ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರ ಯೋಜಿತ ಸಂಚು  ‘ಹೈಕೋರ್ಟ್‌ ಆದೇಶದಂತೆ ಮದರಸಾ ಧ್ವಂಸವಾದ ಅರ್ಧ ಗಂಟೆಯ ಬಳಿಕ ಹಿಂಸಾಚಾರ ಆರಂಭಗೊಂಡಿದೆ. ಇದಕ್ಕಾಗಿ ಮೊದಲೇ ಯೋಜನೆ ರೂಪಿಸಿ ಮನೆಗಳಲ್ಲಿ ಕಲ್ಲು ಸಂಗ್ರಹಿಸಿಡಲಾಗಿತ್ತು ಎಂದು ನೈನಿತಾಲ್‌ ಜಿಲ್ಲಾಧಿಕಾರಿ ವಂದನಾ ಸಿಂಗ್‌ ಹೇಳಿದ್ದಾರೆ.

ಡೆಹ್ರಾಡೂನ್‌: ಕಾನೂನು ಬಾಹಿರವಾಗಿ ನಿರ್ಮಿಸಿದ್ದ ಮದರಸಾ ಧ್ವಂಸದ ವೇಳೆ ಗುರುವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ 6 ಗಲಭೆಕೋರರು ಬಲಿಯಾಗಿದ್ದಾರೆ. ಘಟನೆಯಲ್ಲಿ 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ನಡುವೆ ಹಿಂಸಾಚಾರವನ್ನು ಯೋಜಿತ ಸಂಚು ಎಂದು ಸ್ವತಃ ಜಿಲ್ಲಾಧಿಕಾರಿ ಕಳವಳ ವ್ಯಕ್ತಪಡಿಸಿದ್ದರೆ, ಘಟನೆ ಸಂಬಂಧ ಹಲವರನ್ನು ಬಂಧಿಸಿದ್ದು, ಇನ್ನು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಗಲಭೆಕೋರರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಹಿಂಸಾಚಾರ:

ಹಲ್ವ್ದಾನಿಯ ವನಭುಲ್ಪುರ ಪ್ರದೇಶದಲ್ಲಿ ಅಕ್ರಮ ಮದರಸಾ ಧ್ವಂಸದ ಬಳಿಕ ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಸ್ಥಳೀಯರು ಏಕಾಏಕಿ ಪೊಲೀಸರು, ಅಧಿಕಾರಿಗಳು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ಕೈ ಮೀರುವ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕರ್ಫ್ಯೂ ಹೇರಿ, ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿತ್ತು. ಈ ವೇಳೆ 6 ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದ್ದು, ಶಾಲಾ ಕಾಲೇಜು ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿದೆ.

ಶುಕ್ರವಾರದ ನಮಾಜ್‌ ಬೆನ್ನಲ್ಲೇ, ಜ್ಞಾನವಾಪಿ ವಿಚಾರದಲ್ಲಿ ಜೈಲ್‌ ಭರೋಗೆ ಕರೆ ನೀಡಿದ ಮುಸ್ಲಿಂ ಧರ್ಮಗುರು!

ಯೋಜಿತ ಸಂಚು:ಮನೆಗಳಲ್ಲಿ ಕಲ್ಲು ಸಂಗ್ರಹ

ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರ ಯೋಜಿತ ಸಂಚು ಎಂದು ನೈನಿತಾಲ್‌ ಜಿಲ್ಲಾಧಿಕಾರಿ ವಂದನಾ ಸಿಂಗ್‌ ಹೇಳಿದ್ದಾರೆ. ಈ ಕುರಿತು ಶುಕ್ರವಾರ ಮಾಹಿತಿ ನೀಡಿದ ವಂದನಾ ಸಿಂಗ್‌, ‘ಹೈಕೋರ್ಟ್‌ ಆದೇಶದಂತೆ ಮದರಸಾ ಧ್ವಂಸವಾದ ಅರ್ಧ ಗಂಟೆಯ ಬಳಿಕ ಹಿಂಸಾಚಾರ ಆರಂಭಗೊಂಡಿದೆ. ಈ ಸಮಯದಲ್ಲಿ ಅವರು ಪೊಲೀಸರನ್ನು ಜೀವಂತವಾಗಿ ಸುಡಲು ಯತ್ನಿಸಿದ್ದಾರೆ. ಮೊದಲೇ ಯೋಜನೆ ರೂಪಿಸಿ ಮನೆಗಳಲ್ಲಿ ಕಲ್ಲು ಸಂಗ್ರಹಿಸಿಡಲಾಗಿತ್ತು. ಅಲ್ಲದೇ ಪೊಲೀಸ್‌ ಠಾಣೆಯನ್ನು ಸುಡುವ ಉದ್ದೇಶದಿಂದ ಪೆಟ್ರೋಲ್‌ ಬಾಂಬ್‌ಗಳನ್ನು ಠಾಣೆಯ ಮೇಲೆ ಎಸೆಯಲಾಯಿತು ಎಂದು ಅವರು ಹೇಳಿದ್ದಾರೆ.

ಜೊತೆಗೆ, ವನಭುಲ್ಪುರದ ಬಳಿಕ ಗಲಭೆಕೋರರು, ಎಲ್ಲಾ ಸಮುದಾಯಗಳು ವಾಸಿಸುತ್ತಿರುವ ಗಾಂಧಿನಗರ ಪ್ರದೇಶದತ್ತ ಉದ್ರಿಕ್ತರ ಗುಂಪು ತೆರಳಿದ್ದು, ಈ ಘಟನೆಯನ್ನು ಮತ್ತಷ್ಟು ಭಯಾನಕಗೊಳಿಸಲು ಪ್ರಯತ್ನಿಸಿದ್ದರು. ವನಭುಲ್ಪುರ ಪೊಲೀಸ್‌ ಠಾಣೆಯನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸರ ಜೀವಂತ ಸುಡಲು ಪೂರ್ವನಿಯೋಜಿತ ದಾಳಿ, ಮದರಸಾ ತೆರವು ಗಲಭೆ ಕುರಿತು ಡಿಸಿ ಸ್ಫೋಟಕ ಮಾಹಿತಿ!

Scroll to load tweet…


Scroll to load tweet…