ಡೆಹ್ರಾಡೂನ್‌(ಏ.14): ಲಾಕ್‌ಡೌನ್‌ ಇದ್ದ ಹೊರತಾಗಿಯೂ ಉತ್ತರಾಖಂಡದ ಋುಷಿಕೇಶದಲ್ಲಿ ಗಂಗಾ ನದಿಯ ದಂಡೆಯ ಮೇಲೆ ಅಡ್ಡಾಡುತ್ತಿದ್ದ ಕಾರಣಕ್ಕೆ 10 ವಿದೇಶಿ ಪ್ರಜೆಗಳಿಗೆ ಪೊಲೀಸರು 500 ಬಾರಿ ‘ಐ ಆ್ಯಮ್‌ ಸಾರಿ’ (ನನ್ನನ್ನು ಕ್ಷಮಿಸಿ) ಎಂದು ಬರೆಯುವ ವಿಶಿಷ್ಟಶಿಕ್ಷೆ ನೀಡಿದ್ದಾರೆ.

ಕೊರೋನಾ ವೈರಸ್‌ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ ಉತ್ತರಾಖಂಡದಲ್ಲಿ ಮುಂಜಾನೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಾಕ್‌ಡೌನ್‌ ಅನ್ನು ಕೊಂಚ ಸಡಿಲ ಮಾಡಲಾಗಿದೆ. ಆದರೆ, ಈ ವೇಳೆಯಲ್ಲಿ ಜನರು ಮನಬಂದಂತೆ ಓಡಾಡುವಂತೆ ಇಲ್ಲ.

2 ಲಕ್ಷ ಅರ್ಚಕರ ಸಂಪಾದನೆಗೆ ಲಾಕ್‌ಡೌನ್ ಕುತ್ತು!

ಈ ವಿಷಯ ತಿಳಿದಿದ್ದರೂ ಆಸ್ಪ್ರೇಲಿಯಾ, ಅಮೆರಿಕ, ಮೆಕ್ಸಿಕೋ ಮತ್ತು ಇಸ್ರೇಲ್‌ನ ಕೆಲವು ಪ್ರವಾಸಿಗರು ಗಂಗಾ ನದಿಯ ದಂಡೆಯ ಮೇಲೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರಿಗೆ ಪೆನ್‌, ಕಾಗದ ಕೊಟ್ಟು ‘ಐ ಆ್ಯಮ್‌ ಸಾರಿ’ ಎಂದು 500 ಬಾರಿ ಬರೆಯುವಂತೆ ಸೂಚಿಸಿದ್ದಾರೆ. ಅಲ್ಲದೇ ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.