ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ಹೊಗಳಿ ಕಾಂಗ್ರೆಸ್‌ ನಿಲುವನ್ನು ಟೀಕಿಸಿದ್ದ ಉತ್ತರ ಪ್ರದೇಶದ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂರನ್ನು ಪಕ್ಷ 6 ವರ್ಷದವರೆಗೆ ಉಚ್ಛಾಟಿಸಿದೆ.

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ಹೊಗಳಿ ಕಾಂಗ್ರೆಸ್‌ ನಿಲುವನ್ನು ಟೀಕಿಸಿದ್ದ ಉತ್ತರ ಪ್ರದೇಶದ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂರನ್ನು ಪಕ್ಷ 6 ವರ್ಷದವರೆಗೆ ಉಚ್ಛಾಟಿಸಿದೆ. ಪ್ರಮೋದ್‌ ಆಚಾರ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದರು. ಅಲ್ಲದೇ ಹಲವು ಕಾಂಗ್ರೆಸ್‌ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪಕ್ಷದಲ್ಲಿ ಅಶಿಸ್ತು ತೋರಿಸಿದ ಕಾರಣ ಅವರನ್ನು ಮುಂದಿನ 6 ವರ್ಷದವರೆಗೆ ವಜಾ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ. ಇವರು ಇತ್ತೀಚೆಗೆ ಉತ್ತರ ಪ್ರದೇಶದ ಕಲ್ಕಿ ದೇಗುಲ ಶಂಕುಸ್ಥಾಪನೆಗೆ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದರು.

ಅನಾಮಿಕ ವ್ಯಕ್ತಿಯಿಂದ ಅಮೆರಿಕದಲ್ಲಿ ಭಾರತೀಯ ಉದ್ಯಮಿ ವಿವೇಕ್‌ ಹತ್ಯೆ

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತೀಯರ ಮೇಲಿನ ದೌರ್ಜನ್ಯ ಮುಂದುವರೆದಿದ್ದು, ಭಾರತೀಯ ಮೂಲದ ಟೆಕ್ಕಿಯೊಬ್ಬರು ಅನಾಮಿಕ ವ್ಯಕ್ತಿಯ ದಾಳಿಗೆ ಬಲಿಯಾಗಿದ್ದಾರೆ.
ಡೈನಮೋ ಟೆಕ್ನಾಲಜೀಸ್‌ ಸಂಸ್ಥೆಯ ಸಹಸಂಸ್ಥಾಪಕ ವಿವೇಕ್‌ ತನೇಜಾ ಮೃತ ವ್ಯಕ್ತಿ. ವಿವೇಕ್‌ ಫೆ.2ರಂದು ರಾತ್ರಿ 2 ಗಂಟೆ ಸುಮಾರಿಗೆ ನಗರದ ಉಪಾಹಾರ ಗೃಹದ ಬಳಿ ವ್ಯಕ್ತಿಯೊಬ್ಬರ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಅದು ವಿಕೋಪಕ್ಕೆ ಹೋಗಿದೆ.

ಕಾಂಗ್ರೆಸ್ ಪಕ್ಷದ ಕಟ್ಟಾಳು ಕಮಲನಾಥ್ ಬಿಜೆಪಿಗೆ? ಪುತ್ರನಿಗೆ ಬಿಜೆಪಿ ಲೋಕಸಭಾ ಟಿಕೆಟ್ ಸಾಧ್ಯತೆ

ಈ ವೇಳೆ ಎದುರಿಗಿದ್ದ ವ್ಯಕ್ತಿ ವಿವೇಕ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾಗಿಯಾಗಿದ್ದಾನೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ವಿವೇಕ್‌ ಸಾವನ್ನಪ್ಪಿದ್ದಾರೆ. ಕಳೆದ ಜನವರಿ ಬಳಿಕ 5 ವಿದ್ಯಾರ್ಥಿಗಳು ಸೇರಿ 6 ಭಾರತೀಯರ ಹತ್ಯೆ ಅಮೆರಿಕದಲ್ಲಿ ನಡೆದಿದೆ.

ಲಡಾಖ್‌ನ ಕಾರ್ಗಿಲ್‌ನಲ್ಲಿ -22 ಡಿ.ಸೆ. ಉಷ್ಣಾಂಶ

ಶ್ರೀನಗರ: ಜಮ್ಮು ಕಾಶ್ಮೀರ ಮತ್ತು ಲಡಾಕ್‌ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೈಕೊರೆಯುವ ಚಳಿ ಮುಂದುವರೆದಿದ್ದು, ಲಡಾಖ್‌ನ ಕಾರ್ಗಿಲ್‌ನಲ್ಲಿ ಅತ್ಯಂತ ಕನಿಷ್ಠ ಮೈನಸ್‌ 22 ಡಿಗ್ರಿ ಸೆಲ್ಷಿಯಸ್‌ ತಾಪಮಾನ ದಾಖಲಾಗಿದೆ. ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಉಷ್ಣಾಂಶ ಹೆಪ್ಪುಗಟ್ಟುವ ಸ್ಥಿತಿಗಿಂತ ಕೆಳಮಟ್ಟದಲ್ಲೇ ದಾಖಲಾಗಿದೆ. ಗುಲ್ಮಾರ್ಗ್‌ನಲ್ಲಿ ಮೈನಸ್‌ 7 ಡಿ.ಸೆ., ಅಮರನಾಥ್‌ ಯಾತ್ರೆಯ ಬೇಸ್‌ ಕ್ಯಾಂಪ್‌ ಆದಂತಹ ಪಹಲ್ಗಾಮ್‌ನಲ್ಲಿ ಮೈನಸ್‌ 8.6 ಡಿ.ಸೆ., ಕೋಕೆರ್ನಾಗ್‌ ಮತ್ತು ಕ್ವಾಜಿಗುಂಡ್‌ಗಳಲ್ಲಿ ಮೈನಸ್‌ 3.7 ಡಿ.ಸೆ., ಜಮ್ಮು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಮೈನಸ್‌ 4.9 ಡಿ.ಸೆ., ಲಡಾಕ್‌ನ ಲೇಹ್‌ನಲ್ಲಿ ಮೈನಸ್‌ 14.5 ಡಿ.ಸೆ., ಜಮ್ಮುವಿನಲ್ಲಿ ಮೈನಸ್‌ 7.3 ಡಿ.ಸೆ., ಕಟ್ರಾದಲ್ಲಿ ಮೈನಸ್‌ 6.1 ಡಿ.ಸೆ. ತಾಪಮಾನ ದಾಖಲಾಗಿದೆ.

ಜಮ್ಮು ಕಾಶ್ಮೀರ ವಲಯದಲ್ಲಿ ಅತ್ಯಂತ ಭೀಕರ ಚಳಿ ಇರುವ 40 ದಿನಗಳ 'ಚಿಲ್ಲಾ ಐ ಕಲನ್‌' ಮುಕ್ತಾಯವಾಗಿದ್ದು, ಇನ್ನು 1 ತಿಂಗಳಿನಲ್ಲಿ ಚಳಿ ನಿಧಾನವಾಗಿ ಕಡಿಮೆಯಾಗುತ್ತಾ ಸಾಗುತ್ತದೆ. ಫೆ.14ರವರೆಗೂ ಪ್ರಸ್ತುತ ಇರುವ ಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹಲವು ತಲೆಮಾರುಗಳ ಕನಸು ಕಳೆದ 10 ವರ್ಷಗಳಲ್ಲಿ ನನಸು: ಮೋದಿ