ಕಂಠಪೂರ್ತಿ ಕುಡಿದ ಯುವಕನೋರ್ವ ಪಟ್ಟಣದಲ್ಲಿ ಕಿರಿಕ್ ಶುರುಮಾಡಿದ್ದ. ಸಾರ್ವಜನಿಕರಿಗೆ ತೊಂದರೆ ನೀಡಲು ಆರಂಭಿಸಿದ್ದ, ಅಂಗಡಿಗೆ ನುಗ್ಗಿ ದಾಂಧಲೆಗೆ ಮುಂದಾಗಿದ್ದಾನೆ. ಈ ಕುಡುಕನ ಹಿಡಿದು ಪೊಲೀಸ್ ಥಳಿಸಿದ್ದಾರೆ. ಶೂನಿಂದ ಹೊಡೆದ ಪೊಲೀಸ್ ಇದೀಗ ಅಮಾನತ್ತಾಗಿದ್ದಾನೆ.

ಲಖನೌ(ಜು.23) ಕುಡಿದ ವ್ಯಕ್ತಿಯೊಬ್ಬ ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಶುರುಮಾಡಿದ್ದಾನೆ. ಅಂಗಡಿಗೆ ನುಗ್ಗಿ ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪಾನಿಯಗಳನ್ನು ತೆಗೆದು ಕುಡಿದಿದ್ದಾರೆ. ಕೆಲ ವಸ್ತುಗಳನ್ನು ಬೀಸಾಡಿದ್ದಾನೆ. ಇತ್ತ ಸಾರ್ವಜನಿಕರಿಗೂ ಕಿರಿಕುಳ ನೀಡಲು ಆರಂಭಿಸಿದ್ದಾನೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಕುಡುಕನಿಗೆ ತನ್ನ ಶೂ ಕಳಚಿ ಥಳಿಸಿದ್ದಾನೆ. 4 ನಿಮಿಷದಲ್ಲಿ 38 ಬಾರಿ ಶೂ ಮೂಲಕ ಥಳಿಸಿದ್ದಾನೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶದ ಈ ಪೊಲೀಸ್‌ಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಯುಪಿ ರಾಜಧಾನಿ ಲಖನೌದಿಂದ 100 ಕಿಲೋಮೀಟರ್ ದೂರದಲ್ಲಿರುವ ಹರ್ದೋಯಿಯಲ್ಲಿ ಈ ಘಟನೆ ನಡೆದಿದೆ. ಹರ್ದೋಯಿಯಲ್ಲಿ ಕಂಠಪೂರ್ತಿ ಕುಡಿದ ವ್ಯಕ್ತಿ ಕಿರಿಕ್ ಆರಂಭಿಸಿದ್ದಾನೆ. ಸಾರ್ವಜನಿರೆಗೆ ತೊಂದರೆ ಮಾಡಿದ್ದಾನೆ. ಅಂಗಡಿಗಳ ಮಾಲೀಕರು ಈತನ ಗಲಾಟೆಗೆ ಆಕ್ರೋಶಗೊಂಡಿದ್ದಾರೆ. ರಸ್ತೆಯಲ್ಲಿ ಹೋಗುವವರಿಗೂ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈತನ ಕಿರಿಕ್ ಅತಿಯಾಗಿತ್ತು. ಇದೇ ವೇಳೆ ಪೊಲೀಸ್ ದಿನೇಶ್ ಮಾರುಕಟ್ಟೆಗೆ ಆಗಮಿಸಿದ್ದಾರೆ. 

ಪುತ್ತೂರು: ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ, ಇಬ್ಬರು ಅಮಾನತು

ದಿನೇಶ್ ಸಮವಸ್ತ್ರ ಬಿಟ್ಟು ಸಾಮಾನ್ಯ ಉಡುಗೆಯಲ್ಲಿ ತರಕಾರಿ ಖರೀದಿಸಲು ಮಾರುಕಟ್ಟೆಗೆ ಆಗಮಿಸಿದ್ದರು. ಪೊಲೀಸ್ ಪೇದೆ ದಿನೇಶ್ ಗಮನಿಸಿದ ಸ್ಥಳೀಯರು ಕುಡುಕನ ಮಾಹಿತಿ ನೀಡಿದ್ದಾರೆ. ಕುಡುಕನಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕುಡುಕನಿಗೆ ಮನೆ ಸೇರಿಕೊಳ್ಳಲು ಸೂಚನೆ ನೀಡಿದ್ದಾರೆ. ಇದಕ್ಕೆ ತದ್ವಿರುದ್ದವಾಗಿ ಮಾತನಾಡಿದ್ದಾನೆ. 

ಪೊಲೀಸ್ ಪೇದೆ ದಿನೇಶ್ ತನ್ನ ಶೂ ಕಳಚಿ ಅದರಲ್ಲಿ ಥಳಿಸಿದ್ದಾರೆ. 4 ನಿಮಿಷದಲ್ಲಿ 38ಕ್ಕೂ ಹೆಚ್ಚು ಬಾರಿ ಶೂ ಮೂಲಕ ಥಳಿಸಿದ್ದಾರೆ. ಬಳಿಕ ಕುಡುಕನ ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ. ಭಯಗೊಂಡ ಕುಡುಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸ್ ಪೇದೆ ಬಳಿಕ ತರಕಾರಿ ಖರೀದಿಸಿ ಮನೆಗೆ ಮರಳಿ ಬೆನ್ನಲ್ಲೇ ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಮರುದಿನ ಕುಡುಕನಿಗೆ ಶೂ ಮೂಲಕ ಥಳಿಸಿದ ಪೊಲೀಸ್ ಪೇದೆಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಕರೆಯೊಂದು ಬಂದಿದೆ. ಈ ತಕ್ಷಣದಿಂದಲೇ ಅಮಾನತು ಮಾಡಲಾಗಿದೆ ಅನ್ನೋ ಸಂದೇಶವೂ ಬಂದಿದೆ. ಕುಡುಕ ವ್ಯಕ್ತಿಗೆ ಈ ರೀತಿ ಥಳಿಸಿದ್ದು ತಪ್ಪು, ಇಷ್ಟೇ ಅಲ್ಲ ಶೂ ಮೂಲಕ ಥಳಿಸಲಾಗಿದೆ. ಹೀಗಾಗಿ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ ಎಂದು ಅಡೀಶನಲ್ ಸೂಪರಿಡೆಂಟ್ ಆಫ್ ಪೊಲೀಸ್ ದುರ್ಗೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಗ್ಯಾಂಗ್‌ಸ್ಟಾರ್ ಅತೀಕ್, ಅಶ್ರಫ್‌ ಹತ್ಯೆ: ಕರ್ತವ್ಯಲೋಪದ ಕಾರಣಕ್ಕೆ 5 ಪೊಲೀಸರ ಅಮಾನತು

ಪಾಸ್‌ಪೋರ್ಚ್‌ ಪರಿಶೀಲನೆಗೆ 500 ರೂ ಕೇಳಿದ ಹೆಡ್‌ ಕಾನ್‌ಸ್ಟೇಬಲ್‌ ಸಸ್ಪಂಡ್‌
ಪರಪ್ಪನ ಅಗ್ರಹಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಶಿವಕುಮಾರ್‌ ಅಮಾನತುಗೊಂಡಿದ್ದು, ಎರಡು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರಿಂದ ಪಾಸ್‌ಪೋರ್ಚ್‌ ಪರಿಶೀಲನೆಗೆ .500 ಶಿವಕುಮಾರ್‌ ಪಡೆದಿದ್ದರು. ಈ ಬಗ್ಗೆ ಪೊಲೀಸರ ಕಾರ್ಯನಿರ್ವಹಣೆ ಕುರಿತು ಕ್ಯೂಆರ್‌ ಕೋಡ್‌ ಮೂಲಕ ಅಭಿಪ್ರಾಯ ಸಂಗ್ರಹಿಸಲು ರೂಪಿಸಿರುವ ‘ಲೋಕಸ್ಪಂದನ’ದಲ್ಲಿ ಕ್ಯೂರ್‌ ಕೋಡ್‌ ಬಳಸಿ ನಾಗರಿಕರು ದೂರು ಸಲ್ಲಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಬಾಬಾ ಅವರು, ಹಣ ಪಡೆದ ಹೆಡ್‌ ಕಾನ್‌ಸ್ಟೇಬಲ್‌ ಅವರನ್ನು ಶುಕ್ರವಾರ ಅಮಾನತುಗೊಳಿಸಿ ಆದೇಶಿಸಿದ್ದಾರೆ.