ನವದೆಹಲಿ (ಜು. 24): ಉತ್ತರ ಪ್ರದೇಶದಲ್ಲಿ ತಥಾಕಥಿತ ಮೇಲ್ಜಾತಿಗಳಾದ ಬ್ರಾಹ್ಮಣರು ಮತ್ತು ಠಾಕೂರರ ನಡುವೆ ರಾಜಕೀಯ ಕಾದಾಟ ಹೊಸದೇನಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪೂರ್ವಾಂಚಲದ ಹಿಂದೂ ನಾಯಕ ಅನ್ನಿಸಿಕೊಂಡರೂ ಕೂಡ ಅಲ್ಲಿನ ಸ್ಥಳೀಯ ಬ್ರಾಹ್ಮಣ ನಾಯಕರ ಜೊತೆ ಸಂಬಂಧ ಅಷ್ಟಕಷ್ಟೆ.

ಪೂರ್ವಾಂಚಲದ ಬಹುತೇಕ ಬ್ರಾಹ್ಮಣ ಶಾಸಕರಾದ ಹರಶಂಕರ್‌ ತಿವಾರಿ, ಅಮರ್‌ ಮಣಿ ತ್ರಿಪಾಠಿ, ಶುಕ್ಲಾಗಳು ಸ್ಥಳೀಯ ದಿಗ್ಗಜರು. ಈಗ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಎನ್‌ಕೌಂಟರ್‌ ನಂತರ ಉತ್ತರ ಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಮತ್ತು ಬಿಎಸ್‌ಪಿ ನಾಯಕರು ಬಿಜೆಪಿ ತೆಕ್ಕೆಯಲ್ಲಿರುವ ಬ್ರಾಹ್ಮಣರನ್ನು ಸೆಳೆಯಲು ಪ್ರಯತ್ನ ಮಾಡುತ್ತಿವೆ. ಕುತೂಹಲಕರ ಸಂಗತಿಯೆಂದರೆ, ಕಾಂಗ್ರೆಸ್‌ ಪಕ್ಷದ ಉತ್ತರ ಪ್ರದೇಶದ ರಾಜಕೀಯ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಈ ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದಾರಂತೆ.

ಆ ಒಂದು ಅಂಶ ಬಯಲಾಗುವವರೆಗೆ ಚೀನಾ ಬೆದರಿತು ಎನ್ನುವುದು ತಪ್ಪಾದೀತು!

ಅವರ ಜೊತೆಗೆ ಕಾಂಗ್ರೆಸ್‌ನ ಇನ್ನೊಬ್ಬ ನಾಯಕ ಜಿತಿನ್‌ ಪ್ರಸಾದ್‌ ಕೂಡ ಕೈಜೋಡಿಸಿದ್ದಾರೆ. ಇವರಿಬ್ಬರೂ ಸೇರಿ ಬ್ರಾಹ್ಮಣ ಭಾಯಿಚಾರಾ ಸಮಾವೇಶಗಳನ್ನು ಕೂಡ ನಡೆಸಲಿದ್ದಾರಂತೆ. ಇನ್ನು ಮಾಯಾವತಿ ಅಧಿಕಾರಕ್ಕೆ ಬರಬೇಕಾದರೆ ದಲಿತರ ಜೊತೆಗೆ ಬ್ರಾಹ್ಮಣರು ಬೇಕು. ಹಿಂದೆ ವಿ.ಪಿ.ಸಿಂಗ್‌ ಮತ್ತು ರಾಜನಾಥ ಸಿಂಗ್‌ ಮುಖ್ಯಮಂತ್ರಿಯಾಗಿ ಠಾಕೂರ ಮತ್ತು ಬ್ರಾಹ್ಮಣರ ನಡುವಿನ ಕಾದಾಟದ ರಾಜಕೀಯ ನಷ್ಟವನ್ನು ಸಾಕಷ್ಟುಅನುಭವಿಸಿದ್ದರು. ನಂತರ ಬ್ರಾಹ್ಮಣರ ಬೆಂಬಲ ಗಿಟ್ಟಿಸಿ ಅಧಿಕಾರಕ್ಕೆ ಬಂದಿದ್ದರು. ಈಗ ಪ್ರಿಯಾಂಕಾ ಆ ಸೂತ್ರ ಪಾಲಿಸುತ್ತಿದ್ದಾರಾ?

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಮಡ ರಾಜಕಾರಣ