ನೀಲಿ ಬದಲು ಕೇಸರಿ, ಬೂದು: ವಂದೇ ಭಾರತ್‌ಗೆ ಈಗ ಹೊಸ ಬಣ್ಣ, ವಿನ್ಯಾಸ!
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಇದೀಗ ಹೊಸ ವಿನ್ಯಾಸದಲ್ಲಿ ಹಾಗೂ ಕೇಸರಿ ಮತ್ತು ಬೂದು ಬಣ್ಣದಲ್ಲಿ ನಿರ್ಮಾಣವಾಗಲಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಇದೀಗ ಹೊಸ ವಿನ್ಯಾಸದಲ್ಲಿ ಹಾಗೂ ಕೇಸರಿ ಮತ್ತು ಬೂದು ಬಣ್ಣದಲ್ಲಿ ನಿರ್ಮಾಣವಾಗಲಿದೆ. ಪ್ರಸ್ತುತ ಬಿಳಿ ಮತ್ತು ನೀಲಿ ಬಣ್ಣದ ಮಿಶ್ರಣದಲ್ಲಿ ವಂದೇ ಭಾರತ್ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬಿಳಿ ಬಣ್ಣ ಬಹುಬೇಗ ಕೊಳೆಯಾಗುವುದರಿಂದ ಅದನ್ನು ನಿರ್ವಹಣೆ ಮಾಡುವುದು ದುಬಾರಿಯಾಗುತ್ತಿದೆ. ಹಾಗಾಗಿ ಬಿಳಿ ಬಣ್ಣದ ಬದಲು ಬೂದು ಬಣ್ಣದಲ್ಲಿ ತಯಾರು ಮಾಡಲು ನಿರ್ಧರಿಸಲಾಗಿದೆ. ವಂದೇ ಭಾರತ್ ರೈಲು ಉತ್ಪಾದನೆಯಾಗುವ ಚೈನ್ನೈ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೊಸ ರೈಲಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಂದೇ ಭಾರತ್ ರೈಲೇಕೆ ಮೋದಿಗೆ ಅಚ್ಚುಮೆಚ್ಚು? ಅವರೇ ಯಾಕೆ ಉದ್ಘಾಟಿಸೋದು?
ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲು ತೂರಾಟ: ಗಾಜಿಗೆ ಹಾನಿ