Asianet Suvarna News Asianet Suvarna News

ಹಿಂದೂ-ಸಿಖ್ಖರ ನಡುವೆ ವಿಷಬೀಜ: ಯೋಗಿ ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿದ ವರುಣ್ ಗಾಂಧಿ!

* ಬಿಜೆಪಿ ಸರ್ಕಾರದ ವಿರುದ್ಧ ಸಿಎಂ ಯೋಗಿ ಕಿಡಿ

* ಹಿಂದೂ ಹಾಗೂ ಸಿಖ್ಖರ ನಡುವೆ ವಿಷಬೀಜ ಬಿತ್ತು ಯತ್ನ ನಡೆಯುತ್ತಿದೆ

* ಲಖೀಂಪುರ ಹಿಂಸಾಚಾರ ನಡೆದಾಗಿನಿಂದಲೂ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ವರುಣ್ ಗಾಂಧಿ

 

Lakhimpur Kheri Violence Varun Gandhi warns against Hindu vs Sikh narrative pod
Author
Bangalore, First Published Oct 10, 2021, 5:44 PM IST

ಲಕ್ನೋ(ಅ.10): ಉತ್ತರ ಪ್ರದೇಶದ ಲಖೀಂಪುರ್ ಖೇರಿ(Lkhimpur Kheri) ಹಿಂಸಾಚಾರ ಪ್ರಕರಣದಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ(Varun Gandhi) ನಿರಂತರವಾಗಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಭಾನುವಾರ, ಅವರು ಯೋಗಿ ಸರ್ಕಾರದ(Yogi Adityanath) ಮೇಲೆ ಮತ್ತೆ ಕಿಡಿ ಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್ ಗಾಂಧಿ ಲಖೀಂಪುರ್ ಖೇರಿಯ ಹಿಂಸಾಚಾರವನ್ನು ಹಿಂದೂ ವಿರೋಧಿ, ಸಿಖ್ ಹೋರಾಟವಾಗಿ ಪರಿವರ್ತಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದು ಅನೈತಿಕ ಮತ್ತು ಸುಳ್ಳು ಎನ್ನುವುದರ ಜೊತೆ, ಮತ್ತೆ ಹಳೇ ನೋವನ್ನು ಕೆದಕುವ ಯತ್ನ. ನಾವು ರಾಜಕೀಯದ ಲಾಭವನ್ನು ರಾಷ್ಟ್ರೀಯ ಏಕತೆಗಿಂತ ಮಿಗಿಲಾಗಿ ಪರಿಗಣಿಸಬಾರದು ಎಂದಿದ್ದಾರೆ.

ಈ ಹಿಂದೆ, ವರುಣ್(varun Gandhi) ಎರಡು ಬಾರಿ ಟ್ವೀಟ್‌ ಮಾಡಿ ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಿದ್ದರು. ಇದರಲ್ಲಿ, ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದರು. ಅಲ್ಲದೇ ಯೋಗಿ ಸರ್ಕಾರಕ್ಕೆ ಪತ್ರ ಬರೆದು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಆದರೀಗ ತನಿಖೆಗೂ ಮುನ್ನವೇ, ವರುಣ್ ಗಾಂಧಿ ಸಿಎಂ ಯೋಗಿಗೆ ಕಬ್ಬಿನ ವಿಚಾರದಲ್ಲಿ ರೈತರಿಗೆ ಬೆಂಬಲವಾಗಿ ಪತ್ರ ಬರೆದಿದ್ದಾರೆ. ಸೆಪ್ಟೆಂಬರ್ ನಲ್ಲಿ, ಅವರು ಮುಜಾಫರ್ ನಗರ ಕಿಸಾನ್ ಮಹಾಪಂಚಾಯತ್ ಬೆಂಬಲಿಸಿ ಟ್ವೀಟ್ ಮಾಡಿದ್ದರು ಮತ್ತು ರೈತರ ಬೇಡಿಕೆಗಳನ್ನು ಆಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ರೈತರಿಗೆ ನ್ಯಾಯ ಸಿಗಬೇಕು: ವರುಣ್

ಘಟನೆಯ ನಂತರ ವರುಣ್ ಒಂದು ವೀಡಿಯೊವನ್ನು ಹಂಚಿಕೊಂಡು 'ಈ ವೀಡಿಯೊ ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆಗೈದು ಧ್ವನಿ ಅಡಗಿಸಲು ಸಾಧ್ಯವಿಲ್ಲ.ರೈತರ ರಕ್ತಕ್ಕರ ನ್ಯಾಯ ಒದಗಿಸಬೇಕು. ರೈತರು ತಪ್ಪು ಹೆಜ್ಜೆ ಇರಿಸುವ ಮುನ್ನ ನಾವು ಅವರಿಗೆ ನ್ಯಾಯ ಒದಗಿಸಬೇಕು’ಎಂದಿದ್ದಾರೆ. ವರುಣ್ ಅಕ್ಟೋಬರ್ 5 ರಂದು ಮತ್ತೊಂದು ವಿಡಿಯೋವನ್ನು ಹಂಚಿಕೊಂಡು, ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಉದ್ದೇಶಪೂರ್ವಕವಾಗಿ ವಾಹನ ಹರಿಸಿರುವ ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ವಾಹನಗಳ ಮಾಲೀಕರು, ಅದರಲ್ಲಿ ಕುಳಿತಿರುವ ಜನರು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದರು.

ಕಬ್ಬಿನ ಬೆಲೆಯನ್ನು ಹೆಚ್ಚಿಸುವಂತೆ ಯೋಗಿಗೆ ಪತ್ರ ಬರೆದ ವರುಣ್ 

ಈ ಹಿಂದೆ ಕಬ್ಬಿನ ದರವನ್ನು ಪ್ರತಿ ಕ್ವಿಂಟಾಲ್‌ಗೆ 25 ರೂಪಾಯಿ ಹೆಚ್ಚಿಸಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವರುಣ್ ಧನ್ಯವಾದ ಹೇಳಿದ್ದರು, ಆದರೆ ರಸಗೊಬ್ಬರ, ಬೀಜಗಳು, ನೀರು ಮತ್ತು ವಿದ್ಯುತ್ ಬೆಲೆ ಏರಿಕೆಯಿಂದಾಗಿ ಈ ಹೆಚ್ಚಳ ಅಸಮರ್ಪಕವಾಗಿದೆ ಎಂದೂ ತಿಳಿಸಿದ್ದರು. ಅದನ್ನು ಪ್ರತಿ ಕ್ವಿಂಟಾಲ್ ಬೆಲೆ 400 ರೂ.ಗೆ ಹೆಚ್ಚಿಸಲು ಅವರು ಬೇಡಿಕೆ ಇಟ್ಟಿದ್ದರು.

ಮೇನಕಾ ಮತ್ತು ವರುಣ್ ಬಿಜೆಪಿಯ ಹೊಸ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಹೊರಕ್ಕೆ

ಇತ್ತೀಚೆಗೆ ಬಿಜೆಪಿ ಹೊಸ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಿಸಿದೆ. ಇದರಲ್ಲಿ, ಸಂಸದರಾದ ಮೇನಕಾ ಗಾಂಧಿ(Menaka gandhi) ಮತ್ತು ವರುಣ್ ಗಾಂಧಿ ಅವರನ್ನು ಹೊರಗಿಡಲಾಗಿದೆ. ಲಖೀಂಪುರ್ ಖೇರಿ ಹಿಂಸಾಚಾರದ ನಂತರ, ವರುಣ್ ಯೋಗಿ ಮತ್ತು ಮೋದಿ ಸರ್ಕಾರದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ದೃಷ್ಟಿಯಿಂದ, ಪಕ್ಷವು ತಾಯಿ ಮೇನಕಾ ಮತ್ತು ಮಗ ವರುಣ್ ಅವರಿಗೆ ಕಾರ್ಯಕಾರಿಣಿಯಲ್ಲಿ ಸ್ಥಾನ ನೀಡಿಲ್ಲ ಎನ್ನಲಾಗಿದೆ.

Follow Us:
Download App:
  • android
  • ios