ಬರೇಲಿ[ಜ.23]: ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುವುದು ಹೊಸದೇನೂ ಅಲ್ಲ. ಆದರೆ, ಉತ್ತರ ಪ್ರದೇಶದ ಗ್ರಾಮವೊಂದರ ಇಬ್ಬರು ಅಧಿಕಾರಿಗಳು 500 ರು. ಲಂಚ ನೀಡದೇ ಇದ್ದಿದ್ದಕ್ಕೆ ಮಕ್ಕಳ ವಯಸ್ಸನ್ನು 100 ವರ್ಷ ಹೆಚ್ಚಿಸಿ ತಪ್ಪು ಜನನ ಪ್ರಮಾಣ ಪತ್ರ ನೀಡಿದ ಘಟನೆಯೊಂದು ನಡೆದಿದೆ. ಈ ಸಂಬಂಧ ಇವರಿಬ್ಬರ ವಿರದ್ಧ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ACB ಮಿಂಚಿನ ದಾಳಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲಂಚ ಬಾಕ ಅಧಿಕಾರಿ

ಕಠುವಾ ಪೊಲಿಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೆಲಾ ಗ್ರಾಮದ ನಿವಾಸಿ ಪವನ್‌ ಕುಮಾರ್‌ ಎಂಬಾತ ತನ್ನ ಸಂಬಂಧಿಕರ ಮಕ್ಕಳಾದ ಶುಭ್‌ (4) ಹಾಗೂ ಸಾಕೇತ್‌ (2)ಗೆ ಜನನ ಪ್ರಮಾಣಪತ್ರಕ್ಕಾಗಿ ಎರಡು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾಮ ಅಭಿವೃದ್ಧಿ ಅಧಿಕಾರಿ ಸುಶೀಲ್‌ ಚಾಂದ್‌ ಅಗ್ನಿಹೋತ್ರಿ ಹಾಗೂ ಗ್ರಾಮದ ಮುಖ್ಯಸ್ಥ ಪ್ರವೀಣ್‌ ಮಿಶ್ರಾ ಪ್ರತಿ ಪ್ರಮಾಣ ಪತ್ರಕ್ಕೆ 500 ರು. ಲಂಚ ಕೇಳಿದ್ದರು.

ಆದರೆ, ಲಂಚ ನೀಡಲು ನಿರಾಕರಿಸಿದ್ದಕ್ಕೆ ಜನನ ಪ್ರಮಾಣಪತ್ರದಲ್ಲಿ ಶುಭ್‌ ವಯಸ್ಸು 104 ಹಾಗೂ ಸಾಕೇತ್‌ನ ವಯಸ್ಸು 102 ಎಂದು ಅಧಿಕಾರಿಗಳು ನಮೂದಿಸಿದ್ದಾರೆ. ಬಳಿಕ ಪವನ್‌ ಈ ಇಬ್ಬರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ಭಾರೀ ಅಕ್ರಮ : ರದ್ದಾಯ್ತು ಮಹಿಳಾ ಮುಖಂಡೆಯ ಸದಸ್ಯತ್ವ