Asianet Suvarna News Asianet Suvarna News

ಟೊಮೆಟೋ ಅಂಗಡಿಗೆ ಬೌನ್ಸರ್‌ ನೇಮಿಸಿದ್ದ ಅಂಗಡಿಯವನ ಬಂಧನ

ತರಕಾರಿ ಅಂಗಡಿಗೆ ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಬೌನ್ಸರ್‌ಗಳನ್ನು ನೇಮಿಸಿದ್ದ ಅಂಗಡಿ ನೌಕರ ನಾರಾಯಣವ್‌ ಯಾದವ್‌ ಹಾಗೂ ಆತನ ಮಗ ವಿಕಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Uttar Pradesh polices Arrested shopkeeper who appointed bouncer for tomato shop akb
Author
First Published Jul 12, 2023, 6:39 AM IST

ವಾರಾಣಸಿ: ತರಕಾರಿ ಅಂಗಡಿಗೆ ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಬೌನ್ಸರ್‌ಗಳನ್ನು ನೇಮಿಸಿದ್ದ ಅಂಗಡಿ ನೌಕರ ನಾರಾಯಣವ್‌ ಯಾದವ್‌ ಹಾಗೂ ಆತನ ಮಗ ವಿಕಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೆಟ್ಟಹೆಸರು ತರಲೆಂದೇ ಟೊಮೆಟೋ ಅಂಗಡಿಯ ಮಾಲೀಕ ಅಜಯ್‌ ಫೌಜಿ ಎಂಬಾತ ಈ ಇಬ್ಬರು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾಗಿ ಜಾಲತಾಣಗಲ್ಲಿ ಮಾಹಿತಿ ನೀಡಿದ್ದ. 

ಈ ವಿಷಯ ಭಾರೀ ವೈರಲ್‌ ಆಗಿತ್ತು. ಇದನ್ನು ಸ್ವತಃ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಬಳಿಕ ವಿಚಾರಣೆ ವೇಳೆ, ಫೌಜಿ, ಸಮಾಜವಾದಿ ಪಕ್ಷದ ಕಾರ್ಯಕರ್ತ. ಸರ್ಕಾರಕ್ಕೆ ಕೆಟ್ಟಹೆಸರು ತರಲೆಂದೇ ಆತ ಬೌನ್ಸರ್‌ ನೇಮಕದ ಕುರಿತ ಯೋಜನೆ ರೂಪಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾರಾಯಣ್‌ ಮತ್ತು ವಿಕಾಸ್‌ನನ್ನು ಐಪಿಸಿ ಸೆಕ್ಷನ್‌ 153 ಗಲಭೆಗೆ ಪ್ರಚೋದನೆ, 291 (ತಪ್ಪು ಪುನರಾವರ್ತನೆ) ಹಾಗೂ 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಪ್ರಕರಣದ ಬಳಿಕ ಫೌಜಿ ನಾಪತ್ತೆಯಾಗಿದ್ದಾನೆ.

ಟೊಮೆಟೋ ನಂತರ 100 ರೂ. ದಾಟಿದ ಬೀನ್ಸ್‌, ಕ್ಯಾರೆಟ್‌: ಬೆಲೆ ಕೇಳಿ ಹೌಹಾರಿದ ಗ್ರಾಹಕ...!

ಗಗನಕ್ಕೇರಿದ ಬೆಲೆ, ಟೊಮೆಟೊ ಕಾಯಲು ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!

Follow Us:
Download App:
  • android
  • ios