* ಉತ್ತರಾಖಂಡ್‌ನ ನೂತನ ಸಿಎಂ ಪುಷ್ಕರ್ ಸಿಂಗ್ ಧಾಮಿ* ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮೊದಲೇ ವಿವಾದಕ್ಕೀಡಾದ ಪುಷ್ಕರ್ ಸಿಂಗ್* 2015ರಲ್ಲಿ ಅಖಂಡ ಭಾರತದ ನಕ್ಷೆ ಶೇರ್ ಮಾಡಿದ್ದ ಪುಷ್ಕರ್ ಸಿಂಗ್

ಡೆಹ್ರಾಡೂನ್(ಜು.04): ಉತ್ತರಾಖಂಡ್‌ನ ನೂತನ ಸಿಎಂ ಪುಷ್ಕರ್ ಸಿಂಗ್ ಧಾಮಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮೊದಲೇ ವಿವಾದಕ್ಕೀಡಾಗಿದ್ದಾರೆ. ಈ ವಿವಾದ ಆರು ವರ್ಷ ಹಳೆಯ ಟ್ವೀಟ್‌ನಿಂದಾಗಿ ಉಟ್ಟಿಕೊಂಡಿದೆ. ಧಾಮಿಯವರು 2015ರಲ್ಲಿ ಟ್ವೀಟ್‌ ಒಂದನ್ನು ಶೇರ್ ಮಾಡಿ ಅಖಂಡ ಭಾರತದ ನಕ್ಷೆ ಶೇರ್ ಮಾಡಿದ್ದರು. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಆರಂಭವಾಗಿದೆ. ಅಖಂಡ ಭಾರತ ಎಂದು ತೋರಿಸಲಾದ ಈ ನಕ್ಷೆಯಲ್ಲಿ ಲಡಾಖ್‌ನ ಕೆಲ ಭಾಗ ಹಾಗೂ ಪಾಕಿಸ್ತಾನ ಹಿಡಿತದಲ್ಲಿರುವ ಕೆಲ ಭಾಗಗಳು ಉಳಿದುಕೊಂಡಿವೆ. 

ಧಾಮಿಯವರ ಪ್ರಮಾಣವಚನ ಸ್ವೀಕಾರ ವಿಧಿಗೂ ಮುನ್ನ ಟ್ವಿಟರ್‌ ಬಳಕೆದಾರರು 2025ರಲ್ಲಿ ಟ್ವೀಟ್ ಮಾಡಲಾದ ಈ ಮ್ಯಾಪನ್ನು ಹುಡುಕಿ ತೆಗೆದು ಪುಷ್ಕರ್‌ರಿಗೆ ಸವಾಲುಗಳನ್ನೆಸೆದಿದ್ದಾರೆ.

ಧಾಮಿಯವರು ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಾಜಿ ಸಿಎಂ ತೀರಥ್ ಸಿಂಗ್ ರಾವತ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಇವರನ್ನು ಸಿಎಂ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಧಾಮಿಯವರು ಜಕೇಂದ್ರ ಸಚಿವ ರಾಜನಾಥ್ ಸಿಂಗ್ ಆಪ್ತ ಹಾಗೂ ಆರ್‌ಎಸ್‌ಜೊತೆಯೂ ನಿಕಟ ಸಂಪರ್ಕ ಹೊಂದಿದ್ದಾರೆನ್ನಲಾಗಿದೆ.