ಮಾತನಾಡುತ್ತಲೇ ಸ್ಫೋಟಗೊಂಡ ಮೊಬೈಲ್ ಫೋನ್: ಉತ್ತರ ಪ್ರದೇಶ ವ್ಯಕ್ತಿಗೆ ತೀವ್ರ ಗಾಯ
ಶನಿವಾರ ಬೆಳಗ್ಗೆ 11 ಗಂಟೆಗೆ ಸಂಬಂಧಿಕರೊಬ್ಬರ ಜತೆ ಕರೆಯಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಫೋನ್ ಏಕಾಏಕಿ ಸ್ಫೋಟಗೊಂಡು ಕೈ ಬೆರಳುಗಳಿಗೆ ಗಾಯವಾಗಿದೆ ಎಂದು ಹಿಮಾಂಶು ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದ (Uttar Pradesh) ಅಮ್ರೋಹಾದಲ್ಲಿ (Amroha) ವ್ಯಕ್ತಿಯೊಬ್ಬನ ಮೊಬೈಲ್ ಫೋನ್ (Mobile Phone) ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ತಾನು ಫೋನ್‌ನಲ್ಲಿ ಮಾತನಾಡುತ್ತಿರುವಾಗಲೇ (Talking) ಸ್ಫೋಟಗೊಂಡಿದೆ ಎಂದು ಗಾಯಗೊಂಡಿರುವ ವ್ಯಕ್ತಿ ಆರೋಪಿಸಿದ್ದಾನೆ. ಈ ವ್ಯಕ್ತಿಯ ಕೈ ಬೆರಳುಗಳಿಗೆ ಗಾಯಗಳಾಗಿವೆ (Fingers Injured) ಎಂದು ತಿಳಿದುಬಂದಿದೆ. ಹಿಮಾಂಶು (Himamshu) ಎಂದು ಗುರುತಿಸಲಾದ ವ್ಯಕ್ತಿ, ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡಿ ಆರೋಪಿಸಿದ್ದಾನೆ. ಬಿಲ್ ಜತೆಗೆ ಹಾಳಾಗಿರುವ ಮೊಬೈಲ್ ಫೋನ್ ವಿಡಿಯೋವನ್ನು ಆತ ಪೋಸ್ಟ್ ಮಾಡಿದ್ದು, ಜತೆಗೆ ಮೊಬೈಲ್ ಫೋನ್ ಕಂಪನಿಯ (Company) ವಿರುದ್ಧ ಕಾನೂನು ಕ್ರಮ (Legal Action) ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ..
ಆಗಸ್ಟ್ 31, 2022 ರಂದು, ಅಂದರೆ ಕೇವಲ 4 ತಿಂಗಳ ಹಿಂದೆ 16,000 ರೂ.ಗೆ ರಿಯಲ್‌ಮಿ 8 ಮೊಬೈಲ್ ಫೋನ್ ಖರೀದಿಸಿದ್ದೆ ಎಂದು ಉತ್ತರ ಪ್ರದೇಶದ ಅಮ್ರೋಹಾದಲ್ಲಿನ ಹಿಜಾಂಪುರ್ ಗ್ರಾಮದ ನಿವಾಸಿ ಹಿಮಾಂಶು ಹೇಳಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ಸಂಬಂಧಿಕರೊಬ್ಬರ ಜತೆ ಕರೆಯಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಫೋನ್ ಏಕಾಏಕಿ ಸ್ಫೋಟಗೊಂಡು ಕೈ ಬೆರಳುಗಳಿಗೆ ಗಾಯವಾಗಿದೆ ಎಂದು ಆತ ಹೇಳಿಕೊಂಡಿದ್ದಾರೆ.
ಇದನ್ನು ಓದಿ: Phone Battery: ಚಾರ್ಜ್ ಆಗುತ್ತಿದ್ದ ಅಮ್ಮನ ಫೋನ್ ಸ್ಫೋಟ: ಬಲಿಯಾದ 8 ತಿಂಗಳ ಕಂದಮ್ಮ
ನನ್ನ ಬೆರಳುಗಳ ಮೇಲೆ ಸಣ್ಣ ಸುಟ್ಟ ಗಾಯಗಳಾಗಿದ್ದು, ನಾನು ಅದೃಷ್ಟವಶಾತ್ ಬದುಕುಳಿದಿದ್ದೇನೆ ಎಂದು ಹಿಮಾಂಶು ಹೇಳಿದರು. ಜನವರಿ 6, 2023, ಅಂದರೆ ನಿನ್ನೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
“ನಾನು ಕರೆಯಲ್ಲಿ ಮಾತನಾಡುತ್ತಿರುವಾಗ ನನ್ನ ಮೊಬೈಲ್ ಫೋನ್‌ಗೆ ಬೆಂಕಿ ಹೊತ್ತಿಕೊಂಡಿತು. ಇದರಲ್ಲಿ ನನ್ನ ಬೆರಳಿಗೆ ಗಾಯವಾಗಿದೆ. ನಾನು 31 ಆಗಸ್ಟ್ 2022 ರಂದು ಅಮ್ರೋಹಾದಿಂದ ಮೊಬೈಲ್ ಖರೀದಿಸಿದೆ" ಎಂದು ಅಮ್ರೋಹಾ ಜಿಲ್ಲೆಯ ನೌಗಾವಾ ಸಾದತ್ ಪೊಲೀಸ್ ಠಾಣೆ ವ್ಯಾಪ್ತಿಯ ಹಿಜಾಂಪುರ ಗ್ರಾಮದ ನಿವಾಸಿ ಹಿಮಾಂಶು ಹೇಳಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಮೊಬೈಲ್ ಖರೀದಿಸಿದ ಬಗ್ಗೆ ಅವರು ಬಿಲ್ ಅನ್ನೂ ತೋರಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಜಿಂದಾಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟ, 3 ಸಾವು , 17 ಮಂದಿಗೆ ಗಾಯ
ಇನ್ನು, ಈ ರೀತಿ ಘಟನೆಗಳು ಇದೇ ಮೊದಲಲ್ಲ, ಈ ಹಿಂದೆಯೂ ದೇಶಾದ್ಯಂತ ಇಂತಹ ಹಲವು ಘಟನೆಗಳು ವರದಿಯಾಗಿವೆ. 2019 ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಆನ್‌ಲೈನ್‌ನಲ್ಲಿ ಶಾಲಾ ತರಗತಿಗಳಿಗೆ ಹಾಜರಾಗುತ್ತಿದ್ದಾಗ 15 ವರ್ಷದ ಬಾಲಕ ತನ್ನ ಮೊಬೈಲ್ ಫೋನ್ ಸ್ಫೋಟಗೊಂಡು ಗಾಯಗೊಂಡಿದ್ದಾನೆ. ಹಾಗೆ, 2019 ರ ಮಾರ್ಚ್‌ನಲ್ಲಿ 28 ವರ್ಷದ ಯುವಕ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ತನ್ನ ಹೊಚ್ಚಹೊಸ ಮೊಬೈಲ್ ಫೋನ್ ಸ್ಫೋಟಗೊಂಡ ನಂತರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಎಂದು ತಿಳಿದುಬಂದಿತ್ತು.
ಸಿಂಗಾಪುರದಲ್ಲೂ ಇಂತದ್ದೊಂದು ಘಟನೆ
ಇನ್ನೊಂದೆಡೆ, ಸಿಂಗಾಪುರದಲ್ಲೂ ಮೊಬೈಲ್ ಫೋನ್ ಬ್ಯಾಟರಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಅವರು ಜನರಿಗೆ ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಹಾಗೂ ಬ್ಯಾಟರಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಸುಮಾರು 70 ವರ್ಷದ ವ್ಯಕ್ತಿಗೆ ಈ ಘಟನೆ ನಡೆದಿದ್ದು, ಅದೃಷ್ವವಶಾತ್ ನನ್ನ ಫೋನ್ ಜೀನ್ಸ್ ಪ್ಯಾಂಟ್‌ನಲ್ಲಿರಲಿಲ್ಲ. ಬ್ಯಾಟರಿ ಸ್ಫೋಟಗೊಂಡ ತಕ್ಷಣ ನೆಲದ ಮೇಲೆ ಬೀಳಿಸಿದೆ ಎಂದೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Chikkamagaluru News: ಹೊಸಕೆರೆ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್ ಸ್ಫೋಟ, ಗೋಡೆ ಕುಸಿತ