ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ದೇಶದ ಅತಿವೇಗದ ರೈಲು 'ವಂದೇಭಾರತ್' ಎಕ್ಸ್‌ಪ್ರೆಸ್, ಕಳೆದ 2 ವರ್ಷಗಳಲ್ಲಿ ಗಂಟೆಗೆ ಸರಾಸರಿ ಕೇವಲ 83 ಕಿ.ಮೀ. ವೇಗದಲ್ಲಿ ಸಾಗುತ್ತಿದೆ ಎಂದು ಮಾಹಿತಿ ಹಕ್ಕು ಅರ್ಜಿಗೆ ಉತ್ತರಿಸಲಾಗಿದೆ.
ನವದೆಹಲಿ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ದೇಶದ ಅತಿವೇಗದ ರೈಲು 'ವಂದೇಭಾರತ್' ಎಕ್ಸ್‌ಪ್ರೆಸ್, ಕಳೆದ 2 ವರ್ಷಗಳಲ್ಲಿ ಗಂಟೆಗೆ ಸರಾಸರಿ ಕೇವಲ 83 ಕಿ.ಮೀ. ವೇಗದಲ್ಲಿ ಸಾಗುತ್ತಿದೆ ಎಂದು ಮಾಹಿತಿ ಹಕ್ಕು ಅರ್ಜಿಗೆ ಉತ್ತರಿಸಲಾಗಿದೆ. ಮಧ್ಯಪ್ರದೇಶದ ಚಂದ್ರಶೇಖರ ಗೌರ್ ಅವರು ವಂದೇಭಾರತ್ ವೇಗದ ಬಗ್ಗೆ ಮಾಹಿತಿ ಹಕ್ಕು ಮೂಲಕ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿರುವ ರೈಲ್ವೆ 2021-22ನೇ ಸಾಲಿನಲ್ಲಿ 84.48 ಕಿ.ಮೀ. ಸರಾಸರಿ ವೇಗದಲ್ಲಿ ಹಾಗೂ 2022-23ರಲ್ಲಿ 81.38 ಕಿ.ಮೀ. ಸರಾಸರಿ ವೇಗದಲ್ಲಿ ಓಡಿದೆ. ಈ ಅವಧಿಯಲ್ಲಿ ರೈಲೊಂದು ಗಂಟೆಗೆ ಗರಿಷ್ಠ 93 ಕಿ.ಮೀ. ವೇಗವನ್ನೂ ತಲುಪಿತ್ತು ಎಂದು ಉತ್ತರಿಸಿದೆ.
ವಂದೇಭಾರತ್ ರೈಲುಗಳಿಗೆ ಗಂಟೆಗೆ 180 ಕಿ.ಮೀ. ಓಡುವ ಸಾಮರ್ಥ್ಯ ಇದ್ದರೂ ಹಳಿಗಳ ಸ್ಥಿತಿ ಆಧರಿಸಿ 130 ಕಿ.ಮೀ.ಗೆ ವೇಗಮಿತಿ ನಿಗದಿಪಡಿಸಲಾಗಿದೆ. ಆದರೆ ಹಳಿಗಳ ಸ್ಥಿತಿಯ ಕಾರಣ 130 ಕಿ.ಮೀ. ವೇಗವನ್ನೂ ಮುಟ್ಟಲು ಆಗುತ್ತಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ದೇಶದಲ್ಲಿ ಈಗ 14 ವಂದೇಭಾರತ್ ರೈಲುಗಳು ಓಡುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟುರೈಲುಗಳು ಆರಂಭವಾಗಲಿವೆ. ಈ ರೈಲುಗಳ ವೇಗದ ಸುಗಮ ಸಂಚಾರಕ್ಕೆ ಹಳಿಗಳಲ್ಲಿನ ತಿರುವುಗಳನ್ನು ತೆಗೆದು ನೇರಗೊಳಿಸಲಾಗುತ್ತಿದೆ.
From the India Gate: ವಂದೇ ಭಾರತ್ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!
