ಫೇಸ್‌ಬುಕ್‌ನಲ್ಲಿ ಶಿವ್ ವರ್ಮಾ ಎಂದು ಪರಿಚಯಿಸಿಕೊಂಡ ಕಾಸಿಬ್ ಪಠಾಣ್, ಹಿಂದೂ ಯುವತಿಯನ್ನು ಪ್ರೀತಿಸಿ ಮತಾಂತರಕ್ಕೆ ಒತ್ತಾಯಿಸಿದ್ದಾನೆ. ಬಲವಂತದ ಗರ್ಭಪಾತ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳೂ ಕೇಳಿಬಂದಿವೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಶಿವ್ ವರ್ಮಾ ಎಂದು ಪರಿಚಯಿಸಿಕೊಂಡ ಯುವಕ, ಹಿಂದೂ ಯುವತಿಯನ್ನು ಪ್ರೀತಿಸಿದ್ದಾನೆ. ದೈಹಿಕ ಸಂಪರ್ಕ ಬೆಳೆಸಿದ ಬಳಿಕ ತನ್ನ ನಿಜವಾದ ಹೆಸರು ಕಾಸಿಬ್ ಪಠಾಣ್ ಎಂದು ಹೇಳಿದ್ದಾನೆ. ಈಗ ಮತಾಂತರ ಆಗುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಆರೋಪಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಆರೋಪ ಎದುರಿಸುತ್ತಿದ್ದಾನೆ. ಇದೇ ರೀತಿ ಸುಮಾರು 12ಕ್ಕೂ ಯುವತಿಯರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಈ ಘಟನೆ ನಡೆದಿದೆ.

ಸಂತ್ರಸ್ತೆ ಹೇಳಿಕೆ ಪ್ರಕಾರ, ಎರಡು ವರ್ಷಗಳ ಹಿಂದೆ ಫೇಸ್‌ಬುಕ್ ಪರಿಚಯವಾದ ಶಿವ್‌ ವರ್ಮಾ ಎಂಬಾತನನ್ನು ಭೇಟಿಯಾಗಿದ್ದೆ. ಆರೋಪಿ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡಿದ್ದನು. ಭೇಟಿಯ ಸಂದರ್ಭದಲ್ಲಿ ತಿಲಕ, ಕೈಯಲ್ಲಿ ಕಪ್ಪು ದಾರ ಕಟ್ಟಿಕೊಂಡಿದ್ದನು. ಹಿಂದೂ ದೇವರು ಮತ್ತು ದೇವತೆಗಳ ಮೇಲೆ ಪ್ರಮಾಣ ಮಾಡುವ ಮೂಲಕ ವಿಶ್ವಾಸ ಗಳಿಸಿದ್ದನು ಎಂದು ಹೇಳಿದ್ದಾಳೆ.

ಮದುವೆಯಾಗೋದಾಗಿ ನಂಬಿಸಿದ್ದ ಯುವಕ ದೈಹಿಕ ಸಂಪರ್ಕ ಹೊಂದಿದ್ದನು. ಈ ವೇಳೆ ಸೀಕ್ರೆಟ್ ಕ್ಯಾಮೆರಾ ಬಳಸಿ ಯುವತಿ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದ. ಆನಂತರ ಆತ ಹಿಂದೂ ಅಲ್ಲ, ಮುಸ್ಲಿಂ ವ್ಯಕ್ತಿ, ಆತನ ಹೆಸರು ಕಾಸಿಬ್ ಪಠಾಣ್ ಎಂದು ಯುವತಿಗೆ ಗೊತ್ತಾಗಿದೆ.

ಬಾಡಿಗೆ ಕೋಣೆಯಲ್ಲಿ ಅ*ತ್ಯಾಚಾರ!

ಶಹಜಹಾನ್‌ಪುರದ ಸಿಂಜೈ ಪ್ರದೇಶದಲ್ಲಿ ಕಾಸಿಬ್ ಪಠಾಣ್ ಕೋಣೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದನು. ತನ್ನನ್ನು ಶಿವ್ ವರ್ಮಾ ಎಂದು ಪರಿಚಯಿಸಿಕೊಂಡು ಇದೇ ಕೋಣೆಯಲ್ಲಿ ದೈಹಿಕ ಸಂಪರ್ಕ ಹೊಂದಲು ಒತ್ತಾಯಿಸುತ್ತಿದ್ದನು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಮೊಬೈಲ್ ಪರಿಶೀಲನೆ ನಡೆಸಿದಾಗ ಈತನ ಸೋದರ ಕೈಫ್ ಮತ್ತು ಇನ್ನೋರ್ವ ಅಖಿಲ್ (ಫಿರೋಜ್ ಅಲಿಯಾಸ್ ಗುಡ್ಡು ಕಾ ಬೇಟಾ) ಸೇರಿದಂತೆ ಮೂವರು ಹಿಂದೂ ಹುಡುಗಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಮತಾಂತರಗೊಳಿಸಲು ಸಂಚು ರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಯ ಫೋನ್‌ನಲ್ಲಿ ನೂರಾರು ಹುಡುಗಿಯರ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳು ಸಹ ಕಂಡುಬಂದಿವೆ.

ಗರ್ಭಪಾತ, ಮತಾಂತರಕ್ಕೆ ಒತ್ತಡ

ಗರ್ಭಿಣಿಯಾದಾಗ ಕಾಸಿಬ್, ಅವನ ಸೋದರ, ತಂದೆ-ತಾಯಿ, ಸೋದರಿ ಎಲ್ಲರೂ ನನಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದರು ಎಂದು ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಗರ್ಭಪಾತಕ್ಕೆ ವಿರೋಧ ವ್ಯಕ್ತಪಡಿಸಿದಾಗ ಹೊಟ್ಟೆಗೆ ಒದ್ದರು. ಇದರಿಂದ ಮೂರು ತಿಂಗಳಿಗೆ ಗರ್ಭಪಾತವಾಯ್ತು. ನಂತರ ಇಸ್ಲಾಂಗೆ ಮತಾಂತರಗೊಂಡು ಕಾಸಿಬ್ ಜೊತೆ ಸಂಸಾರ ನಡೆಸುವಂತೆ ನನ್ನ ಮೇಲೆ ಒತ್ತಡ ತಂದರು. ಮತಾಂತರಕ್ಕೆ ಒಪ್ಪದಿದ್ದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಹಿಂದೂ ಸಂಘಟನೆಗಳ ಆಕ್ರೋಶ

ಶಿವ್ ವರ್ಮಾ ಅಲಿಯಾಸ್ ಕಾಸಿಬ್ ಪಠಾಣ್ ಮೋಸದ ಪ್ರೀತಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚೌಕ್ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ ಹಿಂದೂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಲವ್ ಜಿಹಾದ್ ಸಂಘಟಿತ ಪಿತೂರಿಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಕಂಡು ಬರುತ್ತಿದೆ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಕಾಸಿಬ್ ಪಠಾಣ್ ಪ್ರಕರಣದ ಕುರಿತು ಪೊಲೀಸರು ಅಥವಾ ಅಡಳಿತಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರ ಈ ಮೌನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಚಂಗೂರ್ ಬಾಬಾ ಗ್ಯಾಂಗ್‌ಗೆ ಲಿಂಕ್ ಮಾಡಲಾಗುತ್ತಿದೆ. ಆದ್ರೆ ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.