Uttarakhand Election ಬಿಜೆಪಿ ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ, ಕೇಸರಿ ಪಡೆಗೆ ಅಧಿಕಾರ ಗದ್ದುಗೆ, ಸಮೀಕ್ಷಾ ವರದಿ ಸಂಚಲನ!
- ಕುತೂಹಲ ಕೆರಳಿಸಿದ ಉತ್ತರಖಂಡ ಚುನಾವಣಾ ಕಣ
- ಸಮೀಕ್ಷೆಯಲ್ಲಿ ಬಿಜೆಪಿಗೆ ಅಧಿಕಾರ, ಕಾಂಗ್ರೆಸ್ ತೀವ್ರ ಪೈಪೋಟಿ
- ಮತ್ತೆ ಪುಷ್ಕರ್ ಸಿಂಗ್ ಧಮಿಗೆ ಮುಖ್ಯಮಂತ್ರಿಯಾಗಿ ನೋಡಲು ಬಯಸಿದ ಜನ
ಉತ್ತರಖಂಡ(ಫೆ.08): ಪಂಚ ರಾಜ್ಯಗಳ ಚುನಾವಣೆ(Five States Election 2022) ಕಣ ರಂಗೇರಿದೆ. ಫೆಬ್ರವರಿ 10 ರಿಂದ ಮತದಾನ ಆರಂಭಗೊಳ್ಳಲಿದೆ. ಕೊರೋನಾ(Corona) ನಡುವೆ ಡಿಜಿಟಲ್(digital campaign) ಪ್ರಚಾರ, ಹೊಸ ಮಾದರಿಯಲ್ಲಿ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳು ಸರ್ಕಸ್ ಮಾಡುತ್ತಿದೆ. ಇದರ ನಡುವೆ ಇಂಡಿಯಾ ನ್ಯೂಸ್ ಹಾಗೂ ಜನ್‌ಕಿ ಬಾತ್ ನಡೆಸಿದ ಸಮೀಕ್ಷೆ(Election Survey) ಎಲ್ಲರ ಕುತೂಹಲ ಹೆಚ್ಚಿಸಿದೆ. ಈ ಸಮೀಕ್ಷೆ ಪ್ರಕಾರ ಬಿಜಿಪಿ(BJP) ಹಾಗೂ ಕಾಂಗ್ರೆಸ್(Congress) ನಡುವೆ ನೇರಾ ನೇರಾ ಸ್ಪರ್ಧೆ ಎರ್ಪಟ್ಟಿದೆ. ಆದರೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದಿದೆ.
ಉತ್ತರಖಂಡದಲ್ಲಿ(Uttarkhand) ಬಿಜೆಪಿ ಪ್ರಯಾಸದ ಗೆಲುವು ಸಾಧಿಸಲಿದೆ ಅನ್ನೋದು ಸಮೀಕ್ಷೆ ಸಾರಾಂಶ. ಜನವರಿ 31 ರಿಂದ ಫೆಬ್ರವರಿ 5 ರವರೆಗೆ ಉತ್ತರಖಂಡದ 4,000ಕ್ಕೂ ಹೆಚ್ಚು ಮತದಾರರನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷಾ ವರದಿ(Election Survery Report) ಪ್ರಕಾರ ಉತ್ತರಖಂಡದ ಒಟ್ಟು 70 ಸ್ಥಾನಗಳ ಪೈಕಿ ಬಿಜೆಪಿ 34 ರಿಂದ 39 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಇನ್ನು ಪ್ರಬಲ ಪೈಪೋಟಿ ನೀಡಲಿರುವ ಕಾಂಗ್ರೆಸ್ 27 ರಿದ 33 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ. ಇನ್ನು ಆಮ್ ಆದ್ಮಿ ಪಾರ್ಟಿ 2 ರಿಂದ 4 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ.
UP Elections: ಯೋಗಿ ಗದ್ದುಗೆ ಏರುವುದು ಪಕ್ಕಾ, SPಗೆ ಕೇವಲ 163 ಕ್ಷೇತ್ರ, ಇಲ್ಲಿದೆ ಸಮೀಕ್ಷೆ ಫಲಿತಾಂಶ
ಪುಷ್ಕರ್ ಸಿಂಗ್ ಧಮಿ( Pushkar Singh Dhami) ಮತ್ತೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಬೇಕು ಎಂದು ಜನ ಬಯಸಿದ್ದಾರೆ. ಶೇಕಡಾ 40 ರಷ್ಟು ಮಂದಿ ಬಿಜೆಪಿಗೆ ಮತಹಾಕಲು ಇಚ್ಚಿಸಿದ್ದರೆ, ಕಾಂಗ್ರೆಸ್ ಪಕ್ಷ ಶೇಕಡಾ 38ರಷ್ಟು ವೋಟ್ ಶೇರ್ ಪಡೆದುಕೊಳ್ಳಲಿದೆ. ಇನ್ನು ಆಮ್ ಆದ್ಮಿ ಪಾರ್ಟಿ ಶೇಕಡಾ 11 ಹಾಗೂ ಬಿಎಸ್‌ಪಿ ಶೇಕಡಾ 2 ಹಾಗೂ ಇತರರು ಶೇಕಡಾ 9 ರಷ್ಟು ವೋಟ್ ಶೇರ್ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಉತ್ತರಖಂಡ ಚುನಾವಣೆ ಸಮೀಕ್ಷೆ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಚುನಾವಣೆಗೆ ಕೆಲ ದಿನಗಳಿರುವಾಗ ಪ್ರಕಟಗೊಂಡಿರುವ ಸಮೀಕ್ಷೆ ಇದಾಗಿದ್ದು, ತೀವ್ರ ಪೈಪೋಟಿ ಎದುರಾಗಿದೆ. ಹೀಗಾಗಿ ಫಲಿತಾಂಶ ಉಲ್ಟಾ ಆದರೂ ಅಚ್ಚರಿ ಇಲ್ಲ. ಈ ಫಲಿತಾಂಶ ಕಾಂಗ್ರೆಸ್ ಉತ್ಸಾಹ ಹೆಚ್ಚಿಸಿದ್ದರೆ, ಬಿಜೆಪಿಯಲ್ಲಿ ಕೊಂಚ ಆತಂಕ ತಂದಿದೆ.
Punjab Elections: ಕಾಂಗ್ರೆಸ್‌ಗೆ ಮುಖಭಂಗ, ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ!
ಉತ್ತರಖಂಡ ಚುನಾವಣೆ 2022:
ಉತ್ತರಖಂಡ ವಿಧಾನಸಭಾ ಚುನಾವಣೆ ಫೆಬ್ರವರಿ 14 ರಂದು ನಡೆಯಲಿದೆ. ಒಂದು ಹಂತದಲ್ಲಿ ನಡೆಯಲಿರುವ ಚುನಾವಣೆ ಫಲಿತಾಂಶ ಮಾರ್ಚ್ 10 ರಂದು ಹೊರಬೀಳಲಿದೆ. 70 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ರಾಜಕೀಯ ಹೋರಾಟಕ್ಕೆ ವೇದಿಕೆಯಾಗಿದೆ.
2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳನ್ನು ಗೆದ್ದು ಪೂರ್ಣಬಹುಮತದೊಂದಿಗೆ ಸರ್ಕಾರ ರಚಿಸಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ ನಷ್ಟವೇ ಹೆಚ್ಚು. ಕಾರಣ ಸಮೀಕ್ಷೆ ಹೇಳುತ್ತಿರುವುದು 34 ರಿಂದ 39 ಸ್ಥಾನ ಎಂದಿದೆ. ಬಹುಮತವಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಅಂತರ ಹೆಚ್ಚಿಲ್ಲ.
2017ರಲ್ಲಿ ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ ಬಿಜೆಪಿ ಅವದಿ ಮಾರ್ಚ್ 23, 2022ಕ್ಕೆ ಅಂತ್ಯಗೊಳ್ಳಲಿದೆ. ತ್ರೀವೇಂದ್ರ ಸಿಂಗ್ ರಾವತ್ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೆ, ಬಳಿಕ ಉತ್ತರಖಂಡ ಒಟ್ಟು 3 ಮುಖ್ಯಮಂತ್ರಿಗಳನ್ನು ಕಂಡಿದೆ. ಮಾರ್ಚ್ 9, 2021ರಂದು ತ್ರೀವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ತೀರ್ಥ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜುಲೈ 2, 2021ರಂದು ತೀರ್ಥಸಿಂಗ್ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ಜವಾಬ್ದಾರಿಯನ್ನು ಪುಷ್ಕರ್ ಸಿಂಗ್ ಧಮಿ ವಹಿಸಿಕೊಂಡರು.