Asianet Suvarna News Asianet Suvarna News

2 ಲಕ್ಷ ಅರ್ಚಕರ ಸಂಪಾದನೆಗೆ ಲಾಕ್‌ಡೌನ್ ಕುತ್ತು!

ಬಂಗಾಳದ 2 ಲಕ್ಷ ಅರ್ಚಕರ ಸಂಪಾದನೆಗೆ ಲಾಕ್ಡೌನ್‌ ಕುತ್ತು| ಧಾರ್ಮಿಕ ಸಮಾರಂಭ, ಪೂಜೆ, ದೇಗುಲಗಳು ಬಂದ್‌|  ದಕ್ಷಿಣೆಯಿಂದಲೇ ಜೀವನ ಸಾಗಿಸುತ್ತಿದ್ದವರ ಪರದಾಟ

Coronavirus pandemic hits Hindu priests hard in Bengal over 2 lakh lose jobs
Author
Bangalore, First Published Apr 14, 2020, 2:57 PM IST

ಕೋಲ್ಕತಾ(ಏ.14): ಕೊರೋನಾ ವೈರಸ್‌ ಕಾರಣ ಹೇರಲಾಗಿರುವ ಲಾಕ್‌ಡೌನ್‌ ಸಮಾಜದ ಕೆಲವು ವರ್ಗಗಳ ಎರಡು ತುತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಸೃಷ್ಟಿಮಾಡಿದೆ. ಇದಕ್ಕೆ ಪುರೋಹಿತರೂ ಹೊರತಲ್ಲ.

ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಸಮಾರಂಭಗಳು, ಪೂಜೆ ಪುನಸ್ಕಾರ ಕಾರ್ಯಕ್ರಮಗಳನ್ನೇ ನಂಬಿಕೊಂಡು ಅದರಿಂದ ಬರುತ್ತಿದ್ದ ದಕ್ಷಿಣೆಯ ಮೇಲೆಯೇ ಜೀವನ ನಡೆಸುತ್ತಿದ್ದ ಸುಮಾರು 2 ಲಕ್ಷ ಪುರೋಹಿತರಿಗೆ ಈಗ ಲಾಕ್‌ಡೌನ್‌ ಕಾರಣ ಕೆಲಸ ಇಲ್ಲದಂತಾಗಿದೆ.

ಪ್ರಧಾನಿಗಳಿಗೆ ನಮ್ಮ ಬೆಂಬಲ ಎಂದ ದೇವೇಗೌಡ್ರು, ಆದ್ರೂ ಮೋದಿ ಮೇಲೆ ಮುನಿಸಿಕೊಂಡ್ರು..!

‘ಜನರು ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ದೇವಸ್ಥಾನಗಳಲ್ಲಿ ಕೇವಲ ಪುರೋಹಿತರು ಪೂಜೆ ಮಾಡಿ ಹೋಗುತ್ತಿದ್ದು, ಭಕ್ತರಿಗೆ ಪ್ರವೇಶ ಇಲ್ಲವಾಗಿದೆ ಅಥವಾ ಕೊರೋನಾಗೆ ಹೆದರಿ ಭಕ್ತರು ದೇಗುಲಗಳಿಗೆ ಬರುತ್ತಿಲ್ಲ. ಹೀಗಾಗಿ ಧಾರ್ಮಿಕ ಆಚರಣೆಗಳನ್ನೇ ಆಧರಿಸಿ ಜೀವನ ನಡೆಸುತ್ತಿದ್ದ ಪುರೋಹಿತರಿಗೆ ಈಗ ಆದಾಯ ನಿಂತು ಹೋಗಿದೆ. ಹೀಗಾಗಿ 2 ಲಕ್ಷ ಅರ್ಚಕರ ಬದುಕೇ ದುಸ್ತರವಾಗಿದೆ’ ಎಂದು ಪ.ಬಂಗಾಳ ಸನಾತನ ಬ್ರಾಹ್ಮಣ ಟ್ರಸ್ಟ್‌ ಆತಂಕ ವ್ಯಕ್ತಪಡಿಸಿದೆ.

ಹೀಗಾಗಿ ಈ ಸಂದರ್ಭದಲ್ಲಿ ಸಹಾಯ ಮಾಡಬೇಕು ಎಂದು ಕೋರಿ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆಯಲು ಟ್ರಸ್ಟ್‌ ಹೇಳಿದೆ.

Follow Us:
Download App:
  • android
  • ios