Asianet Suvarna News Asianet Suvarna News

1 ವರ್ಷ ರಕ್ಷಣೆ ನೀಡಲಿದೆ ಲಸಿಕೆ, 2023 ವೇಳೆಗೆ ವೈರಸ್‌ ಕ್ಷೀಣ!

1 ವರ್ಷ ರಕ್ಷಣೆ ನೀಡಲಿದೆ ಲಸಿಕೆ| ಏಮ್ಸ್‌ ಮುಖ್ಯಸ್ಥ| 2023 ವೇಳೆಗೆ ವೈರಸ್‌ ಕ್ಷೀಣ

Vaccine to give 9 to12 months protection WHO will declare end of COVID by 2023 pod
Author
Bangalore, First Published Nov 25, 2020, 7:35 AM IST

ನವದೆಹಲಿ(ನ.25): ಕೊರೋನಾ ಲಸಿಕೆಯ ಪ್ರಭಾವದ ಅವಧಿ ಕುರಿತು ಪ್ರಶ್ನೆಗಳು ಎದ್ದಿರುವ ಹೊತ್ತಲ್ಲೇ, ಲಸಿಕೆಗಳು ಮಾನವನ ದೇಹಕ್ಕೆ 9 ತಿಂಗಳಿನಿಂದ 1 ವರ್ಷದ ವರೆಗೆ ಸೋಂಕಿನಿಂದ ರಕ್ಷಣೆ ನೀಡಲಿವೆ ಎಂದು ದಿಲ್ಲಿ ಏಮ್ಸ್‌ ಆಸ್ಪತ್ರೆ ಮುಖ್ಯಸ್ಥ ಡಾ| ರಣದೀಪ್‌ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆ ವಿತರಣೆಗೆ ರಾಜ್ಯದಲ್ಲಿ 29500 ಕೇಂದ್ರ, 10 ಸಾವಿರ ಸಿಬ್ಬಂದಿ!

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಕೊರೋನಾ ಲಸಿಕೆಯು ಭಾರೀ ಪ್ರಮಾಣದ ಜನರನ್ನು ಈ ವೈರಸ್‌ನಿಂದ ರಕ್ಷಣೆ ಮಾಡಲಿದೆ. ತನ್ಮೂಲಕ ಕೊರೋನಾ ಹಬ್ಬುವ ಸರಪಳಿಗೆ ಬ್ರೇಕ್‌ ಹಾಕಲು ಅನುಕೂಲವಾಗಲಿದೆ. ಆದರೆ ಕೊರೋನಾ ವೈರಸ್‌ ಅನ್ನು ಮಾತ್ರ ಸಂಪೂರ್ಣವಾಗಿ ಮಟ್ಟಹಾಕಲಾಗದು ಎಂದಿದ್ದಾರೆ.

ಮೊದಲಿಗೆ 1 ಕೋಟಿ ಆರೋಗ್ಯ ಸಿಬ್ಬಂದಿಗೆ ಕೊರೋನಾ ಲಸಿಕೆ!

ಅಲ್ಲದೇ ಮುಂದಿನ ಕೆಲ ವರ್ಷಗಳ ಕಾಲ ಈ ವೈರಸ್‌ ಜೀವಂತವಾಗಿರಲಿದೆ. 2023ರ ಹೊತ್ತಿಗೆ ಕೊರೋನಾ ವೈರಸ್‌ ಸಾಮರ್ಥ್ಯ ತೀರಾ ಕನಿಷ್ಠಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದಿದ್ದಾರೆ.

Follow Us:
Download App:
  • android
  • ios