Asianet Suvarna News Asianet Suvarna News

ಕೃಷಿ ನೀತಿ ಮರುಪರಿಶೀಲನೆ ಅಗತ್ಯ; ಬೆಳೆಗೆ ಬೆಂಕಿ ಹಚ್ಚಿದ ರೈತನ ವಿಡಿಯೋ ಮೂಲಕ BJP ಕುಟುಕಿದ ವರುಣ್ ಗಾಂಧಿ!

  • ಬಿಜೆಪಿ ವಿರುದ್ಧ ವರುಣ್ ಗಾಂಧಿ ಕಿಡಿ, ಕೃಷಿ ನೀತಿ ಮರುಪರಿಶೀಲನೆ ಅಗತ್ಯ
  • ಕೇಂದ್ರ ಹಾಗೂ ಯುಪಿ ಸರ್ಕಾರದ ವಿರುದ್ಧ ಪರೋಕ್ಷ ಕಿಡಿ
  • ಬೆಳೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ರೈತರ ವಿಡಿಯೋ ಶೇರ್
Varun gandhi says need to rethink agriculture policy after share farmer burning his entire crop video ckm
Author
Bengaluru, First Published Oct 23, 2021, 8:07 PM IST
  • Facebook
  • Twitter
  • Whatsapp

ನವದೆಹಲಿ(ಅ.23): ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಉತ್ತರ ಪ್ರದೇಶ ಯೋಗಿ ಸರ್ಕಾರದ ವಿರುದ್ಧ ಸದಾ ಕಿಡಿ ಕಾರುತ್ತಿರುವ ಬಿಜೆಪಿ ನಾಯಕ ವರುಣ್ ಗಾಂಧಿ(Varun Gandhi) ಇದೀಗ ಮತ್ತೆ ರೈತರ ಪರ ನಿಂತು ತಮ್ಮದೇ ಪಕ್ಷವನ್ನು ಕುಟುಕಿದ್ದಾರೆ. ಲಂಖೀಪುರ ಹಿಂಸಾಚಾರ( Lakhimpur Kheri), ರಾಯಬರೇಲಿ ಪ್ರವಾಹ ಸೇರಿದಂತೆ ಕೆಲ ಪ್ರಮುಖ ವಿಚಾರ ಹಿಡಿದು ಯೋಗಿ ಸರ್ಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ಇದೀಗ ತನ್ನ ಭತ್ತದ ಬೆಳೆ ಮಾರಾಟ ಮಾಡಲಾಗಿದೆ ಬೆಂಕಿ ಹಚ್ಚಿದ ರೈತನ(Farmer) ವಿಡಿಯೋ ಶೇರ್ ಮಾಡಿ, ಕೇಂದ್ರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ರೈತರ ಪರ ನಿಂತ ಬಿಜೆಪಿ ನಾಯಕ ವರುಣ್ ಗಾಂಧಿ ಬೆಂಬಲಿಸಲು ಯುಪಿ ರೈತರಿಗೆ ಶಿವಸೇನೆ ಕರೆ!

ಕೃಷಿ ನೀತಿಯನ್ನು(Agriculture policy) ಮರು ಪರಿಶೀಲಿಸುವ ಅಗತ್ಯವಿದೆ ಎಂದು ವರುಣ್ ಗಾಂಧಿ ಹೇಳಿದ್ದಾರೆ. ಉತ್ತರ ಪ್ರದೇಶದ ರೈತ ಸಮೋಧ ಸಿಂಗ್ ಕಳೆದ 15 ದಿನಗಳಿಂದ ತಾನು ಬೆಳೆದ ಭತ್ತವನ್ನು ಮಾರಾಟ ಮಾಡಲು ಮಂಡಿ ಅಲೆದಾಡಿದ್ದಾನೆ. ಆದರೆ ಎರಡು ವಾರವಾದರೂ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಕಳೆದೆರಡು ವಾರದಿಂದ ಮಂಡಿ ಅಲೆದು ಬೇಸತ್ತಿದ್ದ ರೈತ ಸಮೋಧ ಸಿಂಗ್, ತಾನು ಬೆಳೆದ ಭತ್ತಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಈ ವಿಡಿಯೋವನ್ನು ವರುಣ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೈತರ ಸುಧಾರಣೆಗೆ ತಂದಿರುವ ಕೃಷಿ ನೀತಿಯಿಂದ ರೈತ ಎಲ್ಲಿ ನಿಂತಿದ್ದಾನೆ. ಹೀಗಾಗಿ ಕೃಷಿ ನೀತಿಯನ್ನು(Farm Law) ಮರು ಪರಿಶೀಲಿಸುವ ಅಗತ್ಯವಿದೆ ಎಂದು ವರುಣ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೇಂದ್ರದ ಕೃಷಿ ಮಸೂದೆ ವಿರುದ್ಧ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ರೈತರ ಬೇಡಿಕೆಯಂತೆ ಮೂರು ಕೃಷಿ ಕಾಯ್ದೆ ರದ್ದತಿಗೆ ಈ ಮೂಲಕ ಆಗ್ರಹಿಸಿದ್ದಾರೆ.

 

ಹಿಂದೂ-ಸಿಖ್ಖರ ನಡುವೆ ವಿಷಬೀಜ: ಯೋಗಿ ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿದ ವರುಣ್ ಗಾಂಧಿ!

ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಹಲವು ಬಾರಿ ವರುಣ್ ಗಾಂಧಿ ನಿಂತಿದ್ದಾರೆ. ಪ್ರತಿ ಭಾರಿ ರೈತರ ವಿಡಿಯೋ ಅಥವಾ ವಿಚಾರ ಹಿಡಿದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕೆಲ ದಿನಗಳಿಂದ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ವರುಣ್ ಗಾಂಧಿ ಆಕ್ರೋಶ ಹೊರಹಾಕಿದ್ದರು.

ಲಂಖೀಪುರ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದ ವರುಣ್ ಗಾಂದಿ, ರೈತರ ಪರ ನಿಂತಿದ್ದರು. ರೈತರ ಮೇಲೆ ವಾಹನ ಹರಿಸಿ ತೀವ್ರ ಹಿಂಸಾಚಾರಕ್ಕೆ ಕಾರಣಾಗಿರುವ ಕೃಷಿ ಮಸೂದೆಯನ್ನು ರದ್ದು ಪಡಿಸುವ ಕುರಿತು ವರುಣ್ ಗಾಂಧಿ ದ್ವನಿ ಎತ್ತಿದ್ದರು. ಈ ಘಟನೆ ಕುರಿತು ಯೋಗಿ ಸರ್ಕಾರವನ್ನು ಟೀಕಿಸಿದ್ದರು. 

ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು 'ಗೋಡ್ಸೆ ಜಿಂದಾಬಾದ್': ವರುಣ್ ಗಾಂಧಿ ಕಿಡಿ!

ರಾಯಬರೇಲಿ ಹಾಗೂ ಫಿಲ್ಬಿಟ್‌ನಲ್ಲಿ ಸೃಷ್ಟಿಯಾದ ಪ್ರವಾಹದಿಂದ ಜನರು ಹೈರಾಣಾಗಿದ್ದಾರೆ. ಇವರಿಗೆ ಸೂಕ್ತ ವ್ಯವಸ್ತೆ ಕಲ್ಪಿಸಬೇಕು ಎಂದು ಯೋಗಿ ಸರ್ಕಾರಕ್ಕೆ ಆಗ್ರಹಿಸಿದ್ದರು. ಬಿಜೆಪಿ ಸರ್ಕಾರದ ಹುಳುಕುಗಳನ್ನು ಹಿಡಿದು ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವರುಣ್ ಗಾಂಧಿಗೆ ಪ್ರತಿಭಟನಾ ನಿರತ ರೈತ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು.
 

Follow Us:
Download App:
  • android
  • ios