Asianet Suvarna News Asianet Suvarna News

ಫೆಬ್ರವರಿ 2ಕ್ಕೆ ಉತ್ತರಾಖಂಡ ಏಕರೂಪ ಸಂಹಿತೆ ವರದಿ ಸರ್ಕಾರಕ್ಕೆ ಸಲ್ಲಿಕೆ: ಸಚಿವ ಸಂಪುಟ ಚರ್ಚೆ ಬಳಿಕ ಸದನದಲ್ಲಿ ಮಂಡನೆ

ಇದು ಜಾರಿಯಾದರೆ ಏಕರೂಪ ಸಂಹಿತೆ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಭಾಜನವಾಗುತ್ತದೆ.

uttarakhand government to get ucc committee s report on february 2 assembly session on 5 february what to expect ash
Author
First Published Jan 30, 2024, 3:25 PM IST

ಡೆಹ್ರಾಡೂನ್ (ಜನವರಿ 30, 2024): ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಮಿತಿಯು ತನ್ನ ಕಾರ್ಯ ಪೂರ್ಣಗೊಳಿಸಿದ್ದು, ಅದರ ವರದಿಯನ್ನು ಫೆಬ್ರವರಿ 2 ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಅಲ್ಲದೆ, ವರದಿ ಬಂದ ನಂತರ ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಬಳಿಕ ರಾಜ್ಯ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಇದು ಜಾರಿಯಾದರೆ ಏಕರೂಪ ಸಂಹಿತೆ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಭಾಜನವಾಗುತ್ತದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಬಿಜೆಪಿ, ಏಕರೂಪ ಸಂಹಿತೆ ಜಾರಿ ಭರವಸೆ ನೀಡಿತ್ತು. ಆ ಪ್ರಕಾರ ಸರ್ಕಾರವು ಮೇ 27, 2022 ರಂದು ನ್ಯಾ। ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ಸಂಹಿತೆಯ ಅಧ್ಯಯನಕ್ಕೆ ಸಮಿತಿ ರಚಿಸಿತ್ತು.

ಇದನ್ನು ಓದಿ: ಏಕರೂಪ ನಾಗರಿಕ ಸಂಹಿತೆ ಕರಡು ಸಿದ್ಧ, ಶೀಘ್ರ ಸರ್ಕಾರಕ್ಕೆ ಹಸ್ತಾಂತರ: ಉತ್ತರಾಖಂಡ ಸಿಎಂ ಧಾಮಿ

ಸಂವಿಧಾನದ 44ನೇ ವಿಧಿಯು ಸರ್ಕಾರಕ್ಕೆ ಭಾರತದ ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸುವ ಅಧಿಕಾರ ನೀಡುತ್ತದೆ. ಇದು ಮದುವೆ, ಉತ್ತರಾಧಿಕಾರ, ದತ್ತು ಮತ್ತು ಇತರ ವಿಷಯಗಳ ಬಗ್ಗೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ತರುತ್ತದೆ.

ಇದನ್ನು ಓದಿ: ಇಸ್ಲಾಮಿಕ್‌ ದೇಶಗಳಲ್ಲೂ ಸುಧಾರಣೆಯಾಗ್ತಿದೆ ವೈಯಕ್ತಿಕ ಕಾನೂನು: ಭಾರತದಲ್ಲಿ ಮಾತ್ರ Uniform Civil Codeಗೆ ತೀವ್ರ ವಿರೋಧ

Follow Us:
Download App:
  • android
  • ios