದ 35 ವರ್ಷಗಳಿಂದ ತರಕಾರಿ ಮಾರುತ್ತಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರ ನಡವಳಿಕೆ ಉತ್ತಮವಾಗಿದೆ. ಅವರ ಬಗ್ಗೆ ನಾವು ಈಂಥಹ ಆರೋಪ ಕೇಳಿಲ್ಲ. ಸದ್ಯ ಅವರು ಪೊಲೀಸ್ ಠಾಣೆಯಲ್ಲಿ ಇದ್ದಾರೆ ಎಂದು ಠಾಣೆಯಿಂದ ನಮಗೆ ಮಾಹಿತಿ ಬಂದಿದೆ. ಠಾಣೆಗೆ ಬಂದಾಗ ಅವರ ಮೇಲೆ ತರಕಾರಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಕೇಳಿಬಂದಿದೆ ಎಂದು ತಿಳಿದು ಬಂದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.  

ಮತ್ತೊಂದೆಡೆ, ಇಂತಹ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ.  ಪ್ರತಿಯೊಬ್ಬ ಹಣ್ಣು ಮತ್ತು ತರಕಾರಿ ಮಾರಾಟಗಾರರ ಹೆಸರು ಮತ್ತು ಗುರುತನ್ನು ಅವರ ಕೈಗಾಡಿ ಮೇಲೆ ಬರೆಯಬೇಕು ಎಂದು ಅವರು ನಗರಸಭೆ ಮತ್ತು ಆಡಳಿತವನ್ನು ಒತ್ತಾಯಿಸಿದ್ದಾರೆ. ಇನ್ನು ಕಳೆದ ಕೆಲವು ವರ್ಷಗಳಲ್ಲಿ ಇಂತಹ ಅನೇಕ ಪ್ರಕರಣಗಳು ದೇಶದಾದ್ಯಂತ ವರದಿಯಾಗಿವೆ.

Follow Us:
Download App:
  • android
  • ios