ನವದೆಹಲಿ(ಜ.06): ಮಹಿಳೆ ಮನೆಯಲ್ಲಿ ಮಾಡುವ ಕೆಲಸಗಳು ಗಂಡ ಆಫೀಸ್‌ನಲ್ಲಿ ಮಾಡೋ ಕೆಲಸಗಳಿಂತ ಏನೂ ಕಮ್ಮಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2014ರಲ್ಲಿ ದೆಹಲಿಯಲ್ಲಿ ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿ ಮೃತಪಟ್ಟವರಿಗೆ ನಷ್ಟಪರಿಹಾರ ನೀಡಿದೆ.

ನ್ಯಾ.ಎನ್‌ವಿ ರಮನಾ ಹಾಗೂ ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ನಷ್ಟ ಮೃತಪಟ್ಟ ವ್ಯಕ್ತಿಯ ತಂದೆಗೆ 9% ಬಡ್ಡಿಯೊಂದಿಗೆ ಪರಿಹಾರವನ್ನು 11.20 ಲಕ್ಷದಿಂದ 33.20 ಲಕ್ಷ ನೀಡಬೇಕೆಂದು  ವಿಮಾ ಕಂಪನಿಗೆ ಹೇಳಿದೆ.

ಸುಳ್ಳಿನ ರಾಜಕೀಯವನ್ನು ಜನರು ತಿರಸ್ಕರಿಸಿದ್ದಾರೆ, ಕರ್ನಾಟಕ ಚುನಾವಣೆಯೇ ಉದಾಹರಣೆ: ಆರ್‌ಸಿ

ನ್ಯಾ. ರಮಣ, ಗೃಹಿಣಿಯರಿಗೆ ಆದಾಯವನ್ನು ಹೇಗೆ ಲೆಕ್ಕ ಹಾಕಬೇಕು ಎಂಬುದನ್ನು ವಿವರಿಸಿ, ಅವರು ಮಾಡಿದ ವಿವಿಧ ಕಾರ್ಯಗಳ ಬಗ್ಗೆ ಸೂಕ್ತ ಅವಲೋಕನಗಳನ್ನು ಮಾಡಿದ್ದಾರೆ. 

2011 ರ ಜನಗಣತಿಯ ಅಂಕಿಅಂಶಗಳನ್ನು ತಿಳಿಸಿ ರಮಣ ಅವರು ಸುಮಾರು 159.85 ಮಿಲಿಯನ್ ಮಹಿಳೆಯರು ಮನೆಕೆಲಸವನ್ನು ತಮ್ಮ ಮುಖ್ಯ ಉದ್ಯೋಗವೆಂದು ಉಲ್ಲೇಖಿಸಿದ್ದಾರೆ.  ಮಹಿಳೆಯರು ದಿನಕ್ಕೆ ಸುಮಾರು 299 ನಿಮಿಷಗಳನ್ನು ಮನೆಯ ಸದಸ್ಯರಿಗಾಗಿ ವ್ಯಯಿಸುತ್ತಾರೆ. ಗೃಹಿಣಿಯರಿಗೆ ಆದಾಯವನ್ನು ನಿಗದಿಪಡಿಸುವುದು ಬಹಳ ಮುಖ್ಯವಾದ ಉದ್ದೇಶವಾಗಿದೆ ಎಂದು ಕೋರ್ಟ್ ಹೇಳಿದೆ.