Asianet Suvarna News Asianet Suvarna News

ಉತ್ತರಾಖಂಡದಲ್ಲಿ ಮತ್ತೆ ಹಿಮಸ್ಫೋಟ: ಗಂಗಾನದಿಯಲ್ಲಿ ಎರಡು ಅಡಿ ನೀರು ಏರಿಕೆ

ಉತ್ತರಾಖಂಡ್‌ನ ಇಂಡೋ-ಚೀನಾ ಗಡಿಯ ಭಾಗ ಹಿಮಸ್ಫೋಟವಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ.

Uttarakhand Report of glacier burst near Joshimath on India-China border rbj
Author
Bengaluru, First Published Apr 23, 2021, 11:05 PM IST

ಡೆಹ್ರಾಡೂನ್, (ಏ.23): ಉತ್ತರಾಖಂಡ್‌ನಲ್ಲಿ ಮತ್ತೆ ಹಿಮಸ್ಫೋಟವಾಗಿದೆ. ಈ ಹಿನ್ನೆಲೆಯಲ್ಲಿ ಋಷಿಗಂಗಾದಲ್ಲಿ ಏಕಾಏಕಿ ಪ್ರವಾಹದಲ್ಲಿ ಏರಿಕೆಯಾಗಿದೆ.

ಇಂಡೋ-ಚೀನಾ ಗಡಿಯ ಭಾಗದಲ್ಲಿರುವ ಜೋಷಿಮಠ್ ಬಳಿ ಘಟನೆ ಸಂಭವಿಸಿದ್ದು, ಗಂಗಾನದಿಯಲ್ಲಿ ಎರಡು ಅಡಿ ನೀರು ಏರಿಕೆಯಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ.

ಉತ್ತರಖಂಡ ಹಿಮಸ್ಫೋಟ; ಕೊಚ್ಚಿ ಹೋದ ಸೇತವೆಯನ್ನು 8 ದಿನದಲ್ಲಿ ನಿರ್ಮಿಸಿದ ಸೇನೆ!

ಈ ಕುರಿತು ಗಡಿ ರಸ್ತೆ ಕಾರ್ಯಪಡೆಯ ಕಮಾಂಡರ್ ಕರ್ನಲ್ ಮನೀಶ್ ಕಪಿಲ್ ಮಾಹಿತಿ ನೀಡಿದ್ದು, 'ಚಮೋಲಿ ಜಿಲ್ಲೆಯ ಜೋಶಿಮಠ ಬಳಿ ಭಾರತ-ಚೀನಾ ಗಡಿಯಲ್ಲಿ ದೊಡ್ಡ ಹಿಮನದಿ ಸ್ಫೋಟಗೊಂಡಿದೆ. ಈ ಹಿಮನದಿ ಐಟಿಬಿಪಿಯ 8 ಬಿಎನ್ ಪೋಸ್ಟ್ ಬಳಿ ಮಲಾರಿ ಮತ್ತು ಸುಮ್ನಾ ನಡುವೆ ಸ್ಫೋಟಗೊಂಡಿದೆ. ಇದು ತುಂಬಾ ದೊಡ್ಡದಾಗಿದ್ದು, ಇದರಿಂದಾಗಿ ದೊಡ್ಡ ಅಪಘಾತವೂ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ ಎಂದಿದ್ದಾರೆ.

ಆದ್ರೆ, ಇದುವರೆಗೂ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟದ ಬಗ್ಗೆ ವರದಿಯಾಗಿಲ್ಲ. ಸುದ್ದಿ ತಿಳಿದು, ಐಟಿಬಿಪಿ ಯೋಧರು ಜಾಗರೂಕರಾಗಿದ್ದಾರೆ ಮತ್ತು ತಗ್ಗು ಪ್ರದೇಶಗಳ ಮೇಲೆ ನಿಗಾ ಇಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Follow Us:
Download App:
  • android
  • ios