ಮುಂದಿನ ಚುನಾವಣೆಗೆ ಮಹತ್ವದ ಮೈತ್ರಿಯೊಂದಿಗೆ ಮುಂದುವರಿಯುವ ಬಗ್ಗೆ ಮುಖಂಡರೋರ್ವರು ಮಾತನಾಡಿದ್ದಾರೆ...

ಎಟಾ (ನ.15): 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಸುಳಿವು ನೀಡಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್‌, ಮುಂದಿನ ಚುನಾವಣೆಯಲ್ಲಿ ಶಿವಪಾಲ್‌ ಯಾದವ್‌ ಅವರ ಜಸ್ವಂತ್‌ನಗರ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. 

ಶ್ರೀರಾಮನ ಆರತಿ ಮಾಡಿದ ಸಿಎಂ ಯೋಗಿ: 5.51 ಲಕ್ಷ ದೀಪದಿಂದ ಬೆಳಗಲಿದೆ ಅಯೋಧ್ಯೆ! ...

ಹಾಗೆಯೇ ಸಮಾಜವಾದಿ ಪಕ್ಷವು ರಾಜ್ಯದಲ್ಲಿ ಸರ್ಕಾರ ರಚಿಸಿದರೆ ಶಿವಪಾಲ್ ಅವರ ಪಕ್ಷದವರಿಗೆ ಕ್ಯಾಬಿನೆಟ್‌ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಇದೇ ವೇಳೆ ಮಾಯಾವತಿ ಅವರ ಬಿಎಸ್‌ಪಿಯೊಂದಿಗೆ ಯಾವುದೇ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಆಗಬಹುದೇನೋ ಆದರೆ ದೊಡ್ಡ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.