Omicron scare ಲಸಿಕೆ ಪಡೆದ 10 ರಲ್ಲಿ 9 ಮಂದಿಗೆ ಓಮಿಕ್ರಾನ್ ದಾಳಿ, ಆರೋಗ್ಯ ಇಲಾಖೆ ಮಹತ್ವದ ಸಲಹೆ!
- ಕೇವಲ ಲಸಿಕೆಯಿಂದ ಓಮಿಕ್ರಾನ್ ನಿಯಂತ್ರಿಸಲು ಸಾಧ್ಯವಿಲ್ಲ
- ದೇಶದಲ್ಲಿ 358 ಓಮಿಕ್ರಾನ್ ಕೇಸ್ ಪತ್ತೆ, 3ನೇ ಅಲೆ ಎಚ್ಚರಿಕೆ
- ವಿಶ್ವದಲ್ಲಿ ನಾಲ್ಕನೇ ಕೊರೋನಾ ಅಲೆ ಆತಂಕ ಹೆಚ್ಚಳ
ನವದೆಹಲಿ(ಡಿ.24): ದೇಶದಲ್ಲಿ ಓಮಿಕ್ರಾನ್(Omicron virus) ಆತಂಕದ ಜೊತೆ ಕೊರೋನಾ ವೈರಸ್(Coronavirus) ಕೂಡ ಹೆಚ್ಚಾಗುತ್ತಿದೆ. ಒಮಿಕ್ರಾನ್ ಹರಡುವಿಕೆ ಅತ್ಯಂತ ವೇಗವಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಓಮಿಕ್ರಾನ್ ದಾಳಿ ಮಾಡಿದ 10 ರಲ್ಲಿ 9 ಮಂದಿ ಎರಡೂ ಡೋಸ್(2 dose vaccine) ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಲಸಿಕೆ ಪಡೆದರೆ ತುಂಬಾ ಸೇಫ್ ಎಂದುಕೊಂಡು ಮಾರ್ಗಸೂಚಿ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಶಣ್ ಹೇಳಿದ್ದಾರೆ.
ಭಾರತದಲ್ಲಿ 358 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೊರೋನಾ ವೈರಸ್ ಸಕ್ರಿಯೆ ಪ್ರಕರಣಗಳ ಸಂಖ್ಯೆಕೂಡ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜೇಶ್ ಭೂಷಣ್ ಕೆಲ ಸಲಹೆ ಜೊತೆ ಎಚ್ಚರಿಕೆಯನ್ನು ನೀಡಿದ್ದಾರೆ. ಕೇವಲ ಕೋವಿಡ್ ಲಸಿಕೆಯಿಂದ ಮಾತ್ರ ಓಮಿಕ್ರಾನ್ ನಿಯಂತ್ರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಲಸಿಕೆ ಒಂದು ಹಂತದ ರಕ್ಷಣೆ ನೀಡಲಿದೆ. ಆದರೆ ಲಸಿಕೆ ಪಡೆದು ಕೋವಿಡ್ ಮಾರ್ಗಸೂಚಿ(Covid Guidelines) ಮರೆತರೆ ಅಪಾಯ ಹೆಚ್ಚು ಎಂದಿದ್ದಾರೆ.
CJI NV Ramana : ಭಾರತದಲ್ಲಿ ಅಭಿವೃದ್ಧಿ ಮಾಡಿದ ಕಾರಣಕ್ಕಾಗಿ Covaxin ಲಸಿಕೆಯನ್ನ ಟೀಕಿಸ್ತಾರೆ!
ಭಾರತದಲ್ಲಿ ಪತ್ತೆಯಾದ 358 ಪ್ರಕರಣಗಳ ಪೈಕಿ 183 ಓಮಿಕ್ರಾನ್ ಪ್ರಕರಣ ಎರಡೂ ಡೋಸ್ ಲಸಿಕೆ ಪಡೆದವರಿಗೆ ಅಂಟಿಕೊಂಟಿದೆ. ಹೀಗಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಕೊರೋನಾ ಮಾರ್ಗಸೂಚಿ ಪಾಲಿಸಿದರೆ ಮಾತ್ರ ಓಮಿಕ್ರಾನ್ ಆತಂಕದಿಂದ ದೂರವಿರಬಹುದು ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.
ಭಾರತದಲ್ಲಿ ಕಾಣಿಸಿಕೊಂಡ ಓಮಿಕ್ರಾನ್ ಪ್ರಕರಣಗಳಲ್ಲಿ ಶೇಕಡಾ 27 ರಷ್ಟು ಮಂದಿ ವಿದೇಶಿ ಪ್ರಯಾಣ, ವಿದೇಶಿಗರನ್ನು ಸಂಪರ್ಕಿಸಿಲ್ಲ. ಹೀಗಾಗಿ ಓಮಿಕ್ರಾನ್ ಸ್ವರೂಪವನ್ನು ನಿರ್ದಿಷ್ಟವಾಗಿ ಹೇಳಲು ಸದ್ಯ ಇರುವ ಅಂಕಿ ಅಂಶಗಳು ಸಾಲುವುದಿಲ್ಲ ಎಂದಿದ್ದಾರೆ.
ಯುರೋಪ್, ಉತ್ತರ ಅಮೆರಿಕ, ಆಫ್ರಿಕಾದಲ್ಲಿ ಕೊರೋನಾ ವೈರಸ್ ಪ್ರಕರಣ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ ಏಷ್ಯಾದಲ್ಲಿ ಕೊರೋನಾ ಇಳಿಮುಖವಾಗುತ್ತಿದೆ. ಭಾರತದ ಕೆಲ ರಾಜ್ಯಗಳಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಭಾರತ ಅತೀವ ಎಚ್ಚರಿಕೆ ವಹಿಸಬೇಕು. 3ನೇ ಅಲೆ ಅಬ್ಬರಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದಲ್ಲಿ ಕೊರೋನಾ ಸಕ್ರಿಯ ಪ್ರಕರಣ ಹೆಚ್ಚಾಗಿದೆ. ಹೀಗಾಗಿ ಈಗಿನಿಂದಲೇ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಒತ್ತಿ ಹೇಳಿದ್ದಾರೆ.
Omicron Scare ಮಧ್ಯಪ್ರದೇಶ, UP ಬಳಿಕ ಗುಜರಾತ್‌ನ 8 ನಗರದಲ್ಲಿ ನೈಟ್ ಕರ್ಫ್ಯೂ ಜಾರಿ, ರಾಜ್ಯದಲ್ಲೂ ಆತಂಕ!
ಭಾರತದ 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. 114 ಮಂದಿ ಓಮಿಕ್ರಾನ್ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಎಚ್ಚರಿಕೆ ಅತೀ ಅಗತ್ಯ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.
ಭಾರತದಲ್ಲಿ ಬೂಸ್ಟರ್ ಡೋಸ್?
ಓಮಿಕ್ರಾನ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಭಾರತದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡಬೇಕು ಅನ್ನೋ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಬೂಸ್ಟರ್ ಡೋಸ್ ಕುರಿತು ಅಂಕಿ ಅಂಶಗಳು ಲಭ್ಯವಾಗದ ಕಾರಣ ಕೇಂದ್ರ ಸರ್ಕಾರಕ್ಕೆ ಯಾವುದೇ ನಿಖರತೆ ಇರಲಿಲ್ಲ. ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಬೂಸ್ಟರ್ ಡೋಸ್ ಕುರಿತು ಅಂಕಿ ಅಂಶಗಳನ್ನು ಕಲೆಹಾಕುತ್ತಿದೆ. ವಿದೇಶಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ನೀಡಿದ ಬೂಸ್ಟರ್ ಡೋಸ್ ಫಲಿತಾಂಶದ ವಿವರದ ಅಧ್ಯಯನದಲ್ಲಿ ತೊಡಗಿದೆ. ಇದರ ಜೊತೆಗೆ ICMR ಲಸಿಕೆ ಪರೀಕ್ಷೆ ನಡೆಸುತ್ತಿದೆ. ಕೋವಿಡ್ ಲಸಿಕೆ ಒಮಿಕ್ರಾನ್ ಮೇಲೆ ಪರಿಣಾಮ ಬೀರಲಿದೆಯಾ ಅನ್ನೋ ಸಂಶೋಧನೆಗಳು ನಡೆಯುತ್ತಿದೆ.