ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೇ ಕೇವಲ ಅಂಡರ್‌ವೇರ್ ಧರಿಸಿ ಕುಳಿತ ಪೊಲೀಸ್ ಪೇದೆಯೊಬ್ಬನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಲಾಗಿದೆ

ಉನ್ನಾವೊ: ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೇ ಕೇವಲ ಅಂಡರ್‌ವೇರ್ ಧರಿಸಿ ಕುಳಿತ ಪೊಲೀಸ್ ಪೇದೆಯೊಬ್ಬನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದ ಉನ್ನಾವೊ ಜಿಲ್ಲೆಯ ಅಚಲ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸಪ್ಪನ ನಡತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಭಜನೆ ಮಾಡ್ತಿರುವ ಮಹಿಳೆಯರ ಮುಂದೆ ಈತ ಬರೀ ಚಡ್ಡಿ ಧರಿಸಿ ಚೇರೊಂದರ ಮೇಲೆ ಕುಳಿತಿರುವ ವೀಡಿಯೋ ವೈರಲ್ ಆಗಿದೆ. 

ವೈರಲ್ ಆಗಿರುವ ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆಯರೆಲ್ಲಾ ದೇವಸ್ಥಾನದ ಮುಂಭಾಗವೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದು ಬಹುತೇಕ ಎಲ್ಲ ಮಹಿಳೆಯರು ತಲೆಗೆ ಸೆರಗನ್ನು ಧರಿಸಿದ್ದಾರೆ. ಆದರೆ ಅವರ ಸರಿ ವಿರುದ್ಧ ದಿಕ್ಕಿನಲ್ಲಿ ಈತ ಬರಿ ಅಂಡರ್‌ವೇರ್‌ ಧರಿಸಿ ಚೇರೊಂದರ ಮೇಲೆ ಕುಳಿತು ಟೇಬಲ್ ಮೇಲಿದ್ದ ಏನನ್ನೋ ತಿನ್ನುತ್ತಿರುವುದನ್ನು ಕಾಣಬಹುದಾಗಿದೆ. ಹೀಗೆ ಬರೀ ಚಡ್ಡಿಯಲ್ಲಿ ಮಹಿಳೆಯ ಮುಂದೆ ಕುಳಿತ ವ್ಯಕ್ತಿಯನ್ನು ಸ್ಥಳೀಯ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಂದು ಗುರುತಿಸಲಾಗಿದೆ.

ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಪೊಲೀಸರ ಹಾವಳಿ; ರಾತ್ರಿ ಗಸ್ತಿನಲ್ಲಿ ಸಾರ್ವಜನಿಕರಿಂದ ಸುಲಿಗೆ

ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸಪ್ಪನ ನಡತೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಉನ್ನವೋ ಪೊಲೀಸರನ್ನು ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಘಾಪುರದ ಸ್ಟೇಷನ್ ಅಧಿಕಾರಿಗೆ ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ.

ಮಕ್ಕಳಿಗೆ ವಾಹನ ಕೊಟ್ಟ ಪೋಷಕರ ವಿರುದ್ಧ ಜಾಮೀನು ರಹಿತ ಕೇಸ್‌: ಬಿ.ದಯಾನಂದ್

Scroll to load tweet…

ಆದರೆ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅರೆಬೆತ್ತಲೆ ಕುಳಿತ ಪೊಲೀಸ್ ಅಧಿಕಾರಿ, ತಾನು ಉಟ್ಟಿದ ವೇಸ್ಟಿ ಹಾಗೂ ಟವೆಲ್ ತೊಳೆದು ಹಾಕಿದ ನಂತರ ಕರೆಂಟ್ ಹೋಯ್ತು, ನಾನು ಸ್ನಾನ ಮಾಡುವ ಪ್ರದೇಶವೂ ಕೂಡ ತೆರೆದ ಪ್ರದೇಶದಲ್ಲಿ ಇದೆ ಹೀಗಾಗಿ 2 ನಿಮಿಷಗಳ ಕಾಲ ನಾನು ಅಲ್ಲಿ ಹಾಗೆ ಕುಳಿತಿದೆ ಈ ವೇಳೆ ವೀಡಿಯೋ ಮಾಡಲಾಗಿದೆ ಎಂದು ಹೇಳಿದ್ದಾರೆ. 

Scroll to load tweet…