ಬೆಂಗಳೂರು, ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ಹೊಸ ಗೆಸ್ಟ್ ಹೌಸ್!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೇಶದಲ್ಲಿ ಸರ್ಕಾರದ ನಾಲ್ಕು ಹೊಸ ಗೆಸ್ಟ್‌ಹೌಸ್‌ಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲಿ ಎರಡು ಉತ್ತರ ಪ್ರದೇಶದಲ್ಲಿಯೇ ನಿರ್ಮಾಣವಾಗಲಿದ್ದರೆ, ಇನ್ನೆರಡು ದೆಹಲಿ ಹಾಗೂ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ.
ನವದೆಹಲಿ (ಆ.9): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಉತ್ತರ ಪ್ರದೇಶ ಸರ್ಕಾರದ ಗೆಸ್ಟ್ ಹೌಸ್ ನಿರ್ಮಾಣ ಘೋಷಣೆ ಮಾಡಿದ್ದಾರೆ. ಅದರಲ್ಲಿ ಎರಡು ಗೆಸ್ಟ್ ಹೌಸ್‌ಗಳು ಉತ್ತರ ಪ್ರದೇಶದ ಎರಡು ಪ್ರಮುಖ ತೀರ್ಥಕ್ಷೇತ್ರಗಳಾದ ಅಯೋಧ್ಯೆ ಹಾಗೂ ಪ್ರಯಾಗ್‌ರಾಜ್‌ನಲ್ಲಿ ನಿರ್ಮಾಣವಾಗಲಿದ್ದರೆ, ಇನ್ನೆರಡು ಗೆಸ್ಟ್‌ಹೌಸ್‌ಗಳು ದೆಹಲಿ ಹಾಗೂ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಎಸ್ಟೇಟ್ ಇಲಾಖೆಯ ಕೆಲಸವನ್ನು ಪರಿಶೀಲಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಯಾಗ್ರಾಜ್ ಮತ್ತು ಅಯೋಧ್ಯೆಯಲ್ಲಿ ಹೊಸ ಅತಿಥಿ ಗೃಹಗಳ ಅವಶ್ಯಕತೆ ಇದೆ ಎಂದು ಹೇಳಿದರು. ಆದಷ್ಟು ಬೇಗ ಬೆಂಗಳೂರು ಮತ್ತು ದೆಹಲಿಯಲ್ಲಿ ಅತಿಥಿ ಗೃಹಗಳಿಗೆ ಜಾಗ ಗುರುತಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದ್ದಾರೆ. ದೆಹಲಿಯಲ್ಲಿ ಯುಪಿ ಭವನ ಮತ್ತು ಯುಪಿ ಸದನ್ ಮತ್ತು ಗುಜರಾತ್‌ನ ದ್ವಾರಕಾದಲ್ಲಿ ಹೊಸದಾಗಿ ನಿರ್ಮಿಸಲಾದ ಅತಿಥಿ ಗೃಹ ‘ಇಂದ್ರಪ್ರಸ್ಥ’ ಇದ್ದರೂ, ಹೊಸ ಗೆಸ್ಟ್ ಹೌಸ್‌ಗಳ ಅಗತ್ಯ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.
ಗೌತಮ್ ಬುದ್ಧ ನಗರದ ಸೆಕ್ಟರ್ 148ರಲ್ಲಿ ಯೋಜನೆಗೆ ಸೂಕ್ತ ಭೂಮಿ ಲಭ್ಯವಿದೆ ಎಂದು ಸಿಎಂ ಹೇಳಿದರು. ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿ 'ಗೋಮತಿ' ವಿವಿಐಪಿ ಅತಿಥಿ ಗೃಹ ನಿರ್ಮಾಣವನ್ನು ತ್ವರಿತಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉತ್ತರಾಖಂಡ ಪ್ರವಾಸದ ವೇಳೆ ಯೋಗಿ ಆದಿತ್ಯನಾಥ್ ಸಹೋದರಿಯ ಭೇಟಿಯಾದ ಪ್ರಧಾನಿ ಮೋದಿ ತಂಗಿ!
ಶಾಸಕರ ನಿವಾಸ ಮತ್ತು ಅತಿಥಿ ಗೃಹಗಳ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು ಕಟ್ಟಡಗಳಲ್ಲಿನ ಸೌಲಭ್ಯಗಳು ಮತ್ತು ಭದ್ರತೆಗೆ ಒತ್ತು ನೀಡಿದರು.
'ತನ್ನ ಪರಿಶ್ರಮದಲ್ಲಿ ತೃಪ್ತಿ ಕಾಣುತ್ತಾನಲ್ಲ, ಆತ ನಿಜವಾದ ಯೋಗಿ..' ಕುಟುಂಬದ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್!